ಧೂಳು ಹಿಡಿದ ಫೆರಾರಿ KL ರಾಹುಲ್ – BCCI ಆಟಕ್ಕೆ ಖದರ್ ಕಳ್ಕೊಂಡ್ರಾ?
ವೈಭವ್ & ಸಂಜುನಂತೆಯೇ ಮೋಸ?

ಧೂಳು ಹಿಡಿದ ಫೆರಾರಿ KL ರಾಹುಲ್ – BCCI ಆಟಕ್ಕೆ ಖದರ್ ಕಳ್ಕೊಂಡ್ರಾ?ವೈಭವ್ & ಸಂಜುನಂತೆಯೇ ಮೋಸ?

ಐರ್ಲೆಂಡ್ ವಿರುದ್ಧದ ಕ್ಲೀನ್ ಸ್ವೀಪ್ ಇರ್ಬೋದು.. ಇಂಗ್ಲೆಂಡ್ ವಿರುದ್ಧದ ವೈಟ್​ಬಾಲ್ ಸಿರೀಸ್​ಗಳ ಸೋಲು ಇರ್ಬೋದು. ಮ್ಯಾನೇಜ್​ಮೆಂಟ್ ಮಿಸ್ಟೇಕ್​ಗಳಿಂದಲೇ ಟೀಂ ಇಂಡಿಯಾ ಸೋತಿರೋದು. ಬೇಡದೇ ಇರೋ ಪ್ರಯೋಗಗಳನ್ನ ಮಾಡೋಕೆ ಹೋಗಿ ಅದು ಬ್ಯಾಕ್ ಫೈಯರ್ ಆಗಿದೆ. ಕೆಎಲ್ ರಾಹುಲ್ ವಿಚಾರದಲ್ಲಂತೂ ಚಿನ್ನದ ಹುಂಡಿಯನ್ನ ಚಿಲ್ಲರೆ ಕಾಸು ಹಾಕೋಕೆ ಇಟ್ಕೊಂಡ್ರು ಅನ್ನೋ ಹಾಗೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಮಾಡಿಬಿಟ್ಟಿದ್ದಾರೆ.

ಇದನ್ನೂ ಓದಿ : ಶತಕದಲ್ಲೇ ಗೆದ್ದ HITಮ್ಯಾನ್ – LORD’S ಅಬ್ಬರ ಬಾಯಿ ಮುಚ್ಚಿಸಿತಾ?

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಮೊದಲ ಹಾಗೇ ಮೂರನೇ ಮ್ಯಾಚಲ್ಲಿ ಆಡಿದ್ರು. ಎರಡೂ ಮ್ಯಾಚ್​ಗಳಲ್ಲೂ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರು. ಎರಡನೇ ಪಂದ್ಯದಲ್ಲಿ ಹೆಲ್ತ್ ಇಶ್ಯೂನಿಂದಾಗಿ ತಂಡದಿಂದ ಹೊರಗಿದ್ರು. ಮೊದಲ ಮ್ಯಾಚಲ್ಲಿ 1 ರನ್ ಗಳಿಸಿ ಔಟಾಗಿದ್ದ ರಾಹುಲ್ ಕೊನೇ ಮ್ಯಾಚಲ್ಲಿ 12 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಕೆಎಲ್ ರಾಹುಲ್ ಬ್ಯಾಟಿಂಗ್​ನಲ್ಲಿ ಫೇಲ್ಯೂರ್ ಆಗ್ತಿರೋದಕ್ಕೆ ಕಾರಣ ಮ್ಯಾನೇಜ್​ಮೆಂಟ್ ತೆಗೆದುಕೊಳ್ತಿರೋ ನಿರ್ಧಾರ ಅಂತಾ ಮಾಜಿ ಕ್ರಿಕೆಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೊಡ್ಡ ಗಣೇಶ್ ಅಂತೂ ಇಂಟ್ರೆಸ್ಟಿಂಗ್ ಎಕ್ಸಾಂಪಲ್ ನೀಡಿದ್ದಾರೆ.

ಶೆಡ್ ನಲ್ಲಿ ಧೂಳು ಹಿಡಿದ ಫೆರಾರಿ ಕಾರು ಕೆಎಲ್ ರಾಹುಲ್!

