ಮದುವೆ ದಿನ ವಿಶೇಷವಾಗಿರಬೇಕೇ ?- ಬಾಹ್ಯಾಕಾಶದಲ್ಲಿ ತಾಳಿಕಟ್ಟಲು ಸಿಗಲಿದೆ ಅವಕಾಶ..!
ಕೈಯಲ್ಲಿ ಕೋಟಿ ಕೋಟಿ ದುಡ್ಡಿದ್ದರೆ ಬಾಹ್ಯಾಕಾಶದಲ್ಲೂ ಮದುವೆಯಾಗಬಹುದು..!

ಮದುವೆ ದಿನ ವಿಶೇಷವಾಗಿರಬೇಕೇ ?- ಬಾಹ್ಯಾಕಾಶದಲ್ಲಿ ತಾಳಿಕಟ್ಟಲು ಸಿಗಲಿದೆ ಅವಕಾಶ..!ಕೈಯಲ್ಲಿ ಕೋಟಿ ಕೋಟಿ ದುಡ್ಡಿದ್ದರೆ ಬಾಹ್ಯಾಕಾಶದಲ್ಲೂ ಮದುವೆಯಾಗಬಹುದು..!

ಈಗೇನಿದ್ದರೂ ಡೆಸ್ಟಿನೇಷನ್ ಮದುವೆಯದ್ದೇ ಕಾರುಬಾರು. ತಮ್ಮ ವಿವಾಹದ ದಿನವನ್ನ ವಿಶೇಷವನ್ನಾಗಿಸಲು ವಿಭಿನ್ನವಾಗಿ ಪ್ಲಾನ್ ಮಾಡಿಕೊಳ್ಳುತ್ತಾರೆ. ಕೆಲವರು ಇದಕ್ಕಾಗಿ ಕಡಲ ತೀರವನ್ನ ಆರಿಸಿಕೊಂಡರೆ, ಇನ್ನೂ ಕೆಲವರು ಪರ್ವತಗಳಂತಹ ಸ್ಥಳಗಳನ್ನ ಇಷ್ಟ ಪಡುತ್ತಾರೆ. ಕೆಲವರು ನೀರಿನ ಒಳಗೂ ಮದುವೆಯಾಗಿದ್ದೂ ಇದೆ. ಇನ್ನು ಕೆಲವರು ವಿಮಾನದಲ್ಲೇ ಕಲ್ಯಾಣವಾಗಬೇಕು ಎಂದು ಅಲ್ಲೂ ಸ್ಪೆಷಲ್ ಆಗಿಯೇ ಮದುವೆಯಾಗಿದ್ದಾರೆ. ಆದರೆ ಇನ್ನು ಮುಂದೆ ಇವುಗಳನ್ನೆಲ್ಲಾ ಮೀರಿ ಬಾಹ್ಯಾಕಾಶದಲ್ಲಿಯೂ ಮದುವೆಯಾಗುವ ಸಮಯ ಬಂದಿದೆ. ಅರೇ ಇದೇನು ತಮಾಷೆ ಅಂತಾ ಅಂದುಕೊಳ್ಳಲೇಬೇಡಿ. ಬಾಹ್ಯಾಕಾಶ ಸಂಬಂಧಿತ ಕಂಪನಿಯೊಂದು ಬಾಹ್ಯಾಕಾಶದಲ್ಲಿ ಮದುವೆಯನ್ನ ಆಯೋಜಿಸುವವರಿಗಾಗಿ ವಿಶೇಷ ಅವಕಾಶವನ್ನು ನೀಡುತ್ತಿದೆ.

ಇದನ್ನೂ ಓದಿ: ಕೇದಾರನಾಥ ಧಾಮದ ಮೆರುಗು ಹೆಚ್ಚಿಸಲಿದೆ 60 ಕ್ವಿಂಟಾಲ್‌ ತೂಕದ ‘ಓಂ’ ಆಕೃತಿ!

