“ಬಿಜೆಪಿಯಿಂದ ಬರೀ ಸುಳ್ಳು ಪ್ರಚಾರ”– ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಸೂರತ್: ಸಣ್ಣಪುಟ್ಟ ಯೋಜನೆಗಳಿಗೂ ದೇಶಾದ್ಯಂತ ಸುಳ್ಳು ಪ್ರಚಾರ ಮಾಡುವುವುದಕ್ಕೆ ಬಿಜೆಪಿ ಆದ್ಯತೆ ನೀಡುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್ ರಾವ್ ಟೀಕಾಪ್ರಹಾರ ನಡೆಸಿದ್ದಾರೆ.
ಡಿಸೆಂಬರ್‌ನಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾಸ್ಕರ್ ರಾವ್, ಸೂರತ್ ಜಿಲ್ಲೆಯ ಕತಾರ್‌ಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಗುಜರಾತ್ ಎಎಪಿ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಪರ ಮತಯಾಚನೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಶಶಿ ತರೂರ್ ಕೇರಳ ಪ್ರವಾಸ – ಕಾಂಗ್ರೆಸ್ ನಲ್ಲಿ ಭಿನ್ನಮತ ಉಲ್ಬಣ
“ದಿಲ್ಲಿ ಹಾಗೂ ಪಂಜಾಬ್ ನಂತರ ಇದೀಗ ಗುಜರಾತ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿಯು ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸುವ ಬದಲು, ಇಲ್ಲಿನ ಸಣ್ಣಪುಟ್ಟ ಯೋಜನೆಗಳಿಗೆ ದೇಶಾದ್ಯಂತ ಸುಳ್ಳು ಪ್ರಚಾರ ಪಡೆಯುವುದಕ್ಕೆ ಆದ್ಯತೆ ನೀಡಿದೆ” ಎಂದಿದ್ದಾರೆ.
“ಗುಜರಾತ್ ಮಾಡೆಲ್ ಎನ್ನುವುದು ಕಳಪೆ ಮಾಡೆಲ್ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಗುಣಮಟ್ಟದ ಮೂಲಸೌಕರ್ಯಗಳಿಗಾಗಿ ಅವರು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ಹಣಬಲ ಹಾಗೂ ತೋಳ್ಬಲದ ನಡುವೆಯೂ ಆಮ್ ಆದ್ಮಿ ಪಾರ್ಟಿಗೆ ಜನಬೆಂಬಲವು ವ್ಯಾಪಕವಾಗಿ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ವಿವಿಧ ಮಾಧ್ಯಮಗಳ ಇತ್ತೀಚಿನ ಸಮೀಕ್ಷೆಗಳು ಕೂಡ ಇದನ್ನು ದೃಢಪಡಿಸಿವೆ” ಎಂದು ಹೇಳಿದರು.