ಪುನೀತ್, ಸಂಚಾರಿ ವಿಜಯ್ ಸ್ಪೂರ್ತಿ – ಅಂಗಾಂಗ ದಾನ ಮಾಡಿದವರೆಷ್ಟು?

ಪುನೀತ್, ಸಂಚಾರಿ ವಿಜಯ್ ಸ್ಪೂರ್ತಿ – ಅಂಗಾಂಗ ದಾನ ಮಾಡಿದವರೆಷ್ಟು?

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಅಂಗಾಂಗ ದಾನ ಮಾಡಿದವರ ಪೈಕಿ ಭಾರತದಲ್ಲೇ ಕರ್ನಾಟಕ 2ನೇ ಸ್ಥಾನ ಪಡೆದುಕೊಂಡಿದೆ.

ಅಂಗಾಂಗ ದಾನ ಮಾಡುವ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 2022ರಲ್ಲಿ 151 ಮಂದಿ ಅಂಗಾಂಗ ದಾನ ಮಾಡುವ ಮೂಲಕ 2ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಕಿಡ್ನಿ, ಲಿವರ್, ಹಾರ್ಟ್ ಸೇರಿದಂತೆ 770 ಅಂಗಾಂಗಳನ್ನು ದಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ 194 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಗುಜರಾತ್ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮಹಿಳೆಯರ ‘ಮತ’ ಗೆಲ್ಲಲು ಸಿಎಂ ಹೊಸ ಪ್ಲ್ಯಾನ್ – ಬಜೆಟ್​ನಲ್ಲಿ ಸಿಗುತ್ತಾ ‘ಗೃಹಿಣಿ ಶಕ್ತಿ’..?

ಪುನೀತ್ ರಾಜ್ ಕುಮಾರ್, ಸಂಚಾರಿ ವಿಜಯ್ ಪ್ರೇರಣೆ

ನಟ ಪುನೀತ್ ರಾಜ್ ಕುಮಾರ್, ಸಂಚಾರಿ ವಿಜಯ್ ಅವರು ತಮ್ಮ ಅಂಗಾಂಗ ದಾನ ಮಾಡುವ ಮೂಲಕ ರಾಜ್ಯದ ಜನರಿಗೆ ಪ್ರೇರಣೆಯಾದರು. ಈ ಕಲಾವಿದರ ಒಳ್ಳೆಯ ಕಾರ್ಯವನ್ನು ಮಾದರಿಯಾಗಿ ತೆಗೆದುಕೊಂಡು ಅನೇಕರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಹಲವರು ದಾನವನ್ನೂ ಮಾಡಿದ್ದಾರೆ.

ಸದ್ಯ ಅಂಗಾಂಗ ದಾನ ಮಾಡಲು ನೋಂದಣಿಯಾಗಿರುವವರ ಸಂಖ್ಯೆ 34 ಸಾವಿರಕ್ಕೂ ಹೆಚ್ಚಾಗಿದ್ದು, ಒಂದೇ ವರ್ಷದಲ್ಲಿ ಶೇ. 10 ರಷ್ಟು ಹೆಚ್ಚಾಗಿದೆ. ನೋಂದಣಿಯಾಗಿರುವವರ ಪೈಕಿ ಶೇ. 90 ರಷ್ಟು ಮಂದಿ ಯುವ ಜನರು ಇದ್ದಾರೆ.

ಅಪಘಾತ, ಅನಾರೋಗ್ಯ ಹಾಗೂ ಆಕಸ್ಮಿಕ ಘಟನೆಗಳಲ್ಲಿ ಮೆದುಳು ನಿಷ್ಕ್ರಿಯೆಗೊಂಡಾಗ ಅಂಗಾಂಗ ದಾನ ಮಾಡಲಾಗುತ್ತದೆ. ಸಂಬಂಧಿಕರ ಒಪ್ಪಿಗೆ ಪಡೆದುಕೊಂಡು ಈ ಕೆಲಸವನ್ನು ನುರಿತ ವೈದ್ಯರು ಸಂಬಂಧಪಟ್ಟ ಇಲಾಖೆಯ ಅನುಮತಿಯೊಂದಿಗೆ ಅಂಗಾಂಗ ದಾನಕ್ಕೆ ಮುಂದಾಗುತ್ತಾರೆ. ಈವರೆಗೂ ಅಂಗಾಂಗ ದಾನಕ್ಕೆ ನಿರಾಸಕ್ತಿ ತೋರಲಾಗುತ್ತಿತ್ತು. ಆದರೆ, ನಟರಿಬ್ಬರು ಅಂಗಾಂಗ ದಾನ ಮಾಡುತ್ತಿದ್ದಂತೆಯೇ ಪ್ರೇರಣೆಗೊಂಡು ಹಲವಾರು ಜನರು ಈ ಪುಣ್ಯದ ಕೆಲಸದಲ್ಲಿ ಕೈ ಜೋಡಿಸುತ್ತಿದ್ದಾರೆ.

suddiyaana