ಆಪರೇಷನ್ ಕಾವೇರಿ – ಸುಡಾನ್ ನಿಂದ 3 ನೇ ಬ್ಯಾಚ್ ನಲ್ಲಿ 135 ಭಾರತೀಯರು ತಾಯ್ನಾಡಿಗೆ

ಆಪರೇಷನ್ ಕಾವೇರಿ – ಸುಡಾನ್ ನಿಂದ 3 ನೇ ಬ್ಯಾಚ್ ನಲ್ಲಿ 135 ಭಾರತೀಯರು ತಾಯ್ನಾಡಿಗೆ

ನವದೆಹಲಿ: ಕಳೆದ ಕೆಲವು ದಿನಗಳಿಂದ ಆಫ್ರಿಕಾದ ಸೂಡಾನ್  ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ತವರಿಗೆ ಕರೆತರುವ ಆಪರೇಷನ್ ಕಾವೇರಿ ಮುಂದುವರಿದಿದೆ. ಇದೀಗ ಐಎಎಫ್ ನ ಎರಡನೇ ವಿಮಾನ C-130J ದಲ್ಲಿ 135 ಭಾರತೀಯರ ಮೂರನೇ ಬ್ಯಾಚ್ ಸೂಡಾನ್‌ನಿಂದ ಹೊರಟಿದೆ.

ಇದನ್ನೂ ಓದಿ: ದೇಶದ ಮೊದಲ ವಾಟರ್ ಮೆಟ್ರೋಗೆ ಮೋದಿ ಚಾಲನೆ – ಏನಿದರ ವಿಶೇಷತೆ ?

ಮೂರನೇ ಬ್ಯಾಚ್ ನಲ್ಲಿ 135 ಜನರು ಭಾರತದ ಕಡೆ ಬರುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ನೌಕಾಪಡೆಯ ನೌಕೆ ಐಎನ್‌ಎಸ್ ಸುಮೇಧಾ 278 ಭಾರತೀಯರನ್ನು ಜೆಡ್ಡಾ ಬಂದರಿಗೆ ತಲುಪಿಸಿತ್ತು. “ಆಪರೇಷನ್ ಕಾವೇರಿ ಸಂಪೂರ್ಣ ಸ್ವಿಂಗ್‌ನಲ್ಲಿದೆ. ಐಎಎಫ್ ನ C-130J ಎರಡನೇ ವಿಮಾನವು ಪೋರ್ಟ್ ಸುಡಾನ್‌ನಿಂದ ಜೆಡ್ಡಾಗೆ ಹೊರಡುತ್ತಿದೆ. ಈ ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಆಪರೇಷನ್ ಕಾವೇರಿ ಅಡಿಯಲ್ಲಿ ಸ್ಥಳಾಂತರಿಸಲ್ಪಟ್ಟ ಮೂರನೇ ಬ್ಯಾಚ್ ಆಗಿದೆ” ಎಂದು ಎಂಇಎ ಟ್ವೀಟ್ ಮಾಡಿದೆ.

suddiyaana