ಅಯೋಧ್ಯೆಯಲ್ಲಿ ಹರಿದು ಬಂತು ಭಕ್ತಸಾಗರ – ಮೊದಲ ದಿನದ ಆನ್ಲೈನ್ ಕಾಣಿಕೆ ಬರೋಬ್ಬರಿ 3.17 ಕೋಟಿ ರೂ.!

ಅಯೋಧ್ಯೆಯಲ್ಲಿ ಹರಿದು ಬಂತು ಭಕ್ತಸಾಗರ – ಮೊದಲ ದಿನದ ಆನ್ಲೈನ್ ಕಾಣಿಕೆ ಬರೋಬ್ಬರಿ 3.17 ಕೋಟಿ ರೂ.!

ರಾಮಮಂದಿರ ಲೋಕಾರ್ಷಣೆಗೊಂಡಿದ್ದು, ಲಕ್ಷಾಂತರ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಅಯೋಧ್ಯೆಗೆ ತೆರಳುತ್ತಿದ್ದಾರೆ. ಮಂಗಳವಾರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಿದ್ದು, ಲಕ್ಷಾಂತರ ಭಕ್ತರು ರಾಮಲಲ್ಲಾನ ಪಡೆದಿದ್ದಾರೆ.  ಮಂಗಳವಾರ ಒಂದೇ ದಿನ ರಾಮಲಲ್ಲಾಗೆ ಆನ್‌ಲೈನ್‌ನಲ್ಲಿ 3 ಕೋಟಿ 17 ಲಕ್ಷ ರೂ. ಕಾಣಿಕೆ ಹರಿದುಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 75ನೇ ಗಣರಾಜ್ಯೋತ್ಸವ ಸಂಭ್ರಮ – ರಾಜ್ಯದ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಜ.25, 26ರಂದು ದೀಪಾಲಂಕಾರ

ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಪ್ರಾಣ ಪ್ರತಿಷ್ಠೆಯ ದಿನದಂದು 10 ದೇಣಿಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಇದಲ್ಲದೆ, ದೇಶ ಮತ್ತು ಪ್ರಪಂಚದಾದ್ಯಂತದ ಅನೇಕ ಭಕ್ತರು ಶ್ರೀರಾಮನಿಗೆ ಆನ್‌ಲೈನ್ ದೇಣಿಗೆಗಳನ್ನು ಕಳುಹಿಸಿದ್ದಾರೆ. ಮಂಗಳವಾರ 5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಬುಧವಾರ ಅಷ್ಟೇ ಸಂಖ್ಯೆಯಲ್ಲಿ ಭೇಟಿ ನೀಡಿದರು. ಮಂಗಳವಾರ ಆನ್‌ಲೈನ್‌ನಲ್ಲಿ 3.17 ಕೋಟಿ ರೂ. ಕಾಣಿಕೆ ಬಂದಿದೆ. ಬುಧವಾರ ಪಡೆದ ಮೊತ್ತವನ್ನು ಮರುದಿನ ಕೋಷ್ಟಕದ ನಂತರ ಬಹಿರಂಗಪಡಿಸಲಾಗುವುದು ಎಂದು ಮಿಶ್ರಾ ಅವರು ತಿಳಿಸಿದ್ದಾರೆ.

ಪ್ರತಿ ಸೋಮವಾರ ಮಂದಿರದ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ರಾಮಮಂದಿರ ಆವರಣದಲ್ಲಿ 10 ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಪ್ರಾಣ ಪ್ರತಿಷ್ಠಾಪನೆ ದಿನ ದೇಣಿಗೆ ಸ್ವೀಕರಿಸಲು 10 ಕೌಂಟರ್ ಶುರು ಮಾಡಲಾಗಿತ್ತು. ಇದರ ಲೆಕ್ಕ ಇನ್ನಷ್ಟೇ ಸಿಗಬೇಕಿದೆ. ದೇವಸ್ಥಾನದಲ್ಲಿ ದರ್ಶನವನ್ನು ವ್ಯವಸ್ಥಿತವಾಗಿ ಮಾಡಲು ಆಡಳಿತದೊಂದಿಗೆ ಸಮಾಲೋಚಿಸಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಟ್ರಸ್ಟ್‌ನ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಯೋಧ್ಯೆಯ ಸುತ್ತಮುತ್ತಲಿನ ಸಂಘದ ಕಾರ್ಯಕರ್ತರಿಗೆ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳಲು ಮತ್ತು ಸುವ್ಯವಸ್ಥಿತ ದೇವಾಲಯ ದರ್ಶನಕ್ಕೆ ಸಹಕರಿಸುವಂತೆ ಸೂಚನೆ ನೀಡಿದ್ದಾರೆ.

Shwetha M