ಟೀಂ ಇಂಡಿಯಾಗೆ ಸೂರ್ಯ ವಾಪಸ್ – BCCI ಕೊಟ್ಟಿರೋ ಟಾಸ್ಕ್ ಗೆಲ್ತಾರಾ?
ಪ್ರಾಕ್ಟೀಸ್ ಹಿಂದೆ ಕಂ ಬ್ಯಾಕ್ ಅಜೆಂಡಾ!

ಟೀಂ ಇಂಡಿಯಾಗೆ ಸೂರ್ಯ ವಾಪಸ್ – BCCI ಕೊಟ್ಟಿರೋ ಟಾಸ್ಕ್ ಗೆಲ್ತಾರಾ?ಪ್ರಾಕ್ಟೀಸ್ ಹಿಂದೆ ಕಂ ಬ್ಯಾಕ್ ಅಜೆಂಡಾ!

ಟೀಂ ಇಂಡಿಯಾ ಕಂಡಂತಹ ಒನ್ ಆಫ್ ದಿ ಫೈನೆಸ್ಟ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್. 2 ವರ್ಷ ಭಾರತ ತಂಡದ ನಾಯಕನಾಗಿ ಒಂದೇ ಒಂದು ಸರಣಿಯಲ್ಲೂ ಭಾರತವನ್ನ ಸೋಲೋಕೆ ಬಿಡದೆ 2026ರ ಟಿ-20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟಕ್ಕೂ ಏರಿಸಿದ್ರು. ಬಟ್ ಇಂಡಿವಿಶ್ಯೂಯಲ್ ಪರ್ಫಾಮೆನ್ಸ್ ಇಲ್ಲ ಅಂತಾ ಬಿಸಿಸಿಐ ಅವ್ರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ತಂಡದಿಂದಲೂ ಹೊರಗಿಟ್ಟಿದೆ. ಆದ್ರೆ ಸೂರ್ಯನಿಗೆ ತಂಡದಲ್ಲಿ ಶಾಶ್ವತವಾಗಿ ಬಾಗಿಲು ಓಪನ್ ಆಗಿಲ್ಲ ಅನ್ನೋ ಸೂಚನೆಯನ್ನೂ ನೀಡಿದೆ. ಇದೇ ಕಾರಣಕ್ಕೆ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡ್ಬೇಕು ಅನ್ನೋದನ್ನ ಚಾಲೆಂಜಿಂಗ್ ಆಗಿ ತಗೊಂಡಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿಯೂ ನಡೆದಿದೆ.

ಇದನ್ನೂ ಓದಿ : ಭುವನೇಶ್ವರ್ ಕುಮಾರ್ ಗೆ ಭಾರತದ ಬಾಗಿಲು ಓಪನ್? -2027ರ ODI ವಿಶ್ವಕಪ್ ಆಡ್ತಾರಾ?

2026ರ ಟಿ20 ವಿಶ್ವಕಪ್ ಆದ್ಮೇಲೆ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಅವಕಾಶವನ್ನೇ ಕಳ್ಕೊಂಡಿದ್ದಾರೆ. ಬಿಸಿಸಿಐನ ಈ ನಿರ್ಧಾರವನ್ನ ಕೆಲವ್ರು ಅಕ್ಸೆಪ್ಟ್ ಮಾಡಿದ್ರೆ ಇನ್ನೊಂದಷ್ಟು ಮಂದಿ ಇಲ್ಲ ಸೂರ್ಯನಿಗೆ ಅವಕಾಶ ನೀಡಬೇಕಿತ್ತು ಅಂದಿದ್ದಾರೆ. ಅದಕ್ಕೆ ಕಾರಣ ಸೂರ್ಯ ಟಿ-20 ವಿಶ್ವಕಪ್ ತಂಡದ ಕ್ಯಾಪ್ಟನ್ ಅನ್ನೋದು. ಌಂಡ್ ಹೊಸ ಕ್ಯಾಪ್ಟನ್ ಅಡಿಯಲ್ಲಿ ಟೀಂ ಇಂಡಿಯಾದ ಪೂರ್ ಪರ್ಫಾಮೆನ್ಸ್..

ಟೀಂ ಇಂಡಿಯಾ ಕಂ ಬ್ಯಾಕ್ ಗೆ ಪಣ ತೊಟ್ಟ ಸೂರ್ಯಕುಮಾರ್!

