9 ಲಕ್ಷ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗಿಲ್ಲ – ತಾಂತ್ರಿಕ ಕಾರಣಗಳನ್ನ ಒಪ್ಪಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

9 ಲಕ್ಷ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗಿಲ್ಲ – ತಾಂತ್ರಿಕ ಕಾರಣಗಳನ್ನ ಒಪ್ಪಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ ತಿಂಗಳ ಕೊನೇ ವಾರ ಚಾಲನೆ ನೀಡಲಾಗಿತ್ತು.. ಸೆಪ್ಟೆಂಬರ್ ಮೊದಲ ವಾರದಲ್ಲಿ ಮೊದಲನೇ ಕಂತಿನ 2 ಸಾವಿರ ರೂಪಾಯಿ  ಫಲಾನುಭವಿಗಳ ಖಾತೆಗೆ ಜಮೆ ಆಗಿತ್ತು. ಆದ್ರೀಗ ಅಕ್ಟೋಬರ್ ಎರಡನೇ ವಾರ ಕಳೆಯುತ್ತಾ ಬಂದ್ರೂ ಎರಡನೇ ಕಂತಿನ ಹಣ ಜಮೆ ಆಗಿಲ್ಲ. ಬರೋಬ್ಬರಿ ಒಂಬತ್ತೂವರೆ ಲಕ್ಷ ಅರ್ಜಿದಾರರಿಗೆ ಈವರೆಗೂ ಹಣವೇ ಸಂದಾಯವಾಗಿಲ್ಲ. ಇದನ್ನ ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ಬಿಜೆಪಿ ಶಾಸಕರ ಅನುದಾನ ಕಿತ್ತು ಕಾಂಗ್ರೆಸ್ ಶಾಸಕರಿಗೆ ಕೊಟ್ಟ ಸರ್ಕಾರ – ‘ಗ್ಯಾರಂಟಿ’ಗಾಗಿ ಪೇಚಿಗೆ ಸಿಲುಕಿತಾ ಸರ್ಕಾರ?

ಆಗಸ್ಟ್ 30ರಂದು ಯೋಜನೆಗೆ ಚಾಲನೆ ದೊರಕಿದ್ದು, ಅದೇ ದಿನ ಮೊದಲನೇ ಕಂತಿನ ಹಣ ಬಿಡುಗಡೆಯಾಗಿತ್ತು.   ಆಗಸ್ಟ್ 31ರಂದು ಹೆಸರು ನೋಂದಣಿ ಮಾಡಿಸಿದವರ ಮೊಬೈಲ್ ಸಂಖ್ಯೆಗಳಿಗೆ ಸಂದೇಶ ರವಾನೆಯಾಗಿತ್ತು. ಸೆಪ್ಟೆಂಬರ್ 1ರಂದು ಬಹುತೇಕರ ಖಾತೆಗಳಿಗೆ ಹಣ ಜಮೆಯಾಗಿತ್ತು. ಆದ್ರೆ ಇನ್ನೂ ಕೆಲವರಿಗೆ ಈಗಲೂ ನಯಾಪೈಸೆ ಸಿಕ್ಕಿಲ್ಲ. ಇದುವರೆಗೂ 9.44 ಲಕ್ಷ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ. ಹೀಗಾಗಿ ಫಲಾನುಭವಿಗಳು ಬ್ಯಾಂಕುಗಳಿಗೆ ನಿತ್ಯ ಅಲೆದಾಡುತ್ತಿದ್ದಾರೆ. ಹಣ ಜಮೆ ಆಗದಿರಲು ಕಾರಣ ಅರ್ಜಿ ಸಲ್ಲಿಸುವಾಗ ಫಲಾನುಭವಿಗಳು ನೀಡಿರುವ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿರುವುದು, ಕೆವೈಸಿ ಪರಿಶೀಲನೆ ಆಗದಿರುವುದು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿಲ್ಲದಿರುವುದು ಸೇರಿದಂತೆ ತಾಂತ್ರಿಕ ಕಾರಣ ಅಂತಾ ಹೇಳಲಾಗ್ತಿದೆ. ಆಧಾರ್ ಮತ್ತು ಬ್ಯಾಂಕ್ ಖಾತೆಗಳಲ್ಲಿನ ಅರ್ಜಿದಾರರ ಹೆಸರುಗಳಲ್ಲಿನ ವ್ಯತ್ಯಾಸಗಳು. ಅರ್ಜಿದಾರರ ಹೆಸರು ಮತ್ತು ವಿಳಾಸಗಳಲ್ಲಿ ಹೊಂದಾಣಿಕೆಯಾಗದಿರುವುದು ಸಮಸ್ಯೆಯಾಗಿದ್ಯಂತೆ. ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ ಪಡೆಯಲು ಅರ್ಹರಾಗಿರಬೇಕು. ಫಲಾನುಭವಿಯ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿಸಬೇಕು. ಲಿಂಕ್ ಆಗಿದ್ದರೆ ಮಾತ್ರ ಗೃಹಲಕ್ಷ್ಮೀ ಯೋಜನೆಯನ್ನು ನಿಮಗೆ ಹಣ ಸಿಗುತ್ತೆ.  ಲಿಂಕ್ ಮಾಡದಿದ್ದರೆ ಯೋಜನೆಯ ಹಣ ನಿಮ್ಮ ಅಕೌಂಟಿಗೆ ಪಾವತಿ ಆಗುವುದಿಲ್ಲ.

ಹೀಗಿದ್ರೂ ಗೃಹಲಕ್ಷ್ಮಿ ನೋಂದಣಿಯಾಗಿದ್ದವರ ಪೈಕಿ ಸಾಕಷ್ಟು ಮಹಿಳೆಯರಿಗೆ ಹಣವೇ ಬಂದಿಲ್ಲ. ಈ ಬಗ್ಗೆ ಅರ್ಜಿ ಸಲ್ಲಿಸಿದ ಮಹಿಳೆಯರು ಬೇಸರಗೊಂಡಿದ್ದಾರೆ. ಸರ್ಕಾರ ಮೋಸ ಮಾಡಿದೆ ಎಂದು ಕಿಡಿಕಾರಿದೆ. ಇನ್ನು ಮಹಿಳೆಯರು ನಿತ್ಯ ಗ್ರಾಮ್‌ ಒನ್‌, ಕರ್ನಾಟಕ ಒನ್‌ ಕೇಂದಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕೆಲ ಮಹಿಳೆಯರಿಗೆ 2ನೇ ಕಂತಿನ ಹಣ ಕೈ ಸೇರಿಲ್ಲ.  ಹೀಗಾಗಿ ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದ್ದು ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ.  ಹೀಗಾಗಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ, ಅಕೌಂಟ್ ನಂಬರ್, ಆಧಾರ್ ನಂಬರ್ ಲಿಂಕ್, ಹೆಸರು, ವಿಳಾಸ ಸೇರಿದಂತೆ ಎಲ್ಲಾ ವಿವರಗಳನ್ನ ಸರಿಯಾಗಿ ನೋಂದಣಿ ಮಾಡಬೇಕಿದೆ. ಜೊತೆಗೆ ಕೆಲ ತಾಂತ್ರಿಕ ದೋಷಗಳೂ ಇರೋದ್ರಿಂದ ಕೆಲವರಿಗೆ ಹಣ ಜಮೆ ಆಗುವುದು ತಡ ಕೂಡ ಆಗ್ತಿದೆ. ಇದು ಫಲಾನುಭವಿಗಳ ಆತಂಕಕ್ಕೆ ಕಾರಣವಾಗಿದೆ.

 

Shantha Kumari