ಭಾರತದ ದಾಳಿಗೆ ಬಾಲ ಮುದುಡಿದ ನಾಯಿ ರೀತಿ ಆಗಿತ್ತು ಪಾಕ್‌ ಕಥೆ – ಪೆಂಟಗನ್​ನ ಮಾಜಿ ಅಧಿಕಾರಿ

ಭಾರತದ ದಾಳಿಗೆ ಬಾಲ ಮುದುಡಿದ ನಾಯಿ ರೀತಿ ಆಗಿತ್ತು ಪಾಕ್‌ ಕಥೆ – ಪೆಂಟಗನ್​ನ ಮಾಜಿ ಅಧಿಕಾರಿ

ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನ ವಿರುದ್ಧ ಪ್ರತಿಕಾರ ತೀರಿಸಲು ಆಪರೇಷನ್‌ ಸಿಂಧೂರ್‌ ಕೈಗೊಂಡಿತ್ತು. ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಿಂದಾಗಿ ಪಾಪಿ ಪಾಕಿಸ್ತಾನ ತತ್ತರಿಸಿ ಹೋಗಿದ್ದು, ಇದೀಗ ಕೊನೆಗೂ ಭಾರತದ ಮುಂದೆ ಮಂಡಿಯೂರಿದೆ. ಪಾಕಿಸ್ತಾನ ಶಾಂತಿಗಾಗಿ ತೊಡಗಿಸಿಕೊಳ್ಳಲು ಸಿದ್ಧವಾಗಿದೆ ಎಂದು ಪ್ರಧಾನಿ ಶೆಹಬಾಜ್‌ ಶರೀಫ್‌ ಭಾರತದ ಮುಂದೆ ಮಾತುಕತೆ ಪ್ರಸ್ತಾಪ ಇಟ್ಟಿದ್ದಾರೆ. ಇದೀಗ ಅಮೆರಿಕದ ಪೆಂಟಗನ್​ನ ಮಾಜಿ ಉದ್ಯೋಗಿ ರುಬಿನ್ ಭಾರತದ ದಾಳಿ ಬಳಿಕ  ಪಾಕ್‌ ಹೆದರಿ ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ವಿರುದ್ಧ ಮಂಡಿಯೂರಿದ ಪಾಕ್ – ಭಾರತದೊಂದಿಗೆ ಶಾಂತಿಯುತ ಮಾತುಕತೆಗೆ ಸಿದ್ಧ ಎಂದ ಪಾಕ್ ಪ್ರಧಾನಿ

ಈ ಬಗ್ಗೆ ಮಾತನಾಡಿರುವ ರುಬಿನ್, ಭಾರತವು ಆಪರೇಷನ್ ಸಿಂಧೂರ್​ ಅಡಿಯಲ್ಲಿ ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ಪಾಕಿಸ್ತಾನವು ಪ್ರತಿ ದಾಳಿ ನಡೆಸಿ ಭಾರತದ ಅಮಾಯಕರನ್ನು ಬಲಿಪಡೆದಿತ್ತು. ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗಳು ಧ್ವಂಸಗೊಂಡಿದ್ದವು. ಭಾರತವು ವಾಯು ನೆಲೆಯನ್ನು ನಿಷ್ಕ್ರಿಯಗೊಳಿಸಿದ ನಂತರ ‘ಪಾಕಿಸ್ತಾನವು ಹೆದರಿ ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ ಎಂದಿದ್ದಾರೆ.

ಪಾಕಿಸ್ತಾನ ಮಿಲಿಟರಿ ಭಾರತದೆದುರು ಸೋತಿದೆ, ಭಾರತವು ವಿಜಯಶಾಲಿಯಾಗಿದೆ. ಭಯೋತ್ಪಾದಕ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಭಾಗವಹಿಸಿದ್ದನ್ನು ನೋಡಿದರೆ, ಭಯೋತ್ಪಾದಕ ಮತ್ತು ಐಎಸ್‌ಐ ಅಥವಾ ಪಾಕಿಸ್ತಾನಿ ಸಶಸ್ತ್ರ ಪಡೆಗಳ ಸದಸ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತೋರುತ್ತದೆ. ಮೂಲತಃ, ಪಾಕಿಸ್ತಾನವು ತನ್ನದೇ ಆದ ವ್ಯವಸ್ಥೆಯಿಂದ ಕೊಳೆಯನ್ನು ಹೊರತೆಗೆಯಬೇಕೆಂದು ಜಗತ್ತು ಒತ್ತಾಯಿಸುತ್ತೆ ಎಂದಿದ್ದಾರೆ.

Shwetha M

Leave a Reply

Your email address will not be published. Required fields are marked *