ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾವೇ ಬಲಿಷ್ಠ ಟೀಮ್..! – ಮತ್ತೊಂದು ಬಲಾಢ್ಯಟೀಮ್ ಭಾರತ ಜೊತೆ ಆಸೀಸ್ ಫೈನಲ್ ಹಣಾಹಣಿ

ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾವೇ ಬಲಿಷ್ಠ ಟೀಮ್..! – ಮತ್ತೊಂದು ಬಲಾಢ್ಯಟೀಮ್ ಭಾರತ ಜೊತೆ ಆಸೀಸ್ ಫೈನಲ್ ಹಣಾಹಣಿ

ಇಂಡಿಯಾ VS ಆಸ್ಟ್ರೇಲಿಯಾ.. ಫೈನಲ್​ ಮ್ಯಾಚ್​ಗಾಗಿ ಇಡೀ ಜಗತ್ತೇ ಕಾಯ್ತಾ ಇದೆ. ಈ ಬಾರಿಯ ವರ್ಲ್ಡ್​ಕಪ್​ ಫೈನಲ್​​ ಕೇವಲ ಫೈನಲ್ ಅಷ್ಟೇ ಅಲ್ಲ, ವರ್ಲ್ಡ್​​ ಕ್ರಿಕೆಟ್​​ನಲ್ಲಿ ಇದನ್ನ ಮಹಾಯುದ್ಧ ಅಂತಾನೆ ಹೇಳಬಹುದು. ಜಾಗತಿಕ ಕ್ರಿಕೆಟ್​ನ ಎರಡು ಬಲಿಷ್ಠ ಟೀಂಗಳು ವರ್ಲ್ಡ್​​ಕಪ್​​ ಫೈನಲ್​ನಲ್ಲಿ ಮುಖಾಮುಖಿಯಾಗ್ತಿವೆ. ಆಸ್ಟ್ರೇಲಿಯಾ ಟೀಂ ಬಗ್ಗೆ ಮತ್ತು ವಿಶ್ವಕಪ್​​ ಅಂತಾ ಬಂದಾಗ ಆಸ್ಟ್ರೇಲಿಯಾ ಹೇಗೆ ಡಿಫರೆಂಟ್ ಟೀಂ ಆಗಿರುತ್ತೆ. ಕಳೆದ ಕೆಲ ದಶಕಗಳಿಂದ ಆಸ್ಟ್ರೇಲಿಯಾ ಯಾವ ರೀತಿ ಕ್ರಿಕೆಟ್​ ಜಗತ್ತಿನ ಆಳುತ್ತಾ ಬಂದಿದೆ. ಹೇಗೆ ಡಾಮಿನೇಟ್ ಮಾಡಿದೆ? ಇದಕ್ಕೆ ಕಾರಣ ಏನು? ಆಸ್ಟ್ರೇಲಿಯನ್​ ಕ್ರಿಕೆಟ್ ಟೀಂ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಮಧ್ಯೆ ಬ್ರೋಮ್ಯಾನ್ಸ್ – ಇವರೇ ಟೀಮ್ ಇಂಡಿಯಾದ ಬಲಾಢ್ಯ ಕಂಬಗಳು

