ಚುನಾವಣೆ ಸಂದರ್ಭದಲ್ಲಿ ಮಾತ್ರ JDS ಬಳಸಿಕೊಳ್ಳುತ್ತಿದೆ – JDS ಮೇಲೆ ಮತ್ತೆ ಜಿ.ಟಿ. ದೇವೇಗೌಡರ ಮನಿಸು

ಜಿ.ಟಿ. ದೇವೇಗೌಡರು ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ತಮ್ಮ ಅಸಮಾಧಾನವನ್ನು ಮತ್ತೆ ಹೊರ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜಿಟಿ ದೇವೇಗೌಡರನ್ನು ಬಳಸಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆಯೂ ಮಾತನಾಡಿದ್ದು, ಉಭಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಒಂದಾಗುವ ಸಾಧ್ಯತೆ ಇರುತ್ತೆ ಎಂದು ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ GTD ಪಕ್ಷ ಕಟ್ಟುವಂತಹದ್ದು ಎಷ್ಟು ಕಷ್ಟ ಅಂತ ಹೆಚ್ ಡಿ ದೇವೇಗೌಡರಿಗೆ ಗೊತ್ತು, ಸಿದ್ದರಾಮಯ್ಯಗೆ ಗೊತ್ತು. ಜಿ ಟಿ ದೇವೇಗೌಡ ತಳ ಹಂತದಿಂದ ಪಕ್ಷ ಹೇಗೆ ಕಟ್ಟಿದರು ಅಂತಲೂ ಗೊತ್ತು. ಜಿ.ಟಿ ದೇವೇಗೌಡರನ್ನು ಚುನಾವಣೆ ಸಂಧರ್ಭದಲ್ಲಿ ಮಾತ್ರ ಬಳಕೆ ಮಾಡಿಕೊಳ್ಳುತ್ತಾರೆ ಅಷ್ಟೇ ಎಂದು ಹೇಳಿದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಪಕ್ಷವನ್ನು ಅವರು ಸಂಘಟನೆ ಮಾಡುತ್ತಿದ್ದಾರೆ. ಇವರ ಪಕ್ಷವನ್ನು ಇವರು ಮಾಡ್ತಾ ಇದ್ದಾರೆ. ಜೆಡಿಎಸ್ ಪಕ್ಷವನ್ನು ನಿಖಿಲ್ ಕುಮಾರಸ್ವಾಮಿ ಸಂಘಟನೆ ಮಾಡುತ್ತಿದ್ದಾರೆ. ಅವರ ಪಕ್ಷ ಅವರು ಕಟ್ಟಲಿ, ಇವರ ಪಕ್ಷ ಇವರು ಕಟ್ಟಲಿ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಟ್ಟಾಗಿದ್ರಲ್ಲಾ ಹಾಗೆಯೇ ಮುಂದಿನ ಚುನಾವಣೆಯಲ್ಲೂ ಒಂದಾಗುತ್ತಾರೆ ಎಂದು ಹೇಳಿದರು
ಜಿ.ಟಿ. ದೇವೇಗೌಡರಿಗೆ ಮುನಿಸು ಹೊಸದಲ್ಲ. ಈ ಹಿಂದೆಯೂ ಪಕ್ಷದ ಬಗ್ಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದರು. ಪಕ್ಷದಲ್ಲಿ ಸೂಕ್ತ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಕೊಟ್ಟ ಸ್ಥಾನ ಹಾಗೂ ಜಿಟಿಡಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ನಿರೀಕ್ಷೆಯಲ್ಲಿದ್ದರು . ಆದರೆ ಆ ಸ್ಥಾನ ಸುರೇಶ್ ಬಾಬುಗೆ ಸಿಕ್ಕಿತು. ಇದರಿಂದಲೂ ಅವರು ಅಸಮಾಧಾನ ಹೊರಹಾಕಿ ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದಿದ್ದು, ಜೆಡಿಎಸ್ ಪಕ್ಷಕ್ಕೆ ಭಾರಿ ತಲೆನೋವಾಗಿತ್ತು.
ಕೋರ್ಟ್ ತೀರ್ಪು ದೇವರು ಕೊಟ್ಟಂತೆ
ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರ ಜಿಟಿಡಿ ಪತ್ರಿಕಾ ರಂಗ, ಶಾಸಕಾಂಗ, ನ್ಯಾಯಾಂಗ ಸೇರಿದಂತೆ ಯಾವುದೇ ಹಂತದಲ್ಲಿ ತಪ್ಪಾದಾಗ ಸರಿಪಡಿಸುವಂತಹದ್ದು ನ್ಯಾಯಾಂಗ.
ನ್ಯಾಯಾಂಗದ ತೀರ್ಪು ಒಂದು ದೇವರ ತೀರ್ಪು ಅಂತ ಜನ ಈಗಲೂ ನಂಬಿದ್ದಾರೆ. ಮೇಲ್ಮಟ್ಟದ ನ್ಯಾಯಾಲಯಕ್ಕೆ ಹೋಗಲು ಅವಕಾಶ ಕೊಟ್ಟಿದ್ದಾರೆ. ನ್ಯಾಯಾಲಯದ ತೀರ್ಪನ್ನು ಪರಾಮರ್ಶೆ ಮಾಡುವಷ್ಟು ಶಕ್ತಿ ನನಗಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.

ನೋಡಿರಿ

