‘ಮುಂದೊಂದು ದಿನ ಭಾರತದಲ್ಲಿಯೇ ಫಿಫಾ ವಿಶ್ವಕಪ್ ಆಯೋಜನೆ’ – ಪ್ರಧಾನಿ ನರೇಂದ್ರ ಮೋದಿ

‘ಮುಂದೊಂದು ದಿನ ಭಾರತದಲ್ಲಿಯೇ ಫಿಫಾ ವಿಶ್ವಕಪ್ ಆಯೋಜನೆ’ – ಪ್ರಧಾನಿ ನರೇಂದ್ರ ಮೋದಿ

ಮುಂದೊಂದು ದಿನ ಭಾರತದಲ್ಲಿಯೇ ಫಿಫಾ ವಿಶ್ವಕಪ್ ಆಯೋಜನೆಯಾಗಲಿದೆ. ಅದರಲ್ಲಿ ನಮ್ಮ ಭಾರತ ತಂಡವೂ ಆಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಾರಿಯ ಫಿಫಾ ವಿಶ್ವಕಪ್ ನಲ್ಲಿ ಅರ್ಜೇಂಟಿನಾದ  ಗೆಲುವನ್ನು ಇಡೀ ವಿಶ್ವವೇ ತಮ್ಮ ಗೆಲುವಂತೆ ಸಂಭ್ರಮಿಸುತ್ತಿದೆ. ಅದರಲ್ಲೂ ಭಾರತದಲ್ಲೂ ಈ ವಿಶ್ವಕಪ್ ಸಂಭ್ರಮ ಮುಗಿಲು ಮುಟ್ಟಿದೆ. ಈ ವಿಶ್ವಕಪ್ ಮೇಲೆ ಭಾರತೀಯರು ತೋರಿರುವ ಆಸಕ್ತಿಯನ್ನು ಮನಗಂಡಿರುವ ಪ್ರಧಾನಿ ಮೋದಿಯವರು ಮುಂದೊಂದು ದಿನ ಭಾರತದಲ್ಲಿಯೇ ಫಿಫಾ ವಿಶ್ವಕಪ್ ಆಯೋಜನೆಯಾಗಲಿದೆ ಎಂದಿದ್ದಾರೆ. ಹಾಗೆಯೇ ಈ ವಿಶ್ವಕಪ್‌ನಲ್ಲಿ ನಮ್ಮ ತಂಡವೂ ಆಡಲಿದೆ ಎಂದಿದ್ದಾರೆ.

ಇದನ್ನೂ ಓದಿ :  ಫಿಪಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಚಾಂಪಿಯನ್ – ಮೆಸ್ಸಿ ಮ್ಯಾಜಿಕ್‌ಗೆ ಅಭಿಮಾನಿಗಳು ಫಿದಾ

ಭಾರತ ಇದುವರೆಗೂ ಒಂದೇ ಒಂದು ಫಿಫಾ ವಿಶ್ವಕಪ್ ಪಂದ್ಯವನ್ನು ಆಡಿಲ್ಲ. ಆದರೆ ಮುಂದೊಂದು ದಿನ ಭಾರತವು ಭವಿಷ್ಯದಲ್ಲಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತದೆ ಮತ್ತು ಭಾಗವಹಿಸುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿಲ್ಲಾಂಗ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಭಾರತ 2018 ರಲ್ಲಿ ಬಾಲಕರ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಅನ್ನು ಆಯೋಜಿಸಿದ್ದರೆ, ಈ ವರ್ಷ ಬಾಲಕಿಯರ ಅಂಡರ್ -17 ವಿಶ್ವಕಪ್ ಅನ್ನು ಆಯೋಜಿಸಲಾಗಿತ್ತು.

suddiyaana