KKR ವಿರುದ್ಧ ಮೊದಲ ಪಂದ್ಯಕ್ಕೆ ಆರೆಂಜ್ ಆರ್ಮಿ ರೆಡಿ – SRH ಟೀಮ್ನ ಶಕ್ತಿಯಾರು?

ಸನ್ ರೈಸರ್ಸ್ ಹೈದ್ರಾಬಾದ್ ಟೀಮ್ ಕೂಡಾ ಕಡಿಮೆಯೇನಿಲ್ಲ. ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲೇ ಬೇಕೆಂಬ ಹಠಕ್ಕೆ ಬಿದ್ದಿದೆ. ಆರೆಂಜ್ ಆರ್ಮಿಗೆ ಮೊದಲ ಎದುರಾಳಿಯೇ ಕೋಲ್ಕೊತ್ತಾ ನೈಟ್ ರೈಡರ್ಸ್. SRH ಟೀಮ್ನ ಶಕ್ತಿಯಾರು?, ಪ್ಲೇಯಿಂಗ್ 11 ಹೇಗಿದೆ ಎಂಬ ವಿವರಣೆ ಇಲ್ಲಿದೆ.
ಇದನ್ನೂ ಓದಿ: ನೂರಾರು ಕೋಟಿ ಒಡೆಯ ಧೋನಿ ಬಳಿ ಇರೋ ಬೈಕ್, ಕಾರುಗಳೆಷ್ಟು?
ಸನ್ ರೈಸರ್ಸ್ ಹೈದ್ರಾಬಾದ್ ಪ್ರಾಂಚೈಸಿ ತನ್ನ ನಾಯಕನನ್ನು ಬದಲು ಮಾಡಿದೆ. ಆಸ್ಟ್ರೇಲಿಯಾದ ವಿಶ್ವಕಪ್ ಗೆದ್ದ ನಾಯಕ ಪ್ಯಾಟ್ ಕಮಿನ್ಸ್ ಈ ಬಾರಿಯ srh ಟೀಮ್ನ ಕ್ಯಾಪ್ಟನ್. ಈ ಬಾರಿಯ ಹರಾಜಿನಲ್ಲಿ ಹೈದ್ರಾಬಾದ್ ಪ್ರಾಂಚೈಸಿ ಕಮಿನ್ಸ್ ಅವರಿಗೆ ಬರೋಬ್ಬರಿ 20.5 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಡೇನಿಯಲ್ ವೆಟೋರಿ ಹೈದ್ರಾಬಾದ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.
ಹೈದರಾಬಾದ್ ಸನ್ರೈಸರ್ಸ್ ಸ್ಟ್ರೆಂಥ್ ಅಂದರೆ ಫಾಸ್ಟ್ ಬೌಲರ್ಸ್. ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಫಜಲಖ್ ಫಾರೂಖಿ, ಟಿ.ನಟರಾಜನ್, ಉಮ್ರಾನ್ ಮಲಿಕ್, ಜಯ್ದೇವ್ ಉನದ್ಕತ್, ಆಕಾಶ್ ಸಿಂಗ್ ಇವರಲ್ಲಿ ಯಾವ ನಾಲ್ವರು ಬೌಲರ್ಗಳನ್ನು ಕಣಕ್ಕಿಳಿಸುವುದು ಎನ್ನುವುದೇ ತಂಡದ ಮ್ಯಾನೇಜ್ಮೆಂಟ್ಗಿರುವ ಸವಾಲು.. ಬಹುತೇಕ ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್ ಜೊತೆಯಾಗುವುದು ನಿಶ್ಚಿತ. ಈ ನಾಲ್ವರಿಂದಾಗಿ ಸನ್ ರೈಸರ್ಸ್ ಹೈದರಾಬಾದ್ನ ಪೇಸ್ ಬೌಲಿಂಗ್ ಯುನಿಟ್ ತುಂಬಾನೆ ಸ್ಟ್ರಾಂಗ್ ಆಗಿ ಕಾಣಿಸ್ತಿದೆ. ಇನ್ನು ಭುವನೇಶ್ವರ್ ಕುಮಾರ್ಗಂತೂ ಇದೊಂದು ಒಳ್ಳೆಯ ಆಪರ್ಚ್ಯುನಿಟಿ. ಸದ್ಯ ಭುವಿ ಟೀಂ ಇಂಡಿಯಾದ ಪರ ಆಡ್ತಿಲ್ಲ. ಈಗ ಐಪಿಎಲ್ ಮೂಲಕ ಕಮ್ಬ್ಯಾಕ್ ಮಾಡೋಕೆಒಳ್ಳೆಯ ಚಾನ್ಸ್ ಇದೆ. ಪ್ಯಾಟ್ ಕಮಿನ್ಸ್ ನ್ಯೂ ಬಾಲ್ನಲ್ಲಿ ಬೌಲಿಂಗ್ ಮಾಡಿದ್ರೆ, ಡೆತ್ ಓವರ್ನಲ್ಲಿ ಭುವನೇಶ್ವರ್ ಅಥವಾ ನಟರಾಜ್ ಕೈಗೆ ಬಾಲ್ ನೀಡಬಹುದು. ಅಂತೂ ಹೈದರಾಬಾದ್ನದ್ದು ಬೆಸ್ಟ್ ಬೌಲಿಂಗ್ ಯುನಿಟ್ ಅಂತಾನೆ ಹೇಳಬಹುದು. ಯಾಕಂದ್ರೆ ಲೈನ್ & ಲೆಂತ್ನಲ್ಲಿ ಬೌಲ್ ಮಾಡೋಕೆ ಪ್ಯಾಟ್ ಕಮಿನ್ಸ್ ಇದ್ದಾರೆ. ಸ್ವಿಂಗ್ ಬೌಲರ್ ಆಗಿ ಭುವನೇಶ್ವರ್ ಕುಮಾರ್ ಇದ್ದಾರೆ. ಫುಲ್ ಪೇಸ್ ಬೌಲಿಂಗ್ಗೆ ಉಮ್ರಾನ್ ಮಲಿಕ್ ಇದ್ದಾರೆ. ಸೋ ಗುಡ್ ಬೌಲಿಂಗ್ ಯುನಿಟ್ ಹೊಂದಿದೆ srh. ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರುವ ಆರೆಂಜ್ ಆರ್ಮಿ ಈಗಾಗಲೇ ಭರ್ಜರಿ ಆಟಕ್ಕೆ ಸಜ್ಜಾಗಿದೆ.. ಜೊತೆಗೆ ಹೊಸ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ತಂಡ ಸೇರಿಕೊಂಡಿದ್ದರ ಬಗ್ಗೆಯೂ ವೀಡಿಯೋ ಬಿಡುಗಡೆ ಮಾಡಿದ್ದು, ಫ್ಯಾನ್ಸ್ಗೆ ಥ್ರಿಲ್ ಆಗುವಂತಹ ಅಪ್ಡೇಟ್ಸ್ ಕೊಡ್ತಿದೆ..
ಬ್ಯಾಟಿಂಗ್ನಲ್ಲೂ ಎಸ್ಆರ್ಹೆಚ್ ಬಲಿಷ್ಠವಾಗಿಯೇ ಇದೆ.. ಅದರಲ್ಲೂ ಐಡನ್ ಮರ್ಕರಂ, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ ಮಿಂಚಿದ್ರೆ ದೊಡ್ಡ ಮೊತ್ತದ ರನ್ ಕಲೆಹಾಕುವುದು ನಿಶ್ಚಿತ.. ಇವರಿಗೆ ಸಾಥ್ ಕೊಡಲು ಆಲ್ರೌಂಡರ್ ವನಿಂದು ಹಸರಂಗಾ ಜೊತೆಗೆ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕೂಡ ಕೀ ಪ್ಲೇಯರ್ ಆಗಿದ್ದಾರೆ.. ಇದೇ ಕಾರಣದಿಂದ ಆರೆಂಜ್ ಆರ್ಮಿ ಈ ಬಾರಿ ಕೆಕೆಆರ್ ಜೊತೆಗಿನ ಪಂದ್ಯದ ಮೂಲಕ ಗೆಲುವಿನ ಶುಭಾರಂಭ ಮಾಡುತ್ತಾ ಎಂದು ನೋಡಬೇಕಿದೆ.. SRH ಪ್ಲೇಯಿಂಗ್ 11 ನೋಡೋದಾದ್ರೆ,
SRH ಪ್ಲೇಯಿಂಗ್ 11
- ಪ್ಯಾಟ್ ಕಮ್ಮಿನ್ಸ್ (ನಾಯಕ)
- ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್)
- ಅಭಿಶೇಕ್ ಶರ್ಮಾ
- ಮಯಾಂಕ್ ಅಗರ್ವಾಲ್
- ರಾಹುಲ್ ತ್ರಿಪಾಠಿ
- ಐಡೆನ್ ಮಾರ್ಕ್ರಾಮ್
- ಗ್ಲೆನ್ ಫಿಲಿಪ್ಸ್
- ವಾಷಿಂಗ್ಟನ್ ಸುಂದರ್
- ಭುವನೇಶ್ವರ್ ಕುಮಾರ್
- ಉಮ್ರಾನ್ ಮಲಿಕ್
- ಟಿ ನಟರಾಜನ್
ಕೆಕೆಆರ್ ಮತ್ತು ಎಸ್ಆರ್ಹೆಚ್ ಟೀಮ್ ತಮ್ಮ ಮೊದಲ ಪಂದ್ಯಕ್ಕೆ ಸಜ್ಜಾಗಿವೆ. ಆರೆಂಜ್ ಆರ್ಮಿ ಮ್ಯಾಚ್ಗೂ ಮೊದ್ಲೇ ಸೌಂಡ್ ಮಾಡ್ತಿದೆ. ಕೆಕೆಆರ್ನ ರಿಂಕು ಸಿಂಗ್ ಪ್ರಾಕ್ಟೀಸ್ ಮ್ಯಾಚ್ನಲ್ಲೇ ಎದುರಾಳಿಗೆ ನಡುಕ ಹುಟ್ಟಿಸಿದ್ದಾರೆ. ರಿಂಕು ಸಿಂಗ್ ಏನಾದ್ರೂ ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರೆ ಆರೆಂಜ್ ಆರ್ಮಿಗೆ ಡೇಂಜರ್..