ದೇಶದಲ್ಲಿ 13 ಲಕ್ಷ ಮಹಿಳೆಯರು ನಾಪತ್ತೆ –ರಾಜ್ಯದಲ್ಲಿ ಬರೋಬ್ಬರಿ 40 ಸಾವಿರ ಮಂದಿ ಮಿಸ್ಸಿಂಗ್!

ದೇಶದಲ್ಲಿ 13 ಲಕ್ಷ ಮಹಿಳೆಯರು ನಾಪತ್ತೆ –ರಾಜ್ಯದಲ್ಲಿ ಬರೋಬ್ಬರಿ 40 ಸಾವಿರ ಮಂದಿ ಮಿಸ್ಸಿಂಗ್!

ನವದೆಹಲಿ: ಕಳೆದ ಮೂರು ವರ್ಷದ ಅವಧಿಯಲ್ಲಿ ದೇಶದಲ್ಲಿ ಒಟ್ಟು 13.13 ಲಕ್ಷಕ್ಕೂ ಹೆಚ್ಚು ಯುವತಿಯರು ಹಾಗೂ ಮಹಿಳೆಯರು ಕಾಣೆಯಾಗಿದ್ದಾರೆ. ಕರ್ನಾಟಕದಲ್ಲಿ ಬರೋಬ್ಬರಿ 40 ಸಾವಿರ ಮಂದಿ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಂಕಿ ಅಂಶಗಳನ್ನು ಮಂಡಿಸಿದ ಕೇಂದ್ರ ಗೃಹ ಸಚಿವಾಲಯ, 2019 ರಿಂದ 2021ರವರೆಗೆ ದೇಶದಲ್ಲಿ 18 ವರ್ಷ ಮೇಲ್ಪಟ್ಟ10,61,638 ಮಹಿಳೆಯರು ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ 2,51,430 ಬಾಲಕಿಯರು ನಾಪತ್ತೆಯಾಗಿದ್ದಾರೆ.  2019ರಲ್ಲಿ 82,084 ಹುಡುಗಿಯರು ಮತ್ತು 3,42,168 ಮಂದಿ ನಾಪತ್ತೆಯಾಗಿದ್ದಾರೆ. ಕ್ರಮವಾಗಿ 2020ರಲ್ಲಿ 79,233 ಹುಡುಗಿಯರು ಮತ್ತು 34,44,22 ಮಹಿಳೆಯರು ನಾಪತ್ತೆಯಾಗಿದ್ದಾರೆ. ಆ ನಂತರ ಅಂದರೆ 2021ರಲ್ಲಿ 90,113 ಹುಡುಗಿಯರು ಮತ್ತು 3,75,058 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂಬ ಆತಂಕಾರಿ ವಿಚಾರ ಬಯಲಾಗಿದೆ.

ಇದನ್ನೂ ಓದಿ:ಕಾಲೇಜಿನ ಅವ್ಯವಸ್ಥೆ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ –  ಉಡುಪಿ ಸೆನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು

2019 ಮತ್ತು 2021 ರ ನಡುವೆ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಕಾಣೆಯಾದ ಅಂದರೆ 1,98,414 ಪ್ರಕರಣಗಳು ವರದಿಯಾಗಿದೆ ಎಂದು ರಾಜ್ಯವಾರು ದತ್ತಾಂಶದ ವಿಘಟನೆಯು ತೋರಿಸಿದೆ. ಆದರೆ ಮಿಜೋರಾಂ ಅಂತಹ ಯಾವುದೇ ಪ್ರಕರಣವನ್ನು ವರದಿ ಮಾಡಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಕ್ಷದ್ವೀಪ್ ಕ್ಲೀನ್ ದಾಖಲೆಯನ್ನು ಹೊಂದಿದೆ.

ಈ ಪಟ್ಟಿಯಲ್ಲಿ ಕರ್ನಾಟಕ ಕೂಡ ಹಿಂದೆ ಬಿದ್ದಿಲ್ಲ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 40,000 ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. 2019ರಲ್ಲಿ 18 ವಯಸ್ಸಿನ ಒಳಗಿನ ಸುಮಾರು 70೦ಕ್ಕೂ ಹೆಚ್ಚು ಹಾಗೂ 18 ವರ್ಷ ಮೇಲ್ಪಟ್ಟ 12,000ಕ್ಕೂ ಹೆಚ್ಚು ಹುಡುಗಿಯರು ಸೇರಿದ್ದಾರೆ. 2020ರಲ್ಲಿ 13000 ಹಾಗೂ 2021 ರಲ್ಲಿ ಒಟ್ಟು 14,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಬಯಲಾಗಿದೆ.

suddiyaana