ವೈರಲ್ ಆಗೋಕೆ ಹೀಗೆಲ್ಲಾ ಮಾಡ್ತಾರಾ? – ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್ ಮಾಡಿದ ಯುವಕರು!

ವೈರಲ್ ಆಗೋಕೆ ಹೀಗೆಲ್ಲಾ ಮಾಡ್ತಾರಾ? – ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್ ಮಾಡಿದ ಯುವಕರು!

ಈಗಂತೂ ಸೋಶಿಯಲ್‌ ಮೀಡಿಯಾ ಜಮಾನ. ದಿನದ ಹೆಚ್ಚು ಸಮಯ ಪೋಸ್ಟ್‌, ರೀಲ್ಸ್‌, ಲೈಕ್ಸ್‌ ಅಂತಾ ಸಾಮಾಜಿಕ ಜಾಲತಾಣದಲ್ಲೇ ಕಳಿತಾ ಇರ್ತಾರೆ. ಮೊನ್ನೆ ಮೊನ್ನೆಯಷ್ಟೇ ರೀಲ್ಸ್‌ ಮಾಡಿ, ಬಿಗ್‌ ಬಾಸ್‌ ಖ್ಯಾತಿಯ ರಜತ್‌ ಕಿಶನ್‌, ವಿನಯ್‌ ಗೌಡ ಜೈಲು ಪಾಲಾಗಿದ್ರು. ಇದೀಗ ಯುವಕರ ಗುಂಪೊಂದು ಜೂಜಾಟಕ್ಕಾಗಿ ಹೆಂಡತಿಯನ್ನೇ ಅಡ ಇಡುವ ರೀಲ್ಸ್‌ ಮಾಡಿದ್ದು, ಇದು ವೈರಲ್‌ ಆಗಿದೆ.

ಇದನ್ನೂ ಓದಿ: ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಗೆ ಸೋಲು – ಕೆಕೆಆರ್ಗೆ 80 ರನ್ಗಳ ಭರ್ಜರಿ ಗೆಲುವು

Why_K_ ಎಂಬಾತ ತನ್ನ ಇನ್​ಸ್ಟಾಗ್ರಾಮ್​ ಅಕೌಂಟ್​ನಿಂದ 3 ದಿನದ ಹಿಂದೆ ಒಂದು ರೀಲ್ಸ್‌ ಅಪ್‌ಲೋಡ್‌ ಮಾಡಿದ್ದಾನೆ. ಈ ವಿಡಿಯೋದಲ್ಲಿ ಯೂಟ್ಯೂಬರ್ ದಿವಾಕರ್ ಎಸ್ ಈ ವಿಡಿಯೋದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅದ್ರಲ್ಲಿ ಇಬ್ಬರು ಹೆಂಡತಿಯನ್ನು ಅಡ ಇಟ್ಟು ಜೂಜಾಡುವ ಕಂಟೆಂಟ್​ಗೆ ರೀಲ್ಸ್ ಮಾಡಿದ್ದಾರೆ. ಇದೀಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ರೀಲ್ಸ್‌ ನಿಂದ ಸ್ವಾಸ್ಥ್ಯ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದಾರೆ? ಜೂಜಾಡುವುದು ಅಪರಾಧ ಅದರಲ್ಲೂ ಹೆಂಡತಿ ಇಟ್ಟು ಜೂಜಾಡುವುದು ಯಾವ ಸಮಾಜದಲ್ಲಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ರೀತಿಯ ರೀಲ್ಸ್ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Shwetha M