ಪುರಿ ಜಗನ್ನಾಥ ರಥೋತ್ಸವದಲ್ಲಿ ಕಾಲ್ತುಳಿತ – 600ಕ್ಕೂ ಹೆಚ್ಚು ಭಕ್ತರಿಗೆ ಗಾಯ, 10 ಜನರ ಸ್ಥಿತಿ ಗಂಭೀರ

ಒಡಿಶಾದ ಪುರಾಣಪ್ರಸಿದ್ಧ ಪುರಿ ಜಗನ್ನಾಥನ ಸನ್ನಿಧಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಸಾಕಷ್ಟು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಜನರು ಆಸ್ಪತ್ರೆಗೆ ಸೇರಿಸಲಾಗಿದೆ. ಜಗನ್ನಾಥ ಯಾತ್ರೆಯ ಮೊದಲ ದಿನದ ರಥಯಾತ್ರೆ ಕಣ್ತುಂಬಿಕೊಳ್ಳಲು ದೇಶ- ವಿದೇಶಗಳ ಲಕ್ಷಾಂತರ ಭಕ್ತರು ಸೇರಿದ್ದ ವೇಳೆ ಕಾಲ್ತುಳಿತ ಸಂಭವಿಸಿದೆ.
ಇನ್ನು ರಥಯಾತ್ರೆಯಲ್ಲಿ ಗಾಯಗೊಂಡ 600ಕ್ಕೂ ಹೆಚ್ಚು ಭಕ್ತರನ್ನು ಚಿಕಿತ್ಸೆಗಾಗಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 173 ಜನರನ್ನು ಹೈ ಡಿಪೆಂಡೆನ್ಸಿ ಯೂನಿಟ್ಗೆ ದಾಖಲಿಸಲಾಗಿದ್ದು, 68 ಜನರಿಗೆ ಒಪಿಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. 10 ಭಕ್ತ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಾರ ಜನಸಂದಣಿ ನಿರ್ವಹಿಸಲು ಹಾಗೂ ಭದ್ರತೆ ವಹಿಸಲು CAPF ಸೇರಿದಂತೆ 10 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ.
ರಥಯಾತ್ರೆ ವೇಳೆ ಕಂಟ್ರೋಲ್ ತಪ್ಪಿದ ಆನೆಗಳು ಜನರತ್ತ ಅಡ್ಡಾದಿಡ್ಡಿ ಓಡಿವೆ. ಇದ್ರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಹರಸಾಹಸ ಪಟ್ಟು ಮಾವುತರು ಆನೆಗಳನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ದೊಡ್ಡ ಅನಾಹುತ ತಪ್ಪಿದೆ. ಒಡಿಶಾದ ಪುರಿ ಜಗನ್ನಾಥ ಕ್ಷೇತ್ರದಲ್ಲಿ ಒಟ್ಟು 9 ದಿನಗಳ ಕಾಲ ಉತ್ಸವ ನಡೆಯಲಿದೆ. ಸಾಮಾನ್ಯವಾಗಿ ವಾರ್ಷಿಕ ರಥಯಾತ್ರೆ ಸಂದರ್ಭದಲ್ಲಿ ಊಹೆಗೂ ನಿಲುಕದಂತೆ ಭಕ್ತಸಮೂಹ ಸೇರಲಿದ್ದು ಭಕ್ತರನ್ನ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಪ್ರತಿ ವರ್ಷವೂ ಅವಘಡಗಳು ನಡೆಯುತ್ತಲೇ ಇದ್ದು ಕಳವಳ ಹೆಚ್ಚಿಸಿದೆ.

ನೋಡಿರಿ

