ಕೈಗೆ ಕಚ್ಚಿದ ಮುದ್ದಿನ ಬೆಕ್ಕು – ಚಿಕಿತ್ಸೆ ಪಡೆದರೂ ಬದುಕಲೇ ಇಲ್ಲ ಮಾಲೀಕ..!
ಬೆಕ್ಕು ಕಚ್ಚಿ ನಾಲ್ಕು ವರ್ಷವಾದ ಬಳಿಕ 15 ಆಪರೇಷನ್ –ಏನಾಗಲ್ಲ ಎಂದುಕೊಂಡವನ ಪ್ರಾಣವೇ ಹೋಯ್ತು..!

ಕೈಗೆ ಕಚ್ಚಿದ ಮುದ್ದಿನ ಬೆಕ್ಕು – ಚಿಕಿತ್ಸೆ ಪಡೆದರೂ ಬದುಕಲೇ ಇಲ್ಲ ಮಾಲೀಕ..!ಬೆಕ್ಕು ಕಚ್ಚಿ ನಾಲ್ಕು ವರ್ಷವಾದ ಬಳಿಕ 15 ಆಪರೇಷನ್ –ಏನಾಗಲ್ಲ ಎಂದುಕೊಂಡವನ ಪ್ರಾಣವೇ ಹೋಯ್ತು..!

ಡೆನ್ಮಾರ್ಕ್‌: ನಾಯಿ ಕಚ್ಚಿದರೆ ಡೇಂಜರ್ ಅಂತಾರೆ. ಆದರೆ, ಸಾಕು ಪ್ರಾಣಿಗಳಲ್ಲಿ ಬೆಕ್ಕು ಕಚ್ಚಿದರೂ ಕೂಡಾ ಅಪಾಯವೇ. ಬೆಕ್ಕಲ್ವಾ ಕಚ್ಚಿದ್ದು ಅಂತಾ ನಿರ್ಲಕ್ಷ್ಯ ಮಾಡಿದರೆ ಜೀವವೇ ಹೋಗಬಹುದು ಎಚ್ಚರ. ಇದಕ್ಕೆ ಇಲ್ಲೊಬ್ಬರ ಜೀವನವೇ ಸಾಕ್ಷಿ. ಡೆನ್ಮಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, 33 ವರ್ಷದ ವ್ಯಕ್ತಿಯೊಬ್ಬರು ತಾನು ಸಾಕಿದ ಬೆಕ್ಕಿನಿಂದ ಕಚ್ಚಿಸಿಕೊಂಡು, ಎಷ್ಟೇ ಚಿಕಿತ್ಸೆ ಪಡೆದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ:  ಮಗುವನ್ನು ನುಂಗಿ ಹೊರಗೆ ಉಗುಳಿದ ಹಿಪ್ಪೋ..! – ಕಂದ ಬದುಕಿದ್ದೇ ದೊಡ್ಡ ಪವಾಡ..!  

ಡೆನ್ಮಾರ್ಕ್ ನ 33 ವರ್ಷದ ವ್ಯಕ್ತಿ ಹೆನ್ರಿಕ್ ಎಂಬವರು ಬೆಕ್ಕು ಕಡಿತಕ್ಕೆ ಬಲಿಯಾದ ವ್ಯಕ್ತಿ. ಸುಮಾರು ನಾಲ್ಕು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಹೆನ್ರಿಚ್ ಅವರಿಗೆ ಮನೆಯಲ್ಲಿ ಸಾಕಿದ್ದ ಬೆಕ್ಕು ಬೆರಳಿಗೆ ಕಚ್ಚಿತ್ತು. ತಾನು ಸಾಕಿದ ಬೆಕ್ಕು ಏನೂ ಆಗಲ್ಲ ಎಂದು ಹೆನ್ರಿಚ್ ಮೊದಲು ಯಾವುದೇ ಚಿಕಿತ್ಸೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಬಳಿಕ ಹಂತ-ಹಂತವಾಗಿ ಬೆರಳು ನೋವು ಕಾಣಿಸಿಕೊಂಡಿದೆ. ತದನಂತರ ಹೆನ್ರಿಕ್, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೂ ಸಹ ನೋವು ಕಡೆಮೆಯಾಗದೇ ಬೇರೆ ಬೇರೆ ತೊಂದರೆಗಳು ಕಾಣಿಸತೊಡಗಿತ್ತು. ನಂತರ ಅವರು ಆಸ್ಪತ್ರೆಗೆ ದಾಖಲಾದರು. ಅಂತಿಮವಾಗಿ ಊದಿಕೊಂಡಿದ್ದ ಬೆರಳನ್ನು ಕತ್ತರಿಸಬೇಕಾಯಿತು. ಆದರೆ ಇಷ್ಟೆಲ್ಲಾ ಮಾಡಿದರೂ ವಿಷ ಕಡಿಮೆಯಾಗಲಿಲ್ಲ. ಬದಲಿಗೆ ವಿಷ ಹೆನ್ರಿಚ್ನ ದೇಹದ ತುಂಬೆಲ್ಲ ಪಸರಿಸಿದೆ. ಊದಿಕೊಂಡಿದ್ದ ಬೆರಳು ಕತ್ತರಿಸಿದ ಬಳಿಕ ಅವರ ಇಡೀ ಕೈ ಊದಿಕೊಂಡಿತು.ಇದರಿಂದ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದ ಅವರಿಗೆ ಸುಮಾರು 15 ಆಪರೇಷನ್‌ಗಳನ್ನು ಸಹ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೇ ಹೆನ್ರಿಚ್ ಕೊನೆಯುಸೆರೆಳೆದಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ಬೆಕ್ಕು ಕಚ್ಚಿದ್ದರೂ, ಬ್ಯಾಕ್ಟೀರಿಯಾದಿಂದ ಸೋಂಕು ಆಗಿತ್ತು. ಅದನ್ನು ಕ್ರಮೇಣ ನಿಯಂತ್ರಿಸಲಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ಬಗ್ಗೆ ಮೃತ ಹೆನ್ರಿಕ್ನ  ತಾಯಿ ಅಲ್ಲಿನ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಚಿಕಿತ್ಸೆ ಕೊಡಿಸಿದರ ಹೊರತಾಗಿಯೂ ಹೆನ್ರಿಚ್ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ಬೆಕ್ಕು ಸರಿಯಾಗಿ ರಕ್ತನಾಳಕ್ಕೆ ಕಚ್ಚಿದ್ದು, ರಂಧ್ರ ಬಿದ್ದಿದೆ. ಬಳಿಕ ಬ್ಯಾಕ್ಟೀರಿಯಾದಿಂದ ಸೋಂಕು ಆಗಿದೆ. ಆ ಬ್ಯಾಕ್ಟೀರಿಯಾ ಸೋಂಕು ರಕ್ತನಾಳದ ಮೂಲಕ ದೇಹ  ಪ್ರವೇಶಿಸಿದೆ. ಬಳಿಕ ಸೋಂಕು ದೇಹದ ತುಂಬ ಹರಡಿದೆ ಎಂದಿದ್ದಾರೆ.

suddiyaana