80% ಮೈ ಮುಚ್ಚಿಕೊಂಡ್ರೆ ಮಾತ್ರ ದೇವಾಲಯಗಳಿಗೆ ಪ್ರವೇಶ! – ಇಲ್ಲಿ ಮಹಿಳೆಯರಿಗೆ ಹೊಸ ರೂಲ್ಸ್‌..

80% ಮೈ ಮುಚ್ಚಿಕೊಂಡ್ರೆ ಮಾತ್ರ ದೇವಾಲಯಗಳಿಗೆ ಪ್ರವೇಶ! – ಇಲ್ಲಿ ಮಹಿಳೆಯರಿಗೆ ಹೊಸ ರೂಲ್ಸ್‌..

ಡೆಹ್ರಾಡೂನ್: ಉತ್ತರಾಖಂಡದ ಮೂರು ದೇವಾಲಯಗಳಲ್ಲಿ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ತುಂಡುಡುಗೆ ಧರಿಸಿ ಬರುವ ಮಹಿಳೆಯರಿಗೆ ದೇವಸ್ಥಾನ ಪ್ರವೇಶವಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಶವಗಳ ನಡುವೆ ಮಿಡಿಯುತ್ತಿತ್ತು ಹೃದಯ.. ತಂದೆಯ ನಂಬಿಕೆ ಹುಸಿಯಾಗಲಿಲ್ಲ – ಪುತ್ರನನ್ನ ಕಾಪಾಡಿದ ಅಪ್ಪ  

ಈ ಬಗ್ಗೆ ಮಹಾನಿರ್ವಾಣಿ ಅಖಾರದ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಶ್ರೀಮಹಾಂತ್ ರವೀಂದ್ರ ಪುರಿ ಮಾತನಾಡಿದ್ದಾರೆ.  ಹರಿದ್ವಾರದ ಕಂಖಾಲ್‌ನಲ್ಲಿರುವ ದಕ್ಷ ಪ್ರಜಾಪತಿ ದೇವಾಲಯ, ಪೌರಿ ಜಿಲ್ಲೆಯ ನೀಲಕಂಠ ಮಹಾದೇವ ದೇವಾಲಯ ಮತ್ತು ಡೆಹ್ರಾಡೂನ್‌ನ ತಪಕೇಶ್ವರ ಮಹಾದೇವ ದೇವಾಲಯಗಳಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ದೇವಾಲಯವು ಆತ್ಮಾವಲೋಕನಕ್ಕೆ ಸ್ಥಳವಾಗಿದೆಯೇ ಹೊರತು ಮನರಂಜನೆಗಾಗಿ ಅಲ್ಲ. ಹೀಗಾಗಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಲ್ಲಿ ನಿಯಮ ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯರು ಮತ್ತು ಹುಡುಗಿಯರು ತುಂಡುಡುಗೆ ಧರಿಸಿ ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ. ಮಹಿಳೆಯರು ಮತ್ತು ಹುಡುಗಿಯರು ದೇವಾಲಯದ ಪೂಜೆಗೆ ಆಗಮಿಸುವುದಿದ್ದರೆ, ಭಾರತೀಯ ಸಂಪ್ರದಾಯದ ಪ್ರಕಾರ ಬಟ್ಟೆಗಳನ್ನು ಧರಿಸಬೇಕು. ಆಗ ಮಾತ್ರ ಅವರಿಗೆ ದೇವಾಲಯಕ್ಕೆ ಪ್ರವೇಶ ಸಿಗುತ್ತದೆ. ದೇಹದ 80% ನಷ್ಟು ಭಾಗವನ್ನು ಮುಚ್ಚಿಕೊಂಡು ಬಂದರೆ ದೇವಾಲಯಗಳಿಗೆ ಬರಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ದೇವಾಲಯಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಈಗ ಇಲ್ಲಿಯೂ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ಅಹಿತಕರ ಪರಿಸ್ಥಿತಿ ಎದುರಾಗಬಾರದು ಎಂದು ಅವರು ಹೇಳಿದ್ದಾರೆ.

suddiyaana