​ ವಿಶ್ವ ಕ್ರಿಕೆಟ್ ​ನಲ್ಲಿ ಸಾರ್ವಕಾಲಿಕ ಮಹಾನ್ ತಂಡ ಯಾವುದಾದರೂ ಇದ್ದರೆ ಅದು ಆಸ್ಟ್ರೇಲಿಯಾ. ಬ್ರಿಟೀಷರು ಕ್ರಿಕೆಟ್ ಕಂಡು ಹಿಡಿದರೂ ಕೂಡ, ಕ್ರಿಕೆಟ್ ಜಗತ್ತಿನಲ್ಲಿ ಅನಭಿಷಿಕ್ತ ದೊರೆಯಾಗಿ ಆಳಿದ್ದು ಮಾತ್ರ ಆಸ್ಟ್ರೇಲಿಯಾವೇ. ಅದ್ರಲ್ಲೂ 1990ರ ದಶಕದ ಬಳಿಕವಂತೂ ಆಸ್ಟ್ರೇಲಿಯಾಗೆ ಆಸ್ಟ್ರೇಲಿಯನ್ಸೇ ಸರಿಸಾಟಿ ಎಂಬಂತಾಗಿದೆ. ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾವನ್ನ ಸೋಲಿಸೋದು ಅಂದ್ರೆ ಅದೊಂದು ದೊಡ್ಡ ಸಾಹಸವೇ. 1999 ರಿಂದ 2011ರವರೆಗೆ ಇದ್ದ ಟೀಮ್​ನ್ನಂತೂ ಕೇಳೋದೆ ಬೇಡ. ಪ್ರತಿ ಸೀರಿಸ್​​ನಲ್ಲೂ ಆಸ್ಟ್ರೇಲಿಯಾವೇ ಗೆಲ್ಲೋದು. ನಾವು ಎಷ್ಟೇ ದೇಶಭಕ್ತರಾಗಿದ್ರೂ, ನಮ್ಮಲ್ಲಿ ಸಚಿನ್, ಗಂಗೂಲಿ, ದ್ರಾವಿಡ್, ಸೆಹ್ವಾಗ್, ಧೋನಿಯಂಥಾ ಘಟಾನುಘಟಿಗಳು ಇದ್ದರೂ ಕೂಡ ಗೆಲ್ಲೋದು ಆಸ್ಟ್ರೇಲಿಯಾವೇ. ಆ್ಯಡಮ್ ಗಿಲ್​​ಕ್ರಿಸ್ಟ್, ಮ್ಯಾಥ್ಯೂ ಹೇಡನ್​ನಂಥವರು ಓಪನಿಂಗ್ ಬಂದ್ರೆ 10 ಓವರ್​ಗಳ ಒಳಗೆ ರಿಸಲ್ಟ್ ಏನು ಅನ್ನೋದನ್ನ ಗ್ಯಾರಂಟಿ ಮಾಡಿಸ್ತಿದ್ರು. ಅಷ್ಟರ ಮಟ್ಟಿಗೆ ಆಸ್ಟ್ರೇಲಿಯಾ ಬಲಾಢ್ಯ ಪಡೆಯಾಗಿತ್ತು. ಬ್ಯಾಟಿಂಗ್​..ಬೌಲಿಂಗ್​ ಎಲ್ಲದ್ರಲ್ಲೂ ಆಸ್ಟ್ರೇಲಿಯಾ ಟೀಂನ್ನ ಮೀರಿಸುವವರೇ ಇರಲಿಲ್ಲ. ಆಸ್ಟ್ರೇಲಿಯಾ ತಂಡಕ್ಕೆ ಕೋಚ್ ಇಲ್ಲದಿದ್ರೂ ಪರ್ವಾಗಿಲ್ಲ, ಯಾರೇ ಕ್ಯಾಪ್ಟನ್ ಆದ್ರೂ ತೊಂದ್ರೆ ಇಲ್ಲಿ ಟೀಂ ಪರ್ಫಾಮೆನ್ಸ್​​ನಲ್ಲೇ ಗೆಲ್ತಾರೆ ಅನ್ನೋದು ಒಂಥರಾ ರಿಯಾಲಿಟಿ ಆಗಿತ್ತು. ಒಂದು ತಂಡವಾಗಿ ಯಾವ ರೀತಿ ಆಡಬೇಕು ಅನ್ನೋದನ್ನ ಆಸ್ಟ್ರೇಲಿಯನ್ನರಿಂದಲೇ ನೋಡಿ ಕಲಿಯುವಂತಿತ್ತು.

