ಭಾರತದಿಂದ ಬಿಟ್ರನ್‌ಗೆ ಹೋಗಿದ್ದು 5000 ಲಕ್ಷ ಕೋಟಿ!!
ಬಿಲಿಯನೇರ್ ಗಳ ಸಂಖ್ಯೆ 2760ಕ್ಕೇರಿಕೆ!!
ದಾವೋಸ್‌ನಲ್ಲಿ ಆರಂಭವಾಗಿರುವ ವಿಶ್ವ ಆರ್ಥಿಕ ಫೋರಂನಲ್ಲಿ , ‘ಆಕ್ಸ್‌ಫಾಮ್ ಇಂಟರ್‌ನ್ಯಾಷನ್’ ಸಂಸ್ಥೆ ‘ಟೇಕರ್ಸ್ ನಾಟ್ ಮೇಕರ್ಸ್’ ಎಂಬ ಹೆಸರಿನ ವರದಿ ಬಿಡುಗಡೆ ಮಾಡಿದೆ. ವಸಹಾತುಶಾಹಿ ಕಾಲದಲ್ಲಿ ಯಾವ ರೀತಿ ಲೂಟಿ ನಡೆಯುತ್ತಿತ್ತೋ ಅಂಥದ್ದೇ ಲೂಟಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಿವೆ. ಸಂಪತ್ತು ಕೆಲವೇ ಕೆಲವರ ಕೈಯಲ್ಲಿ ಕ್ರೋಡೀಕರಣವಾಗುತ್ತಿದೆ ಎಂದು ಈ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಅರಕಾನ್ ಆರ್ಮಿಯ ಆಟ ಶುರು – ಬಾಂಗ್ಲಾದ 3 ಹಡಗು ವಶಕ್ಕೆ!
ಬ್ರಿಟನ್ ಭಾರತದಿಂದ ದೋಚಿದ್ದು 5,609 ಲಕ್ಷ ಕೋಟಿ!
1765-1900ರ ನಡುವಿನ ವಸಾಹತುಶಾಹಿ ಅವಧಿಯಲ್ಲಿ ಭಾರತವೊಂದರಿಂದಲೇ 5,609 ಲಕ್ಷ ಕೋಟಿ ರು. ಅನ್ನು ಬ್ರಿಟನ್ ಲೂಟಿಹೊಡೆದಿದೆ. ಇದರಲ್ಲಿ 2,925 ಲಕ್ಷ ಕೋಟಿ ರು.ನಷ್ಟು ಸಂಪತ್ತು ಶೇ.10ರಷ್ಟಿದ್ದ ಬ್ರಿಟನ್ ಶ್ರೀಮಂತರ ಪಾಲಾಗಿದೆ ಎಂದು ‘ಆಕ್ಸ್‌ಫಾಮ್ ಇಂಟರ್‌ನ್ಯಾಷನ್’ ಸಂಸ್ಥೆಯ ವಿಶ್ವ ಅಸಮಾನತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಪ್ರಮಾಣ ಎಷ್ಟು ಎಂದರೆ 50 ಪೌಂಡ್‌ನ ನೋಟುಗಳಲ್ಲಿ ಲಂಡನ್ ನಗರವನ್ನು 3 ಬಾರಿ ಮುಚ್ಚುವಷ್ಟು ಎಂದು ಆಕ್ಸ್ ಫಾಮ್ ವರದಿ ತಿಳಿಸಿದೆ. ನಿಜಕ್ಕೂ ಆ ಸಂಪತ್ತು ನಮ್ಮಲ್ಲೇ ಇದಿದ್ರೆ ನಾವು ಕೂಡ ಯಾರಿಗೂ ಕಮ್ಮಿ ಇಲ್ಲದಂತೆ ಇರುತ್ತಿದ್ದೇವು. ನಮ್ಮಲ್ಲಿ ಇರೋ ಬಡತ ಕಮ್ಮಿಯಾಗುತಿತ್ತು.. ಆದ್ರೆ ಬ್ರಿಟಿಷರು ಎಲ್ಲವನ್ನೂ ಕೊಳ್ಳೆ ಹೊಡೆದುಕೊಂಡು ಹೋಗಿ ಉದ್ಧಾರ ಆಗಿದ್ದಾರೆ.. ನಾವು ಇನ್ನೂ ಬಡತನದಲ್ಲಿ ಬಳಲಿ ಬೆಂಡಾಗಿ ಹೋಗಿದ್ದೇವೆ..
