2040ರ ಹೊತ್ತಿಗೆ ಸಮುದ್ರಗಳಲ್ಲಿ 3 ಪಟ್ಟು ಹೆಚ್ಚಾಗುತ್ತೆ ಪ್ಲಾಸ್ಟಿಕ್ – ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ ಏನು..?

2040ರ ಹೊತ್ತಿಗೆ ಸಮುದ್ರಗಳಲ್ಲಿ 3 ಪಟ್ಟು ಹೆಚ್ಚಾಗುತ್ತೆ ಪ್ಲಾಸ್ಟಿಕ್ – ವಿಜ್ಞಾನಿಗಳು ಕೊಟ್ಟ ಎಚ್ಚರಿಕೆ ಏನು..?

ಆಧುನಿಕ ಜಗತ್ತು ಬೆಳೆದಂತೆಲ್ಲಾ ಪ್ರಕೃತಿ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈಗಾಗ್ಲೇ ಪ್ರವಾಹ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪಗಳು ಸಂಭವಿಸುತ್ತಲೇ ಇವೆ. ಇದೀಗ ಸಮುದ್ರಗಳಲ್ಲಿ ಪ್ಲಾಸ್ಟಿಕ್ ಪ್ರಮಾಣ ವಿಪರೀತ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಅದು ಅಪಾಯಕ್ಕೆ ಆಹ್ವಾನ ನೀಡಲಿದೆ ಅಂತಾ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗ್ಲೇ ಸಾಗರಗಳಲ್ಲಿ 171 ಟ್ರಿಲಿಯನ್ ಪ್ಲಾಸ್ಟಿಕ್ ಪತ್ತೆಯಾಗಿದ್ದು ಇದು ಹೀಗೇ ಮುಂದುವರಿದ್ರೆ 2040 ರ ವೇಳೆಗೆ ಸುಮಾರು ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ : ಮೆಗಾ ಸಿಟಿಗಳಲ್ಲಿ ವಿಪರೀತ ವಾಯುಮಾಲಿನ್ಯ – ಬೆಂಗಳೂರಿನ ಪೊಲ್ಯೂಷನ್ ಬಗ್ಗೆಯೂ ಆತಂಕ..!

ಹೊಸ ಅಧ್ಯಯನದ ಪ್ರಕಾರ 171 ಟ್ರಿಲಿಯನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಪೀಸ್​ಗಳು ವಿಶ್ವಾದ್ಯಂತ ಸಮುದ್ರಗಳನ್ನ ಸೇರಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು 1979 ಮತ್ತು 2019 ರ ನಡುವೆ ಅಟ್ಲಾಂಟಿಕ, ಪೆಸಿಫಿಕ್ ಮತ್ತು ಭಾರತೀಯ ಸಾಗರಗಳು ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿ ಅಧ್ಯಯನ ನಡೆಸಿದೆ. 2005ರಿಂದ ಈಚೆಗೆ ಸಮುದ್ರಗಳಲ್ಲಿ ಪ್ಲಾಸ್ಟಿಕ್ ಪ್ರಮಾಣ ತೀರಾ ಹೆಚ್ಚಳವಾಗ್ತಿದೆ ಎಂದು ತಿಳಿಸಿದೆ.

ಪ್ಲಾಸ್ಟಿಕ್ ಹೆಚ್ಚಳ ನಿಯಂತ್ರಣಕ್ಕೆ ಈಗಲೇ ಕ್ರಮ ಕೈಗೊಳ್ಳದಿದ್ದರೆ 2040 ರ ವೇಳೆಗೆ ಸಮುದ್ರ ಸೇರುವ ಪ್ಲಾಸ್ಟಿಕ್ ಪ್ರಮಾಣವು 2.6 ಪಟ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಿದ್ದಾರೆ. ಪ್ರತಿ ವರ್ಷ ಕೇವಲ 9% ಜಾಗತಿಕ ಪ್ಲಾಸ್ಟಿಕ್‌ಗಳನ್ನು ಮರುಬಳಕೆ ಮಾಡಲಾಗುತ್ತದೆ. ಆದ್ರೆ ಪ್ಲಾಸ್ಟಿಕ್ ಒಂದು ಸರಿ ಸಮುದ್ರ ಸೇರಿದರೆ ಅದು ಕೊಳೆಯುವುದಿಲ್ಲ. ಜೊತೆಗೆ ಸಮುದ್ರ ಸೇರಿದ ಪ್ಲಾಸ್ಟಿಕ್ ಅನ್ನು ಸ್ವಚ್ಛಗೊಳಿಸುವುದು ಸುಲಭವೂ ಅಲ್ಲ.

suddiyaana