ಮತ್ತಷ್ಟು ಹದಗೆಟ್ಟ ಪಾಪಿ ಪಾಕ್ ಆರ್ಥಿಕ ಪರಿಸ್ಥಿತಿ – ಗೋಧಿಹಿಟ್ಟು ₹800, ಬಾಳೆಹಣ್ಣು ಕೆಜಿಗೆ 200 ರುಪಾಯಿ!

ಉಗ್ರಕೃತ್ಯಗಳಿಂದಲೇ ವಿಶ್ವಮಟ್ಟದಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಪಾಕಿಸ್ತಾನದ ಸ್ಥಿತಿ ಈಗಾಗಲೇ ಅದೋಃಗತಿಗೆ ತಲುಪಿದೆ. ಪಾಪಿ ಪಾಕಿಸ್ತಾನದಲ್ಲಿ ಕಡು ಬಡತನದ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಗೋಧಿ ಹಿಟ್ಟು, ಬಾಳೆಹಣ್ಣುಗಳ ಬೆಲೆ ಜನಸಾಮಾನ್ಯರಿಗೆ ತಲೆ ತಿರುಗುವಂತೆ ಮಾಡಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರೋದು ಗೊತ್ತಾ? – ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟಿಸ್ ಜಾರಿ!
ಹೌದು, ಪಾಪಿ ಪಾಕಿಸ್ತಾನದ ಸ್ಥಿತಿ ದಿನದಿಂದ ದಿನಕ್ಕೆ ತೀರಾ ಹದಗೆಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗುವಂತೆ ಮಾಡಿದೆ. ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಈಗ 1 ಕೇಜಿ ಗೋಧಿ ಹಿಟ್ಟಿನ ಬೆಲೆ 800 ರು. ದಾಟಿದೆ. ಹೀಗಾಗಿ ಒಂದು ರೊಟ್ಟಿ 25 ರು.ಗಿಂತ ಕಮ್ಮಿಗೆ ಸಿಗುತ್ತಿಲ್ಲ. ಅಲ್ಲದೆ ಬಾಳೆಹಣ್ಣು ಬೆಲೆ ಕೂಡ 200 ರು. ಗಡಿ ದಾಟಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಹಣದುಬ್ಬರ ಈಗಾಗಲೇ ಶೇ.25 ಇದ್ದು ಏಷ್ಯಾದಲ್ಲೇ ಗರಿಷ್ಠವಾಗಿದೆ. ಪಾಕಿಸ್ತಾನವು ಪ್ರಸ್ತುತ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬೇಲ್‌ಔಟ್ ಪ್ಯಾಕೇಜ್‌ಗಳಲ್ಲಿ ಉಳಿದುಕೊಂಡಿದೆ. ಹೀಗಾಗಿ ಇತ್ತೀಚೆಗೆ ಪಾಕ್‌ನ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ವಿತ್ತೀಯ ಸಹಾಯವನ್ನು ಪಡೆಯಲು ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಆದರೆ ಅಲ್ಲಿ ಸಹಾಯ ಪಡೆಯುವಲ್ಲಿ ಶೆಹಬಾಜ್ ಯಶಸ್ವಿಯಾಗಿಲ್ಲ.
ಪಾಕ್‌ನಲ್ಲಿ ಇಷ್ಟೆಲ್ಲಾ ಆರ್ಥಿಕ ಮುಗ್ಗಟ್ಟು ಇದ್ದರು ಅಲ್ಲಿನ ಸಿರಿವಂತರ ದುಂದುವೆಚ್ಚಕ್ಕೆ ಮಾತ್ರ ಕಡಿವಾಣ ಸಿಕ್ಕಿಲ್ಲ. ಅಲ್ಲಿನ ಶ್ರೀಮಂತರು ಮದುವೆ ಊಟಕ್ಕೆ ಮನಬಂದಂತೆ ಹಣ ಹಾಗೂ ಆಹಾರಧಾನ್ಯ ಪೋಲು ಮಾಡುತ್ತಿದ್ದಾರೆ. ಹೀಗಾಗಿ ಬೆಲೆ ನಿಯಂತ್ರಣ ಹಾಗೂ ಆಹಾರ ಪೋಲು ನಿಯಂತ್ರಣ ಉದ್ದೇಶದಿಂದ ಮದುವೆ ತಿನಿಸು ಹಾಗೂ ಭಕ್ಷ್ಯಗಳಿಗೆ ಲಗಾಮು ಹಾಕಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ವಿಶೇಷವಾಗಿ ಮದುವೆಗಳು ಮತ್ತು ಸಮಾರಂಭಗಳಲ್ಲಿ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ‘ಒಂದು ಭಕ್ಷ್ಯ’ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದ್ದಾರೆ.
ಈ ನೀತಿಯನ್ನು 2016 ರಲ್ಲಿ ಮೊದಲು ಜಾರಿಗೆ ತರಲಾಯಿತು ಆದರೆ ಜನರು ಅದನ್ನು ಅನುಸರಿಸಲಿಲ್ಲ. ಇದೀಗ ಈ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಒಂದು ಭಕ್ಷ್ಯ”” ನೀತಿಯ ಪ್ರಕಾರ, ಮದುವೆಯ ಪಾರ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಭಕ್ಷ್ಯಗಳನ್ನು ಅನುಮತಿಸಲಾಗುವುದಿಲ್ಲ. ಇದರರ್ಥ, ಆಹಾರ ಮೆನುವಿನಲ್ಲಿ ಕೇವಲ ತಲಾ ಒಂದು ತರಕಾರಿ, ಅನ್ನ, ರೊಟ್ಟಿ, ದಾಲ್, ಸಲಾಡ್, ತಂಪು ಪಾನೀಯ ಮತ್ತು ಒಂದು ಸಿಹಿತಿಂಡಿಯನ್ನು ನೀಡಲು ಅನುಮತಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಸರ್ಕಾರಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಮತ್ತು ದಂಡ ವಿಧಿಸುತ್ತಿದ್ದಾರೆ.