ಪ್ರತ್ಯಕ್ಷವಾಯ್ತು ಒಕ್ಕಣ್ಣಿನ ನಾಗಿಣಿ – ಕಾರವಾರದಲ್ಲಿ ಕಾಣಿಸಿಕೊಂಡ ಅಪರೂಪದ ನಾಗರ..!

ಪ್ರತ್ಯಕ್ಷವಾಯ್ತು ಒಕ್ಕಣ್ಣಿನ ನಾಗಿಣಿ – ಕಾರವಾರದಲ್ಲಿ ಕಾಣಿಸಿಕೊಂಡ ಅಪರೂಪದ ನಾಗರ..!

ಹಾವು ಅಂದರೆ ಹೌಹಾರುವ ಮಂದಿಯೇ ಹೆಚ್ಚು. ಅದರಲ್ಲೂ ನಾಗರಹಾವು ಕಂಡರೆ ಇನ್ನೂ ಭಯ. ಕಾರವಾರದಲ್ಲೊಂದು ಹಾವು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಯಾಕೆಂದರೆ, ಅಲ್ಲಿ ಕಂಡು ಬಂದಿದ್ದು ಒಕ್ಕಣ್ಣಿನ ಹಾವು. ಅದೂ ಕೂಡಾ ಒಕ್ಕಣ್ಣಿನ ನಾಗಿಣಿ ಅನ್ನೋದು ಇನ್ನೊಂದು ವಿಶೇಷ. ಒಕ್ಕಣ್ಣಿನ ಹಾವು ಕಾಣಿಸುವುದು ತುಂಬಾ ವಿರಳ. ಕಾರವಾರ ತಾಲೂಕಿನ ಮಲ್ಲಾಪುರದಲ್ಲಿ ಒಕ್ಕಣ್ಣಿನ ಹಾವೊಂದು ಕಂಡು ಬಂದಿದೆ. ಈ ನಾಗರಹಾವು ಒಂದು ಕಣ್ಣಿನ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದೆ. ಒಂದೇ ಕಣ್ಣು ಇರುವ ನಾಗರಹಾವು ಸುಮಾರು 4.5 ಅಡಿಯ ಉದ್ದ ಇದ್ದು, ಇದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಇದನ್ನೂ ಓದಿ:  ಚಿರತೆ, ಹುಲಿ ದಾಳಿ ಬಳಿಕ ಕಾಡಾನೆ ಅಟ್ಟಹಾಸ – ಕಡಬದಲ್ಲಿ ಇಬ್ಬರನ್ನ ಕೊಂದು ಹಾಕಿದ ಮದಗಜ

ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣನಕರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಈ ನಾಗರ ಹಾವಿಗೆ ಕಣ್ಣಿನ ಗುಳಿ ಮಾತ್ರವಿದ್ದು, ಕಣ್ಣುಗುಡ್ಡೆ ಇರುವುದಿಲ್ಲ. ಕೆಲವು ಸಂದರ್ಭದಲ್ಲಿ ಹಾವುಗಳು ಮುಂಗುಸಿ ಜೊತೆ ಕಾದಾಡುವ ಸಂದರ್ಭದಲ್ಲಿ ಕಣ್ಣನ್ನು ಕಳೆದುಕೊಳ್ಳವ ಸಾಧ್ಯತೆ ಇರುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಇಲಿಗಳು ಕಚ್ಚುವುದರಿಂದಲೂ ಹೀಗೆ ಆಗಿರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಜೀವವೈವಿಧ್ಯ ಸಂಶೋಧಕ ಮoಜುನಾಥ ಎಸ್.ನಾಯಕ. ಇನ್ನು ಅತಿ ವಿರಳವಾಗಿ ಅನುವಂಶೀಯವಾಗಿ ಹಠಾತ್ ಬದಲಾವಣೆಯಿಂದಾಗಿಯೂ ಇಂತಹ ವಿದ್ಯಾಮಾನಗಳಿಗೆ ಕಾರಣವಾಗುತ್ತದೆ. ಒಂದು ಕಣ್ಣಿನ ದೃಷ್ಠಿ ಕುಂಠಿತಗೊಂಡರೆ ಹಾವುಗಳ ಜೀವನಕ್ರಮದ ಮೇಲೇನೂ ಪರಿಣಾಮ ಬೀರುವುದಿಲ್ಲ. ಅವು ನಿಸರ್ಗದಲ್ಲಿ ಸಹಜ ಜೀವನವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿವೆ.

suddiyaana