ಆಧಾರ್​-ಪ್ಯಾನ್​ ಲಿಂಕ್​ ಮಾಡಲು ಒಂದೇ ದಿನ ಬಾಕಿ – ಕಾರ್ಡ್‌ ನಿಷ್ಕ್ರೀಯವಾಗುವುದಕ್ಕೂ ಮುನ್ನ ಲಿಂಕ್ ಮಾಡಿ

ಆಧಾರ್​-ಪ್ಯಾನ್​ ಲಿಂಕ್​ ಮಾಡಲು ಒಂದೇ ದಿನ ಬಾಕಿ – ಕಾರ್ಡ್‌ ನಿಷ್ಕ್ರೀಯವಾಗುವುದಕ್ಕೂ ಮುನ್ನ ಲಿಂಕ್ ಮಾಡಿ

ನವದೆಹಲಿ: ದೇಶದಲ್ಲಿ ಪ್ರಸ್ತುತ ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಎರಡು ಅತೀ ಮುಖ್ಯವಾಗಿದೆ. ಆಧಾರ್ ಕಾರ್ಡ್‌ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಎರಡು ದಾಖಲೆಗಳನ್ನು ಲಿಂಕ್ ಮಾಡುವ ಗಡುವು ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಲಿಂಕ್ ಮಾಡದಿದ್ದರೆ ನಿಷ್ಕ್ರೀಯವಾಗಲಿದೆ.

ಇದನ್ನೂ ಓದಿ: ಈ ದೇಶದ ಜನರ ವಯಸ್ಸು ದಿಢೀರ್‌ ಇಳಿಕೆ! – 1 ರಿಂದ 2 ವರ್ಷ ಚಿಕ್ಕವರಾದ ನಿವಾಸಿಗಳು!

ಆದಾಯ ತೆರಿಗೆ ಇಲಾಖೆ ಕಳೆದ ಮೂರು ತಿಂಗಳುಗಳಲ್ಲಿ ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಜೂನ್​ 30ಕ್ಕೆ ಕೊನೆಯ ದಿನಾಂಕ ಎಂದು ಘೋಷಿಸಿತ್ತು. ಇದೀಗ ಶುಕ್ರವಾರದೊಳಗೆ ನಿಮ್ಮ ಆಧಾರ್​​ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​ ಲಿಂಕ್​ ಮಾಡದಿದ್ದರೆ ಪ್ಯಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳಲಿದೆ.

ಈ ಮೊದಲು ಏಪ್ರಿಲ್ 2022 ಮತ್ತು 30 ಜೂನ್ 2022ರ ನಡುವೆ ಲಿಂಕ್​ ಮಾಡಿದ್ದರೆ 500 ರೂ ದಂಡವನ್ನು ಪಾವತಿಸಬೇಕಾಗಿತ್ತು. ಈಗ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 1,000 ರೂ ದಂಡ ಕಟ್ಟಬೇಕು ಎಂದು ಐಟಿ ಇಲಾಖೆ ಹೇಳಿದೆ.

ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಗೊಂದಲ ಬೇಡ. ಮೊದಲಿಗೆ ಲಿಂಕ್ ಆಗಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದಕ್ಕಾಗಿ ಈ ಕೆಳಗಿನ ಲಿಂಕ್​ ಬಳಸಿ, ನಂತರ ತೆರೆದುಕೊಳ್ಳುವ ಪುಟದಲ್ಲಿ ಪ್ಯಾನ್​ ಹಾಗೂ ಆಧಾರ್ ನಂಬರ್ ನಮೂದಿಸಿ, ‘ವ್ಯೂ ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ. ಆಗ ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದು ಖಚಿತವಾಗುತ್ತದೆ.

ಲಿಂಕ್​ ಆಗಿಲ್ಲ ಎಂದಾದರೆ, ನಿಮ್ಮ ಆಧಾರ್-ಪ್ಯಾನ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ

  •  www.incometax.gov.in ನಲ್ಲಿ ಅಧಿಕೃತ ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಿಮ್ಮ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಆದಾಯ ತೆರಿಗೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
  • ಪಾಪ್-ಅಪ್ ವಿಂಡೋ ಹೊರಹೊಮ್ಮುತ್ತದೆ
  • ಇಲ್ಲದಿದ್ದರೆ, ಮೆನು ಬಾರ್‌ನಿಂದ ಪ್ರೊಫೈಲ್ ಸೆಟ್ಟಿಂಗ್‌ಗಳಲ್ಲಿ ಹುಡುಕಿ ‘ಲಿಂಕ್ ಆಧಾರ್’ ಆಯ್ಕೆಯನ್ನು ಆರಿಸಿ.
  • ಹೊಸ ವಿಂಡೋ ಕಾಣಿಸುತ್ತದೆ. ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ವಿವರಗಳು, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಮಾಹಿತಿಯನ್ನು ಫೀಡ್​ ಮಾಡಿದ ನಂತರ, ‘ನನ್ನ ಆಧಾರ್ ವಿವರಗಳನ್ನು ವ್ಯಾಲಿಡೇಟ್​ ಮಾಡಲು ನಾನು ಒಪ್ಪುತ್ತೇನೆ’ ಎನ್ನುವ ಆಯ್ಕೆಯನ್ನು ಆರಿಸಿ.
  • ಈಗ ‘ಮುಂದುವರಿಸಿ’ ಬಟನ್ ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
  • ಪರದೆಯ ಮೇಲಿನ ಖಾಲಿ ಜಾಗಗಳನ್ನು ಭರ್ತಿ ಮಾಡಿ ಮತ್ತು ‘ವ್ಯಾಲಿಡೇಟ್’ ಬಟನ್ ಒತ್ತಿರಿ.
  • ನೀವು ದಂಡವನ್ನು ಪಾವತಿಸಿದ ನಂತರ, ನಿಮ್ಮ ಪ್ಯಾನ್-ಆಧಾರ್ ಲಿಂಕ್ ಸಂಪನ್ನವಾಗುತ್ತದೆ.

suddiyaana