ಭಾರತ ತಂಡದಿಂದ ಹೊರಬಿದ್ದಿರೋ ಸೂರ್ಯಕುಮಾರ್ ಯಾದವ್ ಕಂ ಬ್ಯಾಕ್​ಗಾಗಿ ಭರ್ಜರಿ ಪ್ರಾಕ್ಟೀಸ್ ಮಾಡಿದ್ದಾರೆ. ಇತ್ತೀಚೆಗೆ ವಾಸೂ ಪರಾಂಜಪೆ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವ ವೀಡಿಯೋವನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ರು. ಈ ದಿನ ಖುಷಿ ಕೊಟ್ಟಿತು. ತುಂಬಾ ಸ್ಪೀಡ್ ಆಗಿ ಓಡಿದೆ. 3 ಗಂಟೆಗಳ ಕಾಲ ಸುಮಾರು 1000 ಎಸೆತಗಳನ್ನು ಬ್ಯಾಟಿಂಗ್ ಮಾಡಿದೆ. ಚೆನ್ನಾಗಿತ್ತು ಎಂದು ಕ್ಯಾಪ್ಶನ್ ಕೊಟ್ಟು ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಅಷ್ಟಕ್ಕೂ ಇಲ್ಲಿ ತುಂಬಾನೇ ಸೀರಿಯಸ್ ಆಗಿ ಪ್ರಾಕ್ಟೀಸ್ ಮಾಡ್ತಿರೋದಕ್ಕೆ ಕಾರಣವೇ ಟೀಂ ಇಂಡಿಯಾ ಕಂ ಬ್ಯಾಕ್ ಚಾಲೆಂಜ್. ಪ್ರಸ್ತುತ ಭಾರತ ತಂಡಕ್ಕೆ ಸೆಲೆಕ್ಟ್ ಆಗದೇ ಇದ್ರೂ ದೇಶೀಯ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡರೆ ಅವರು ಇನ್ನೂ ಆಯ್ಕೆಗೆ ಅರ್ಹರಾಗಿರುತ್ತಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಂದ್ರೆ ಎಲ್ಲಿಯೂ ಕೂಡ ಭಾರತ ತಂಡದಿಂದ ನಿಮ್ಮನ್ನ ಪರ್ಮನೆಂಟ್ ಆಗಿ ತೆಗೆದುಹಾಕಲಾಗಿದೆ ಅಂತಾ ಹೇಳಿಲ್ಲ. ಚೆನ್ನಾಗಿ ಆಡಿದ್ರೆ ಈಗ್ಲೂ ಪಿಕ್ ಮಾಡ್ಬೋದು. ಬಾಗಿಲುಗಳು ಇನ್ನೂ ತೆರೆದಿವೆ. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ರನ್ ಗಳಿಸಿದರೆ ಚಾನ್ಸ್ ಇದೆ ಅನ್ನೋ ಕಾರಣಕ್ಕೆ ಸೂರ್ಯ ಆ ಮಟ್ಟಿಗೆ ಬೆವರು ಹರಿಸ್ತಿದ್ದಾರೆ.

ಗಂಭೀರ್ ಮೇಲೆ ಪ್ರೆಶರ್ ಜಾಸ್ತಿ ಆಗಿದ್ಯಾ?

ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಬಳಿಕ ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20 ತಂಡದ ಹೊಸ ನಾಯಕರನ್ನಾಗಿ ಮಾಡಲಾಗಿತ್ತು. ಆದರೆ, ಭಾರತ ತಂಡವು ಇತ್ತೀಚೆಗೆ ಐರ್ಲೆಂಡ್ ವಿರುದ್ಧ 2-0 ಮತ್ತು ಇಂಗ್ಲೆಂಡ್ ವಿರುದ್ಧ 4-0 ಅಂತರದಲ್ಲಿ ಹೀನಾಯ ಸರಣಿ ಸೋಲು ಕಂಡಿದೆ. ಸೋ ಇಲ್ಲಿ ಕ್ಯಾಪ್ಟನ್ಸಿ ಅನುಭವದ ಕೊರತೆ ಇರೋದೂ ಕೂಡ ಗೊತ್ತಾಗ್ತುದೆ. ಇದೇ ಕಾರಣಕ್ಕೆ ಆಯ್ಕೆಗಾರರು ಮತ್ತು ಕೋಚ್ ಗೌತಮ್ ಗಂಭೀರ್ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್, ವಿಶ್ವ ಕ್ರಿಕೆಟ್‌ನಲ್ಲೇ ಅತ್ಯುತ್ತಮ ವಿನ್ನಿಂಗ್ ಪರ್ಸಂಟೇಜ್ ಹೊಂದಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ 52 ಪಂದ್ಯಗಳಲ್ಲಿ ಭಾರತವನ್ನ ಲೀಡ್ ಮಾಡಿದ್ದು 42 ಪಂದ್ಯಗಳಲ್ಲಿ ಗೆಲ್ಲಿಸಿದ್ದಾರೆ. 8 ಪಂದ್ಯಗಳಲ್ಲಿ ಸೋಲನ್ನ ಕಂಡ್ರೆ 4 ಪಂದ್ಯಗಳು ರದ್ದಾಗಿವೆ. 80.77ರಷ್ಟು ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಒಟ್ನಲ್ಲಿ ಸೂರ್ಯನಿಲ್ಲದೆ ಭಾರತ ಟಿ-20ಐ ತಂಡಕ್ಕೆ ಮಂಕು ಕವಿದಿದೆ. ಸೂರ್ಯ ಕೂಡ ಕಂ ಬ್ಯಾಕ್​ಗೆ ಬೆವರು ಹರಿಸ್ತಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಅದನ್ನ ಪ್ರೂವ್ ಮಾಡ್ತಾರಾ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *