ಇನ್ಸ್‌ಪೆಕ್ಟರ್‌, ಮೇಲಾಧಿಕಾರಿಗಳಷ್ಟೇ ಡ್ರಂಕ್ & ಡ್ರೈವ್ ತಪಾಸಣೆ ಮಾಡ್ಬೇಕು – ಸಂಚಾರಿ ಪೊಲೀಸರಿಂದ ಹೊಸ ರೂಲ್ಸ್‌

ಇನ್ಸ್‌ಪೆಕ್ಟರ್‌, ಮೇಲಾಧಿಕಾರಿಗಳಷ್ಟೇ ಡ್ರಂಕ್ & ಡ್ರೈವ್ ತಪಾಸಣೆ ಮಾಡ್ಬೇಕು – ಸಂಚಾರಿ ಪೊಲೀಸರಿಂದ ಹೊಸ ರೂಲ್ಸ್‌

ಬೆಂಗಳೂರು: ಇನ್ನುಮುಂದೆ ಸಿಕ್ಕ ಸಿಕ್ಕಲ್ಲಿ ಕಾನ್‌ಸ್ಟೇಬಲ್‌ ಹಾಗೂ ಎಎಸ್‌ಐಗಳು ಡ್ರಿಂಕ್ & ಡ್ರೈವ್  ತಪಾಸಣೆ ನಡೆಸುವಂತಿಲ್ಲ. ಇನ್ಸ್‌ಪೆಕ್ಟರ್ ಹಾಗೂ ಅವರ ಮೇಲಿನ ಅಧಿಕಾರಿಗಳು ಮಾತ್ರ ಡ್ರಿಂಕ್ & ಡ್ರೈವ್ ತಪಾಸಣೆ ನಡೆಸಬೇಕೆಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಡ್ರಿಂಕ್ & ಡ್ರೈವ್  ತಪಾಸಣೆ ನಡೆಸಿ ಎಎಸ್‍ಐ ಹಾಗೂ ಕಾನ್‍ಸ್ಟೇಬಲ್ ಹೆಸರಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆ  ಪೊಲೀಸ್ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಇನ್ಸ್‌ಪೆಕ್ಟರ್ ಹಾಗೂ ಅವರ ಮೇಲಿನ ಅಧಿಕಾರಿಗಳಷ್ಟೇ ಡ್ರಿಂಕ್ & ಡ್ರೈವ್ ತಪಾಸಣೆ ನಡೆಸುವಂತೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಒಂದು ವಾರದಲ್ಲಿ ಬರೋಬ್ಬರಿ 70 ಲಕ್ಷ ಮಂದಿ ನೋಂದಣಿ!

ಇಷ್ಟು ದಿನ ಎಎಸ್‍ಐ ಹಾಗೂ ಕಾನ್‍ಸ್ಟೇಬಲ್‌ಗಳು ಪ್ರತಿನಿತ್ಯ ಸಿಕ್ಕ ಸಿಕ್ಕಲಿ ವಾಹನ ಅಡ್ಡಗಟ್ಟಿ ತಪಾಸಣೆ ನಡೆಸುತ್ತಿದ್ದರು. ಇನ್ನು ಮುಂದೆ ವಾಹನ ಸವಾರರಿಗೆ ಈ ಕಿರಿಕಿರಿಯೂ ಇರೋದಿಲ್ಲ. ವಾರದಲ್ಲಿ ಎರಡು ದಿನ ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ನಡೆಸುವಂತೆ ಸಂಚಾರಿ ಪೊಲೀಸರ ಸಭೆಯಲ್ಲಿ ಸೂಚಿಸಲಾಗಿದೆ. ಇದರಿಂದಾಗಿ ಎಎಸ್‍ಐ ಹಾಗೂ ಕಾನ್‍ಸ್ಟೇಬಲ್ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆಯನ್ನು ನಿಲ್ಲಿಸಲು ಇಲಾಖೆ ಈ ಪ್ರಯೋಗಕ್ಕೆ ಮುಂದಾಗಿದೆ.

ಸುಲಿಗೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹಲವಾರು ದೂರುಗಳು ಕೇಳಿ ಬಂದಿದ್ದವು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಣ ಪಡೆದು ಕೇಸ್ ಹಾಕದೆ ಕಳಿಸುತ್ತಾರೆ ಎಂದು ಹಲವರು ಆರೋಪಿಸಿದ್ದರು. ಇದೇ ಕಾರಣಕ್ಕೆ ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳು ಈ ಸೂಚನೆ ನೀಡಿದ್ದಾರೆ.

suddiyaana