ಬಿಜೆಪಿ ನಾಯಕರ ಅವಲೋಕನಾ ಸಭೆ – ವಿಪಕ್ಷನಾಯಕ, ರಾಜ್ಯಾಧ್ಯಕ್ಷರ ರೇಸ್ ​ನಲ್ಲಿ ಯಾರ್ಯಾರ ಹೆಸರು?

ಬಿಜೆಪಿ ನಾಯಕರ ಅವಲೋಕನಾ ಸಭೆ – ವಿಪಕ್ಷನಾಯಕ, ರಾಜ್ಯಾಧ್ಯಕ್ಷರ ರೇಸ್ ​ನಲ್ಲಿ ಯಾರ್ಯಾರ ಹೆಸರು?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಆಘಾತದಲ್ಲಿರೋ ಬಿಜೆಪಿ ನಾಯಕರು ನೂತನ ಶಾಸಕರ ಅಭಿನಂದನಾ ಸಮಾರಂಭ ಮತ್ತು ಅವಲೋಕನಾ ಸಭೆ ನಡೆಸಿದ್ರು. ಸಭೆಯಲ್ಲಿ ವಿಪಕ್ಷನಾಯಕನ ಆಯ್ಕೆ, ರಾಜ್ಯಾಧ್ಯಕ್ಷನ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಹಾಗೇ ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಯ್ತು.

ಈಗಾಗಲೇ ವಿಪಕ್ಷ ನಾಯಕ ಸ್ಥಾನಕ್ಕೆ ಹಲವು ಹೆಸರುಗಳು‌ ಬಿಜೆಪಿಯಲ್ಲಿ ಮುಂಚೂಣಿಯಲ್ಲಿದೆ. ಹಲವು ಘಟಾನುಘಟಿ ನಾಯಕರ ಸೋಲಿಂದ ಬಿಜೆಪಿಗೆ ದೊಡ್ಡ ಹಿನ್ನಡೆಯಾದ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಆಯ್ಕೆ ಕಗ್ಗಂಟಾಗಿದೆ. ಸದನದಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಕಟ್ಟಿ ಹಾಕುವುದು ಹಾಗೂ ಸದನದ ಹೊರಗೂ ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸುವುದು ಅಗತ್ಯವಾಗಿದೆ. ಹೀಗಾಗಿ ಯಾರನ್ನು ವಿಪಕ್ಷ ನಾಯಕ ಮಾಡಬೇಕೆಂಬ ಗೊಂದಲದಲ್ಲಿ ಬಿಜೆಪಿ ಇದೆ. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಸ್ಥಾನಮಾನಕ್ಕೆ ಜಾತಿ ಲೆಕ್ಕಾಚಾರದ ಆಧಾರದಲ್ಲೂ ನಡೆಯುತ್ತಿದೆ.

ಇದನ್ನೂ ಓದಿ : ‘ಕೆಲ ಪಾಠಗಳನ್ನ ಮಾಡದಂತೆ ಶಿಕ್ಷಕರಿಗೆ ಸೂಚಿಸುತ್ತೇವೆ’ – ಪಠ್ಯಪರಿಷ್ಕರಣೆ ಮಾಡಿಯೇ ತೀರುತ್ತೇವೆಂದ ಸಚಿವ ಮಧು ಬಂಗಾರಪ್ಪ

ವಿಪಕ್ಷ ನಾಯಕನ ಹುದ್ದೆಗೆ ಲಿಂಗಾಯೇತರ ಸಮುದಾಯಗಳು ನಾಯಕರಿಂದ ಪಟ್ಟು ಹಿಡಿದಿದ್ದಾರೆ. ರೇಸ್‌ ನಲ್ಲಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್, ಅಶ್ವತ್ಥ ನಾರಾಯಣ, ಆರ್ ಅಶೋಕ್, ಸುರೇಶ್ ಕುಮಾರ್, ಸುನೀಲ್ ಕುಮಾರ್ ಹೆಸರುಗಳು ಮುಂಚೂಣಿಯಲ್ಲಿವೆ. ವಿಪಕ್ಷ ನಾಯಕ ಆಯ್ಕೆಗೆ ಶಾಸಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಶಾಸಕರ ಅಭಿಪ್ರಾಯವನ್ನು ಅರುಣ್ ಸಿಂಗ್ ಪಡೆದುಕೊಂಡು ಹೈಕಮಾಂಡ್ ಗೆ ತಲುಪಿಸಲಿದ್ದಾರೆ. ಬಳಿಕ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ.

ಇದೇ ವೇಳೆ ವಿಧಾನಸಭೆ ಚುನಾವಣೆಯಲ್ಲಿ‌ ಹೀನಾಯ ಸೋಲು‌ ಅನುಭವಿಸಿರುವ ಬಿಜೆಪಿ ಇದೀಗ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಮುಂದಾಗಿದೆ. ಶಾಸಕರಿಗೆ ಈ ಬಗ್ಗೆ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಹೋರಾಟವನ್ನು ರೂಪಿಸಬೇಕು ಎಂಬ ನಿಟ್ಟಿನಲ್ಲಿಯೂ ಶಾಸಕರಿಗೆ ನಾಯಕರು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆಗೆ ಶಾಸಕರಿಗೆ ಗುರಿ ನೀಡುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾಗೇ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಗಿದೆ. ವಿಧಾನಾಸಭೆ ಚುನಾವಣಾ ಸಂದರ್ಭದಲ್ಲಿ ಏನೆಲ್ಲಾ ಮಾಡಬಹುದಿತ್ತು ಅನ್ನುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಹೇಳಿದರು.

suddiyaana