ಇಂಗ್ಲೆಂಡ್ ವಿರುದ್ಧ ಭಾರತ ಸರಣಿ ಸೋತ ಮೇಲೆ ಮತ್ತೆ  ಕೆಎಲ್ ರಾಹುಲ್ ಅವ್ರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮತ್ತೆ ಚರ್ಚೆಯಾಗ್ತಿದೆ. ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಫೆರಾರಿ ಕಾರಿನ ಬಗ್ಗೆ ಎಕ್ಸಾಂಕಲ್ ನೀಡಿ ಕೆಎಲ್ ರಾಹುಲ್ ಪರಿಸ್ಥಿತಿಯನ್ನ ಹೇಳಿದ್ದಾರೆ. ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಬೆಸ್ಟ್ ನಂಬರ್ ಹೊಂದಿರೋ ರಾಹುಲ್ ರನ್ನು 6ನೇ ಕ್ರಮಾಂಕದಲ್ಲಿ ಆಡಿಸೋದು ಯಾವುದೇ ತರ್ಕಕ್ಕೆ ನಿಲುಕದ್ದು ಎಂದು ಬಿಸಿಸಿಐಗೆ ನೇರವಾಗಿ ಹೇಳಿದ್ದಾರೆ. ರಾಹುಲ್ ಹೇಳಿ ಕೇಳಿ ಪ್ಯೂರ್ ಬ್ಯಾಟರ್.. ಹೀಗಿದ್ರೂ ನಂಬರ್ 6ನಲ್ಲಿ ಆಡಿಸಿ ಫೇಲ್ಯೂರ್​ಗೆ ಕಾರಣ ಆಗ್ತಿದ್ದಾರೆ. ಶೆಡ್​ನಲ್ಲಿ ನಿಲ್ಲಿಸಿರೋ ಫೆರಾರಿ ಕಾರಿನಂತೆ ಆಗ್ತಿದೆ. ಐಷಾರಾಮಿ ಕಾರು ಶೆಡ್​​ನಲ್ಲಿ ಹೇಗೆ ಧೂಳು ಹಿಡಿಯುತ್ತಿದೆಯೋ ಅದೇ ರೀತಿ ರಾಹುಲ್ ಟ್ಯಾಲೆಂಟ್​ನೂ ಹಾಳು ಮಾಡ್ತಿದ್ದಾರೆ ಎಂದು ಗೌತಮ್ ಗಂಭೀರ್ ಮತ್ತು ಗಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೇ ಮಾಜಿ ಕ್ರಿಕೆಟಿಗರ ಕೆ.ಶ್ರೀಕಾಂತ್ ಕೂಡ ಮ್ಯಾನೇಜ್​ಮೆಂಟ್ ವಿರುದ್ಧ ಕೆಂಡವಾಗಿದ್ದಾರೆ.

ಬಿಗ್ ಟಾರ್ಗೆಟ್ ಬೆನ್ನಟ್ಟುವಾಗ ಕೆಎಲ್ ಗೆ 6ನೇ ಕ್ರಮಾಂಕ ಯಾಕೆ?

