ಜೂನ್ 23ಕ್ಕೆ ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ – ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಣಿಯಲು ರಣತಂತ್ರ!

ಜೂನ್ 23ಕ್ಕೆ ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ – ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಣಿಯಲು ರಣತಂತ್ರ!

ಮುಂಬರುವ ಲೋಕಸಭೆ ಚುನಾವಣೆಗಾಗಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ವಿಪಕ್ಷಗಳು ರಣತಂತ್ರ ಹೆಣಿಯೋಕೆ ಮಹತ್ವದ ಸಿದ್ಧತೆಗಳನ್ನ ನಡೆಸುತ್ತಿದೆ. ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ಸಿಎಂ ನಿತೀಶ್ ಕುಮಾರ್​ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಭೆ ಸೇರಲಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಕೇಜ್ರಿವಾಲ್, ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ : ಆಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – ತಾಯಿ, ಮಗ ಸೇರಿ ಮೂವರು ಸಜೀವದಹನ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನ ಮಟ್ಟ ಹಾಕುವ ಉದ್ದೇಶದಿಂದ ನಿತೀಶ್ ಕುಮಾರ್​ ಈ ಸಭೆ ಕರೆದಿದ್ದಾರೆ. ಜೂನ್ 12ಕ್ಕೆ ಸಭೆ ನಡೆಯಬೇಕಿತ್ತಾದ್ರೂ ದಿನಾಂಕ ನಿಗದಿಯಾದ ವೇಳೆ ಕಾಂಗ್ರೆಸ್​ ನಾಯಕರನ್ನ ಇನ್ನೂ ಸಂಪರ್ಕಿಸದೇ ಇದ್ದ ಕಾರಣ ಸಭೆಯನ್ನ ಜೂನ್ 23ಕ್ಕೆ ಮುಂದೂಡಿಕೆ ಮಾಡಲಾಗಿದೆ. 543 ಲೋಕಸಭೆ ಕ್ಷೇತ್ರಗಳ ಪೈಕಿ ಕನಿಷ್ಠ 450 ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದೊಂದಿಗೆ ಅರ್ಹ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಪ್ರತಿಪಕ್ಷಗಳು ಚಿಂತನೆ ನಡೆಸುತ್ತಿವೆ. ಈ ಮೂಲಕ ಬಿಜೆಪಿ ಮತಗಳನ್ನ ಒಡೆಯೋದೆ ವಿಪಕ್ಷಗಳ ಪ್ರಮುಖ ಗುರಿಯಾಗಿದೆ. ಆದ್ರೆ ಕೆಸಿಆರ್​ ಮತ್ತು ಚಂದ್ರಬಾಬು ನಾಯ್ಡು ಈ ಸಭೆಗೆ ಹಾಜರಾಗೋದು ಅನುಮಾನ ಎನ್ನಲಾಗ್ತಿದೆ.

 

suddiyaana