ಶೇ.21 ರಷ್ಟು ತೆಲಂಗಾಣ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ- ಅಧ್ಯಯನ ವರದಿಯಿಂದ ಬಹಿರಂಗ

ಶೇ.21 ರಷ್ಟು ತೆಲಂಗಾಣ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ- ಅಧ್ಯಯನ ವರದಿಯಿಂದ ಬಹಿರಂಗ

ಹೈದರಾಬಾದ್: ರಾಜ್ಯದಾದ್ಯಂತ 8,980 (ಶೇ 21.2) ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯಗಳಿಲ್ಲ ಎಂದು ಶಿಕ್ಷಣ ಸಚಿವಾಲಯದ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಮ್ ಫಾರ್ ಎಜುಕೇಶನ್ (ಯುಡಿಐಎಸ್ಇ) ಒದಗಿಸಿದ ಅಂಕಿಅಂಶಗಳನ್ನು ಬಹಿರಂಗಗೊಂಡಿದೆ.

ಇದನ್ನೂ ಓದಿ:ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳಿಗೆ ಬಿಡುಗಡೆ ಭಾಗ್ಯ?

ಯುಡಿಐಎಸ್ಇ ನೀಡಿದ ಮಾಹಿತಿ ಪ್ರಕಾರ ತೆಲಂಗಾಣ ನಾಲ್ಕು ಇತರ ರಾಜ್ಯಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಒಡಿಶಾ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಈ ರಾಜ್ಯದ ಶಾಲೆಗಳಲ್ಲಿ ಬಾಲಕಿಯರಿಗಾಗಿ 50 ಪ್ರತಿಶತ ಶೌಚಾಲಯಗಳು ಬಳಕೆಗೆ ಯೋಗ್ಯವಲ್ಲ ಎಂದು ವರದಿಯಲ್ಲಿ ತಿಳಿಸಿದೆ.

ಮುಂಬೈ ಮೂಲದ ಸ್ಟ್ಯಾಟ್ಸ್ ಆಫ್ ಇಂಡಿಯಾ ದೃಶ್ಯೀಕರಿಸಿದ ಯುಡಿಐಎಸ್ಇ ಡೇಟಾ ಪ್ರಕಾರ, ರಾಷ್ಟ್ರೀಯ ಸರಾಸರಿ 5.3 ಶೇಕಡಾ ಅಂದರೆ 78,854 ಶಾಲೆಗಳು 70 ಲಕ್ಷಕ್ಕೂ ಹೆಚ್ಚು ಹುಡುಗಿಯರ ಆರೋಗ್ಯದ ಮೇಲೆ ಶೌಚಾಲಯ ವ್ಯವಸ್ಥೆ ಇಲ್ಲದೆ ಪರಿಣಾಮ ಬೀರುತ್ತಿದೆ.

“ಭಾರತದಾದ್ಯಂತ 14.9 ಲಕ್ಷ ಶಾಲೆಗಳಲ್ಲಿ 26.5 ಕೋಟಿ ಮಕ್ಕಳು ಓದುತ್ತಿದ್ದಾರೆ. ಅದರಲ್ಲಿ 48 ಪ್ರತಿಶತ ಹೆಣ್ಣುಮಕ್ಕಳು ಎಂದು ನಾವು ಭಾವಿಸಿದರೆ, 78,000 ಶಾಲೆಗಳು ಅಂದಾಜು 70 ಲಕ್ಷ ಹುಡುಗಿಯರನ್ನು ಹೊಂದಿದ್ದು, ಅವರು ಪ್ರತ್ಯೇಕ ಶೌಚಾಲಯಗಳ ಕೊರತೆಯಿಂದ ಬಳಲುತ್ತಿದ್ದಾರೆ”ಎಂದು ಸಂಸ್ಥೆಯ ಟ್ವೀಟ್ ತಿಳಿಸಿದೆ.

ಮಕ್ಕಳ ಹಕ್ಕುಗಳ ವಿಚಾರವಾಗಿ ಕಾರ್ಯನಿರ್ವಹಿಸುತ್ತಿರುವ ಎಂವಿ ಫೌಂಡೇಶನ್‌ನ ರಾಷ್ಟ್ರೀಯ ಸಂಚಾಲಕ ಆರ್.ವೆಂಕಟ್ ರೆಡ್ಡಿ ಮಾತನಾಡಿ, ಶೌಚಾಲಯಗಳ ಕೊರತೆ, ಹುಡುಗಿಯರು ಕೊಳಕು ಶೌಚಾಲಯಗಳನ್ನು ಬಳಸುವ ಭಯದಿಂದ ನೀರು ಕುಡಿಯುವುದನ್ನು ಅಥವಾ ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತಿದ್ದಾರೆ. ಇದರಿಂದಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದು ಅಮಾನವೀಯ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಮಾತ್ರವಲ್ಲದೆ ಇದರಿಂದ ಬಹಳಷ್ಟು ಹುಡುಗಿಯರು ಶಾಲೆಯಿಂದ ಹೊರಗುಳಿಯುತ್ತಾರೆ. ವಿಶೇಷವಾಗಿ ಅವರು ಮುಟ್ಟು ಪ್ರಾರಂಭವಾದಾಗ ಅವರು ಶಾಲೆಯಿಂದ ದೂರ ಉಳಿಯುತ್ತಾರೆ ಎಂದು ಹೇಳಿದರು.

ಶಿಕ್ಷಣ ಹಕ್ಕು ಕಾಯಿದೆ 2009 ರ ಪ್ರಕಾರ, ಶಾಲೆಗಳು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದನ್ನು ಕಡ್ಡಾಯಗೊಳಿಸಿದೆ. ಕಾಯಿದೆಯನ್ನು ಜಾರಿಗೆ ತರಲು ರಾಜ್ಯಗಳಿಗೆ ಐದು ವರ್ಷಗಳ ಕಾಲಾವಕಾಶವಿತ್ತು. ಆದರೆ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಇನ್ನೂ ಈ ವ್ಯವಸ್ಥೆ ಮಾಡುವಲ್ಲಿ ಹಿಂದುಳಿದಿವೆ.

suddiyaana