ಕುಟುಂಬದಿಂದ ಕುಟುಂಬಕ್ಕೆ ಹಸ್ತಾಂತರ
ವಿಶ್ವದ ಶೇ.60ರಷ್ಟು ಶತಕೋಟ್ಯಧೀಶರ ಸಂಪತ್ತಿಗೆ ಪಿತ್ರಾರ್ಜಿತ, ಏಕಸ್ವಾಮ್ಯ ಮತ್ತು ಬಂಡವಾಳಶಾಹಿ ಸಂಪರ್ಕಗಳೇ ಮೂಲ. 2034ರಲ್ಲಿ 4.5 ಲಕ್ಷ ಕೋಟಿ ರುಪಾಯಿ ಇವರಿಂದ ಮುಂದಿನ ತಲೆಮಾರಿಗೆ ಹಸ್ತಾಂತರವಾಗುತ್ತದೆ ಎಂದು ಅಂದಾಜಿಸಿರುವ ವರದಿ, ಈ ಮೂಲಕ ಸಂಪತ್ತು ಮುಂದೆಯೂ ಕೆಲವೇ ಕೆಲವರ ಕೈಯಲ್ಲಿ ಜಾಸ್ತಿ ಆಗುತ್ತಾ ಹೋಗುತ್ತೆ ಎಂದಿದೆ.
ಕೈಗಾರಿಕಾ ಉತ್ಪಾದನೆಯಲ್ಲಿ ಶೇ.2ಕ್ಕೆ ಕುಸಿತ
1750ರಲ್ಲಿ ಭಾರತ ಉಪಖಂಡವು ಅಂತಾರಾಷ್ಟ್ರೀಯ ಕೈಗಾರಿಕಾ ಉತ್ಪಾದನೆಯಲ್ಲಿ ಶೇ.25ರಷ್ಟು ಪಾಲು ಹೊಂದಿತ್ತು. ಅಂದರೆ ದೊಡ್ಡ ಪಾಲು ಭಾರತದ್ದೇ ಆಗಿತ್ತು. ಆದರೆ 1900ರಲ್ಲಿ ಇದು ಶೇ.2ಕ್ಕೆ ಕುಸಿಯಿತು. ಇದಕ್ಕೆ ಬ್ರಿಟಿಷರು ಏಷ್ಯಾದ ಜವಳಿ ಉದ್ಯಮದ ವಿಚಾರವಾಗಿ ಅನುಸರಿಸಿದ ನೀತಿಗಳೇ ಕಾರಣ ಎಂದು ಆಕ್ಸ್ ಫಾಮ್ ತಿಳಿಸಿದೆ.
ಬಿಲಿಯನೇರ್‌ಗಳ ಸಂಪತ್ತು 3 ಪಟ್ಟು ಹೆಚ್ಚಳ
ವಿಶ್ವದಲ್ಲಿ ಬಿಲಿಯನೇರ್‌ಗಳ ಸಂಪತ್ತು ಹೆಚ್ಚಾಗುತ್ತಿದೆ. 2024 ವರ್ಷವೊಂದರಲ್ಲೇ ಬಿಲಿಯನೇರ್‌ಗಳ ಸಂಪತ್ತು 1.7 ಲಕ್ಷ ಕೋಟಿ ಲಕ್ಷದಷ್ಟು ಹೆಚ್ಚಾಗಿದೆ. ಅವರ ಒಟ್ಟಾರೆ ಸಂಪತ್ತು 13 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು ಮೂರು ಪಟ್ಟು ವೇಗವಾಗಿ ಈ ಹೆಚ್ಚಳ ಆಗಿದೆ ಎಂದು ಆಕ್ಸ್‌ಫಾಮ್ ವರದಿ ತಿಳಿಸಿದೆ.
