ವಿಪಕ್ಷ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ – ವಿರೋಧ ಪಕ್ಷದ ವಿರುದ್ದ ಮೋದಿ ಕಿಡಿ  

ವಿಪಕ್ಷ ನಾಯಕರು 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ – ವಿರೋಧ ಪಕ್ಷದ ವಿರುದ್ದ ಮೋದಿ ಕಿಡಿ  

ಜೂನ್​ 23ರಂದು ಬಿಹಾರದ ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರುಗಳು ನಡೆಸಿದ ಸಭೆಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಸಭೆಯಲ್ಲಿದ್ದವರೆಲ್ಲಾ ಮಹಾ ಭ್ರಷ್ಟಾಚಾರವೆಸಗಿದವರೇ. ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಅನ್ನೋ ಪದ ಪದೇ ಪದೆ ಕೇಳಿ ಬರುತ್ತಿದೆ. ಈ ಎಲ್ಲಾ ವಿಪಕ್ಷಗಳ ಭ್ರಷ್ಟಾಚಾರ ಲೆಕ್ಕ ಹಾಕಿದ್ರೆ 20 ಲಕ್ಷ ಕೋಟಿ ದಾಟಬಹುದು. ಈ ಪೈಕಿ ಕಾಂಗ್ರೆಸ್​​ ಪಕ್ಷವೇ ಕೆಲವು ಲಕ್ಷ ಕೋಟಿಯಷ್ಟು ಅಕ್ರಮ ಮಾಡಿದೆ. ಪಾಟ್ನಾದಲ್ಲಿ ಫೋಟೋಗೆ ಪೋಸ್​ ಕೊಡುವ ಮೂಲಕ 20 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರದ ಬಗ್ಗೆ ದೇಶದ ಜನರಿಗೆ ಗ್ಯಾರಂಟಿ ಕೊಟ್ಟಿದ್ದಾರೆ. ಆದ್ರೆ ನಾನು ಪ್ರತಿಯೊಬ್ಬ ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಅನ್ನೋ ಬಗ್ಗೆ ನಿಮಗೆ ಗ್ಯಾರಂಟಿ ಕೊಡ್ತೀನಿ ಅಂತಾ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಒಂದು ದೇಶದಲ್ಲಿ ಎರಡೆರಡು ಕಾನೂನು ನಡೆಸಲು ಸಾಧ್ಯವಿಲ್ಲ – ಪ್ರಧಾನಿ ಮೋದಿ

ಈ ಹಿಂದೆ ಪರಸ್ಪರ ಟೀಕಾ ಪ್ರಹಾರ ಮಾಡುತ್ತಿದ್ದವರೆಲ್ಲ ಈಗ ಕಾಲಿಗೆ ಬೀಳುತ್ತಿದ್ದಾರೆ. ಅವರ ಅಸಹಾಯಕತೆ ನಮಗೆ ಅರ್ಥವಾಗುತ್ತೆ. ಅವರ ಮೇಲೆ ಸಿಟ್ಟಾಗಬೇಡಿ.. ದಯವಿಟ್ಟು ಕರುಣೆ ತೋರಿಸಿ ಅಂತಾ ಮೋದಿ ಕಾಲೆಳೆದ್ದಾರೆ.

ಲೋಕಸಭಾ ಚುನಾವಣೆಯನ್ನ ಒಗ್ಗಟ್ಟಿನಿಂದ ಎದುರಿಸಿ ಪ್ರಧಾನಿ ಮೋದಿಯವರ ನಾಗಾಲೋಟಕ್ಕೆ ಬ್ರೆಕ್ ಹಾಕಲು ವಿಪಕ್ಷನಾಯಕರೆಲ್ಲಾ ಟೊಂಕ ಕಟ್ಟಿ ನಿಂತಿದ್ದಾರೆ.. ಜೂನ್ 23 ರಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಪಾಟ್ನಾ ನಿವಾಸದಲ್ಲಿ ಒಗ್ಗೂಡಿ ರಣತಂತ್ರ ರೂಪಿಸಿದ್ದರು. ಆದ್ರೆ ಇದೇ ಸಭೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ವಿಪಕ್ಷಗಳು ಆಯೋಜಿಸಿದ್ದ ಸಭೆಯ ಫೋಟೋವನ್ನು ನೋಡಿದಾಗ ಫೋಟೋದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ 20 ಲಕ್ಷ ಕೋಟಿ ಹಗರಣದ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ನಿಮಗೆ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ಯಾರಂಟಿ ಪದವನ್ನ ಜನಪ್ರಿಯಗೊಳಿಸಲಾಗುತ್ತಿದೆ. ಇದು ಭ್ರಷ್ಟಾಚಾರದ ಗ್ಯಾರಂಟಿ ಎಂದು ಬಿಜೆಪಿ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

suddiyaana