ನೂತನ ಸಂಸತ್ ಭವನದ ಉದ್ಘಾಟನೆಗೆ ದಿನಗಣನೆ – ಸಂಸತ್ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಲು ವಿಪಕ್ಷಗಳ ಚಿಂತನೆ

ನೂತನ ಸಂಸತ್ ಭವನದ ಉದ್ಘಾಟನೆಗೆ ದಿನಗಣನೆ – ಸಂಸತ್ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಲು ವಿಪಕ್ಷಗಳ ಚಿಂತನೆ

ದೇಶದ ನೂತನ ಸಂಸತ್​ ಭವನದ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಮೇ 28ರಂದು ಪ್ರಧಾನಿ ಮೋದಿ ಸಂಸತ್​​ನ್ನ ದೇಶಕ್ಕೆ ಸಮರ್ಪಿಸಲಿದ್ದಾರೆ. ಆದರೆ, ಅದಕ್ಕೂ ಮುನ್ನ ರಾಷ್ಟ್ರ ರಾಜಕೀಯದಲ್ಲಿ ಸಂಸತ್​ ಭವನದ ಉದ್ಘಾಟನೆ ಬಗ್ಗೆಯೇ ಸಮರ ನಡೀತಿದೆ. ಈಗಾಗ್ಲೇ 19 ವಿಪಕ್ಷಗಳು ಸಂಸತ್ ಉದ್ಘಾಟನೆ ಕಾರ್ಯಕ್ರಮವನ್ನ ಬಹಿಷ್ಕರಿಸಲು ನಿರ್ಧರಿಸಿವೆ. ಬಿಜೆಪಿ ಮತ್ತು ವಿಪಕ್ಷ ನಾಯಕರ ನಡುವಿನ ಮಾತಿನ ಕಲಹ ತಾರಕಕ್ಕೇರಿದೆ.

ಇದನ್ನೂ ಓದಿ: ಮೋದಿ ಸಂಸತ್‌ ಭವನ ಉದ್ಘಾಟನೆ ವಿರೋಧ – ಅರ್ಜಿ ವಜಾಗೊಳಿಸಿದ್ದೇಕೆ ಸುಪ್ರೀಂಕೋರ್ಟ್‌?

ಇದೀಗ ಪ್ರಧಾನಿ ಮೋದಿ ಕೂಡ ವಿಪಕ್ಷಗಳ ಬಹಿಷ್ಕಾರ ವಿಚಾರವಾಗಿ ಟಕ್ಕರ್ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ಭೇಟಿ ವೇಳೆ ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿರುವ ಮೋದಿ, ಕೇವಲ ಆಸ್ಟ್ರೇಲಿಯಾ ಪ್ರಧಾನಿ ಅಷ್ಟೇ ಅಲ್ಲ, ಅಲ್ಲಿನ ಮಾಜಿ ಪ್ರಧಾನಿಗಳು, ವಿಪಕ್ಷಗಳ ಸಂಸದರು ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಎಲ್ಲರೂ ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅಂತಾ ಪ್ರಧಾನಿ ಮೋದಿ ನಮ್ಮಲ್ಲಿರುವ ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ. ಈ ನಡುವೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಪಕ್ಷ ಮತ್ತು ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಸಂಸತ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೀರ್ಮಾನಿಸಿವೆ. ಮತ್ತೊಂದೆಡೆ ನಿತೀಶ್ ಕುಮಾರ್​ ನೇತೃತ್ವದ ಜೆಡಿಯು, ನಾವು ಅಧಿಕಾರಕ್ಕೆ ಬಂದರೆ ನೂತನ ಸಂಸತ್​​ನ್ನ ಬಳಸುವುದಿಲ್ಲ ಅಂತಾ ಹೇಳಿದೆ. ಅಷ್ಟೇ ಅಲ್ಲ, ನೂತನ ಸಂಸತ್​​ನ್ನ ರಾಷ್ಟ್ರಪತಿಗಳೇ ಉದ್ಘಾಟನೆಗೊಳಿಸಬೇಕು. ಪ್ರಧಾನಿ ಮೋದಿಗೆ ಅವಕಾಶ ನೀಡಬಾರದು ಅಂತಾ ಮನವಿ ಮಾಡಿ ಸುಪ್ರೀಂಕೋರ್ಟ್​ಗೆ ಕೂಡ ಅರ್ಜಿ ಸಲ್ಲಿಸಲಾಗಿದೆ. ಇವೆಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಈ ಹಿಂದೆ ವಿಪಕ್ಷಗಳೇ ರಾಷ್ಟ್ರಪತಿ ಮುರ್ಮು ಅವರನ್ನ ಅವಮಾನಿಸಿವೆ. ನೀವು ಮೋದಿಯನ್ನ ದ್ವೇಷಿಸಿದರೂ ಪರ್ವಾಗಿಲ್ಲ, ಸಂಸತ್​​ನ್ನ ಗೌರವಿಸೋಕೆ ಮರೀಬೇಡಿ. ಹೀಗಾಗಿ ಉದ್ಘಾಟನಾ ಕಾರ್ಯಕ್ರಮವನ್ನ ಬಹಿಷ್ಕರಿಸುವ ನಿರ್ಧಾರದ ಬಗ್ಗೆ ಯೋಚನೆ ಮಾಡಿ ಅಂತಾ ಸಲಹೆ ನೀಡಿದ್ದಾರೆ.

suddiyaana