ಏಷ್ಯಾದಲ್ಲಿ ಶ್ರೀಮಂತರ ಸಂಪತ್ತು 25 ಲಕ್ಷ ಕೋಟಿ ರೂ.ಗೆ ಏರಿಕೆ
ಏಷ್ಯಾದಲ್ಲಿ ಶ್ರೀಮಂತರ ಸಂಪತ್ತು 25 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2024ರಲ್ಲಿ ಹೊಸದಾಗಿ 204 ಮಂದಿ ಹೊಸ ಬಿಲಿಯನೇರ್‌ಗಳು ಹುಟ್ಟಿಕೊಂಡಿದ್ದಾರೆ. ಹೀಗಾಗಿ ಒಟ್ಟು ಬಿಲಿಯನೇರ್‌ಗಳ ಸಂಖ್ಯೆ 2,769ಕ್ಕೆ ತಲುಪಿದೆ. ಅಲ್ಲದೇ ಪ್ರತಿ ವಾರ 4 ಮಂದಿ ಹೊಸ ಬಿಲಿಯನೇರ್‌ಗಳು ಸೃಷ್ಟಿಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ.
3ನೇ ಸ್ಥಾನಕ್ಕೆ ಕುಸಿದ ಭಾರತ
ಸರ್ಕಾರ, ಎನ್‌ಜಿಒ, ಉದ್ಯಮ ಮತ್ತು ಮಾಧ್ಯಮಗಳ ಮೇಲೆ ಜನರಿಗೆ ಇರುವ ನಂಬಿಕೆಯ ವಿಷಯದಲ್ಲಿ ಭಾರತ 1 ಸ್ಥಾನ ಕಳೆದುಕೊಂಡು 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಶ್ರೀಮಂತರಿಗಿಂತ, ಬಡವರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಎಡೋಲ್‌ವುನ್ ಟ್ರಸ್ಟ್ ಬ್ಯಾರೋಮೀಟರ್ ವರದಿ ತಿಳಿಸಿದೆ.
ಕೇಂದ್ರದ ಐವರು ಸಚಿವರು ಭಾಗಿ
ದಾವೋಸ್‌ನಲ್ಲಿ ಸೋಮವಾರದಿಂದ 5 ದಿನಗಳ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ಆರಂಭವಾಗಿದೆ. ಈ ವರ್ಷ ಭಾರತದಿಂದ ಹಿಂದೆಂದಿಗಿಂತಲೂ ದೊಡ್ಡ ನಿಯೋಗವು ಈ ಸಭೆಯಲ್ಲಿ ಭಾಗವಹಿಸಿದ್ದು, ಕೇಂದ್ರದ 5 ಸಚಿವರು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳು, ಸುಮಾರು 100 ಸಿಇಒಗಳು ಹಾಗೂ ಹಲವು ಕ್ಷೇತ್ರಗಳ ಗಣ್ಯರು ಭಾಗಿಯಾಗಿದ್ದಾರೆ. ವಿಶ್ವದ ದೇಶಗಳ ಮುಂದೆ ಭಾರತದ “ವೈವಿಧ್ಯತೆಯಲ್ಲಿ ಏಕತೆ’ಯು ಪ್ರತಿಬಿಂಬಿಸಲಿದೆ. ಅಲ್ಲದೇ 130 ದೇಶಗಳಿಂದ 3000ಕ್ಕೂ ಹೆಚ್ಚು ಮಂದಿ ಗಣ್ಯರು ಆರ್ಥಿಕ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಸಿಎಂಗಳು ತಮ್ಮ ತಮ್ಮ ರಾಜ್ಯಗಳಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನೂ ಹಾಕಿಕೊಂಡಿದ್ದು, ಜಗತ್ತಿನ ಪ್ರಮುಖ ಕಂಪನಿಗಳ ಸಿಇಒಗಳ ಜತೆ ಮಾತುಕತೆ ನಡೆಸಲಿದ್ದಾರೆ. ಆದ್ರೆ ಸಭೆಯಲ್ಲಿ ಇಡೀ ದೇಶದ ಗಮನ ಸೆಳೆದಿದ್ದು, ಭಾರತಕ ಸಂಪತ್ತು.. ಒಂದಮ್ಮೆ ನಮ್ಮನ್ನ ಯಾರು ಕೊಳ್ಳೆ ಹೊಡೆದಿಲ್ಲ ಅಂದ್ರೆ,ನೀವು ಇಷ್ಟುತ್ತಿಗೆ ದೊಡ್ಡ ಶ್ರೀಮಂತರಾಗಿ ಇರುತಿದ್ದರು.