ಇಲ್ಲಿ ತನಕ ಬಾಹ್ಯಾಕಾಶವೆಂದರೇ ಸಂಶೋಧನೆಗೆ ಮತ್ತೂ ಪ್ರವಾಸಕ್ಕೆ ಮೀಸಲಾಗಿತ್ತು. ಆದರೆ ಇನ್ನು ಮುಂದೆ ಬಾಹ್ಯಾಕಾಶದಲ್ಲಿ ಮದುವೆಯೂ ಆಗಬಹುದು. ಯಾಕಂದರೆ ಸ್ಪೇಸ್ ಪರ್ಸ್ಪೆಕ್ಟಿವ್ ಎನ್ನುವ ಕಂಪನಿ ಇಂತದೊಂದು ಯೋಜನೆಯನ್ನ ಹಾಕಿಕೊಂಡಿದೆ.  $ 125,000 ರಷ್ಟು ದುಬಾರಿ ಬೆಲೆಗೆ  ಬಾಹ್ಯಾಕಾಶದಲ್ಲಿ ಮದುವೆಯಾಗಲು ಅವಕಾಶವನ್ನು ನೀಡುತ್ತಿದೆ ಎಂದು ಘೋಷಿಸಿದೆ. ಪರಿಸರ ಸ್ನೇಹಿ ಕಾರ್ಬನ್ ನ್ಯೂಟ್ರಲ್ ಬಲೂನ್ ತಂತ್ರಜ್ಞಾನದ ಸಹಾಯದೊಂದಿಗೆ ಕಂಪನಿಯು ಇಂತದೊಂದು ಹೊಸ ಮದುವೆ ನೌಕೆಯನ್ನ ಸಿದ್ಧಪಡಿಸಿದೆ. ಸ್ಪೇಸ್ ಪರ್ಸ್ಪೆಕ್ಟಿವ್, ಬಾಹ್ಯಾಕಾಶ ನೌಕೆ ನೆಪ್ಚೂನ್ ಮೂಲಕ ಜೋಡಿಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸುತ್ತದೆ. ಬಾಹ್ಯಾಕಾಶ ನೌಕೆಯನ್ನು ಪರಿಸರ ಸ್ನೇಹಿ ಸ್ಪೇಸ್‌ಬಲೂನ್‌ ಸಹಾಯದೊಂದಿಗೆ ಬಾಹ್ಯಾಕಾಶಕ್ಕೆ ಹಾರಿಸಲಾಗುತ್ತದೆ. ನವೀಕರಿಸಬಹುದಾದ ಹೈಡ್ರೋಜನ್‌ ಬಳಸಿಕೊಂಡು ಉಡಾವಣೆಯಾಗುವ ಈ ನೌಕೆಯೂ ಸಾಂಪ್ರದಾಯಿಕ ರಾಕೆಟ್ ಉಡಾವಣೆಗಳೊಂದಿಗೆ ಸಾಮಾನ್ಯವಾಗಿ ಬಿಡುಗಡೆಯಾಗುವ ಇಂಗಾಲವನ್ನ ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ನೆಪ್ಚೂನ್‌ನ ವಿಶಾಲವಾದ ಕ್ಯಾಪ್ಸುಲ್‌ಗಳ ಒಳಗೆ ಕುಳಿತಾಗ, ಭೂಮಿಯ ಅದ್ಭುತ ಸೌಂದರ್ಯವನ್ನು ಆನಂದಿಸಬಹುದು. ಇತರ ಬಾಹ್ಯಾಕಾಶ ನೌಕೆಗಳಿಂದ ಭಿನ್ನವಾಗಿರುವ ನೆಪ್ಚೂನ್‌ ನೌಕೆಯ ವಿಶೇಷವೇನಂದರೆ ಕ್ಯಾಪ್ಸುಲ್ ಮತ್ತು ಸ್ಪೇಸ್‌ಬಲೂನ್‌ನೊಂದಿಗಿನ ಅದರ ಸುರಕ್ಷಿತ ಸಂಪರ್ಕವು ಹಾರಾಟದ ಉದ್ದಕ್ಕೂ ಸುರಕ್ಷಿತ ಮತ್ತು ಸುಗಮವಾದ ಹಾರಾಟವನ್ನು ಖಚಿತಪಡಿಸುತ್ತದೆ.

ಬಾಹ್ಯಾಕಾಶದಲ್ಲಿ ವಿವಾಹವಾಗಲು  ಆಸಕ್ತಿ ಹೊಂದಿರುವ ದಂಪತಿಗಳು ಸ್ಪೇಸ್ ಪರ್ಸ್ಪೆಕ್ಟಿವ್‌ನ ವೆಬ್‌ಸೈಟ್‌ನಲ್ಲಿ ಮೊದಲೇ ನೋಂದಣಿ ಮಾಡಬೇಕಾಗುತ್ತದೆ. ಟಿಕೆಟ್ ಬೆಲೆಗಳು $125,000 (ಅಂದಾಜು ರೂ. 1.03 ಕೋಟಿ) ರಿಂದ ಪ್ರಾರಂಭವಾಗುವುದರಿಂದ ಈ ಸ್ವರ್ಗೀಯ ಅನುಭವ ಬೇಕಿದ್ದರೆ ಖಂಡಿತವಾಗಿಯೂ ಭಾರಿ ಬೆಲೆಯನ್ನು ತೆರಲೇಬೇಕಾಗುತ್ತದೆ.

suddiyaana