ಇಂಗ್ಲೆಂಡ್ ವಿರುದ್ಧದ ಕೊನೇ ಮ್ಯಾಚಲ್ಲಿ ಆಂಗ್ಲರು 388 ರನ್​ಗಳ ಬಿಗ್ ಟಾರ್ಗೆಟ್ ನೀಡಿದ್ರು. ಈ ಗುರಿ ಬೆನ್ನಟ್ಟಿದ ಭಾರತ 40 ಓವರ್​ಗಳವರೆಗೂ ರೇಸ್​ನಲ್ಲೇ ಇತ್ತು. ಆದ್ರೆ ಯಾವಾಗ ಕೊಹ್ಲಿ ಮತ್ತು ರೋಹಿತ್ ಔಟ್ ಆದ್ರೋ ಅಲ್ಲಿಂದ ರನ್ಸ್ ಬರಲಿಲ್ಲ. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಹಾಗೇ ಕೆಎಲ್ ರಾಹುಲ್ ಬೇಗನೇ ಔಟ್ ಆದ್ರು. ಈ ಪಂದ್ಯದಲ್ಲೂ ರಾಹುಲ್ 6ನೇ ಸ್ಲಾಟ್​ನಲ್ಲೇ ಕ್ರೀಸ್​ಗೆ ಬಂದಿದ್ರು. ಇದನ್ನೇ ಪ್ರಶ್ನೆ ಮಾಡಿರುವ ಶ್ರೀಕಾಂತ್ ಗಂಭೀರ್ ಮತ್ತು ಟೀಮ್​ಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ. ಇಷ್ಟು ಬಿಗ್ ಟಾರ್ಗೆಟ್ ಇದ್ದಾಗ ರಾಹುಲ್​ರನ್ನ 6ನೇ ಕ್ರಮಾಂಕದಲ್ಲಿ ಕಳಿಸ್ತಾರಾ ಅಂತಾ ಪ್ರಶ್ನಿಸಿದ್ದಾರೆ. ಹಾಗೇ ಸಂಜು ಸ್ಯಾಮ್ಸನ್ ಮತ್ತು ಸೂರ್ಯವಂಶಿ ವಿಚಾರದಲ್ಲಿ ಮಾಡಿದಂತೆಯೇ ರಾಹುಲ್ ವಿಚಾರದಲ್ಲೂ ಎಡವಟ್ಟು ಮಾಡ್ತಿದ್ದೀರಿ. ಇದು ಅನ್ಯಾಯ. ರಾಹುಲ್ ಒಂದ್ವೇಳೆ 4ನೇ ಕ್ರಮಾಂಕದಲ್ಲಿ ಬಂದಿದ್ರೆ ವಿರಾಟ್ ಕೊಹ್ಲಿಗೆ ಒಳ್ಳೆ ಸಪೋರ್ಟ್ ನೀಡ್ತಿದ್ರು. ಅದನ್ನ ಬಿಟ್ಟು ಓವರ್​ಗೆ 15, 16 ಬೇಕಿದ್ದಾಗ ಅವ್ರನ್ನ ಬ್ಯಾಟಿಂಗ್​ಗೆ ಕಳಿಸಿದ್ರೆ ಹೇಗೆ ತಾನೆ ಗೆಲ್ಲೋಕೆ ಸಾಧ್ಯ ಅಂತಾ ಪ್ರಶ್ನೆ ಮಾಡಿದ್ದಾರೆ. ಌಕ್ಚುಲಿ ನಂಬರ್ 5ನಲ್ಲಿ ಕೆಎಲ್ ರಾಹುಲ್ ರೆಕಾರ್ಡ್ಸ್ ಚೆನ್ನಾಗಿದೆ. 2023ರ ವಿಶ್ವಕಪ್​ನಲ್ಲೂ ನಂಬರ್ 5ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಓವರ್ ಆಲ್ ಕೆರಿಯರ್​ನಲ್ಲಿ ರಾಹುಲ್ ನಂಬರ್ 5ನಲ್ಲಿ 38 ಇನ್ನಿಂಗ್ಸ್​​ಗಳಲ್ಲಿ ಬ್ಯಾಟ್ ಬೀಸಿದ್ದು 63+ ಆವರೇಜ್​ನಲ್ಲಿ 1517 ರನ್ಸ್ ಕಲೆ ಹಾಕಿದ್ದಾರೆ. ಆದ್ರೆ ನಂಬರ್ 6 ಬ್ಯಾಟಿಂಗ್​ನಲ್ಲಿ ರನ್ಸ್ ಬಂದಿಲ್ಲ. ಪದೇಪದೆ ಸ್ಲಾಟ್ ಬದಲಾವಣೆ ಆಗ್ತಿರೋದ್ರಿಂದ ಅಭದ್ರತೆಯ ಭಯ ಕಾಡ್ತಿರೋದ್ರಿಂದಲೇ ರನ್ಸ್ ಬರ್ತಿಲ್ಲ ಅನ್ನೋದು ಶ್ರೀಕಾಂತ್ ವಾದ. ಒಟ್ನಲ್ಲಿ ಟೀಂ ಇಂಡಿಯಾದ ಸೋಲಿನಲ್ಲಿ ಆಟಗಾರರ ಕಳಪೆ ಪ್ರದರ್ಶನದ ಪಾತ್ರ ಎಷ್ಟಿದೆಯೋ ಅದಕ್ಕಿಂತ ಜಾಸ್ತಿ ಗೌತಮ್ ಗಂಭೀರ್ ಮತ್ತು ಮ್ಯಾನೇಜ್​ಮೆಂಟ್ ಮಾಡಿರೋ ಮಿಸ್ಟೇಕ್ಸ್​ ಕೂಡ ಕಾರಣ ಆಗ್ತಿದೆ.

Shantha Kumari

Leave a Reply

Your email address will not be published. Required fields are marked *