ಇವತ್ತು ಜಾಗತಿಕ ಕ್ರಿಕೆಟ್​​ನಲ್ಲಿ ಟೀಂ ಇಂಡಿಯಾವೇ ಅತ್ಯಂತ ಸ್ಟ್ರಾಂಗ್ ಟೀಮ್ ಅನ್ನೋದು ನಿಜ. ಈ ಬಾರಿಯ ವರ್ಲ್ಡ್​​ಕಪ್​ನಲ್ಲಂತೂ ಆಸ್ಟ್ರೇಲಿಯಾಗಿಂತಲೂ ಟೀಂ ಇಂಡಿಯಾವೇ ಪ್ರಬಲ ತಂಡವಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅದೇ ರೀತಿ ಆಸ್ಟ್ರೇಲಿಯನ್ಸ್ ಈ ಹಿಂದೆ ವರ್ಲ್ಡ್​​ ಕ್ರಿಕೆಟ್​ನ್ನ ಅಕ್ಷರಶ: ಆಳಿದ್ರು. ಕೇವಲ ಟೀಂ ಮಾತ್ರವಲ್ಲ, ಪೈನಾನ್ಷಿಯಲಿ ಕೂಡ ಆಸ್ಟ್ರೇಲಿಯಾ ಸ್ಟ್ರಾಂಗ್​ ಆಗಿತ್ತು. ಇವತ್ತು ಹೇಗೆ ಬಿಸಿಸಿಐ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆಯೋ, ಅದೇ ರೀತಿ ಒಂದು ಕಾಲದಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್​ ಬೋರ್ಡ್ ರಿಚ್ ಮತ್ತು ಪವರ್​ ಆಗಿತ್ತು. ಐಪಿಎಲ್​​ ಬಳಿಕ ದುಡ್ಡಿನ ಖಜಾನೆ ಬಿಸಿಸಿಐ ಬೊಕ್ಕಸಕ್ಕೆ ಶಿಫ್ಟ್ ಆಯ್ತು.

ಇನ್ನು ಆಸ್ಟ್ರೇಲಿಯಾ ಸಾರ್ವಕಾಲಿಕ ಶ್ರೇಷ್ಠ ತಂಡ ಅನ್ನೋದಕ್ಕೆ ಅವರ ವರ್ಲ್ಡ್​​ಕಪ್​ ರಿಸಲ್ಟೇ ಸಾಕ್ಷಿ. ಒಟ್ಟು 5 ಬಾರಿ ವಿಶ್ವಕಪ್​​ನ್ನ ಗೆದ್ದಿರುವ ಏಕೈಕ ಟೀಂ ಆಸ್ಟ್ರೇಲಿಯಾ. ಹೇಗೆ 1983ರಲ್ಲಿ ಕಪಿಲ್​ದೇವ್ ಟೀಂ ವರ್ಲ್ಡ್​​ಕಪ್​​ ಗೆದ್ದ ಬಳಿಕ ಭಾರತೀಯ ಕ್ರಿಕೆಟ್ ಬದಲಾಯ್ತೋ ಅದೇ ರೀತಿ 1987ರಲ್ಲಿ ಅಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ ಫಸ್ಟ್ ಟೈಮ್​ ವಿಶ್ವಕಪ್​ ಗೆಲ್ಲುತ್ತಲೇ ಆಸ್ಟ್ರೇಲಿಯಾ ಅನ್​ಸ್ಟಾಪೆಬಲ್​ ತಂಡವಾಗಿ ಬೆಳೆಯಿತು. 1999ರಲ್ಲಿ ಸ್ಟೀವ್​ ವಾ ನಾಯಕತ್ವದಲ್ಲಿ ಆಸ್ಟ್ರೇಲಿಯಾ 2ನೇ ಬಾರಿಗೆ ವರ್ಲ್ಡ್​ಕಪ್ ಗೆಲ್ಲುತ್ತೆ. 2003ರಲ್ಲಿ ರಿಕ್ಕಿ ಪಾಂಟಿಂಗ್ ಟೀಂ ಟ್ರೋಫಿ ಎತ್ತಿ ಹಿಡಿಯುತ್ತೆ. ಮತ್ತೆ ಪುನ: 2007ರಲ್ಲೂ ಪಾಂಟಿಂಗ್​ ಕ್ಯಾಪ್ಟನ್ಸಿಯಲ್ಲೇ ಆಸ್ಟ್ರೇಲಿಯಾ 4ನೇ ವಿಶ್ವಕಪ್​ ಗೆಲ್ಲುತ್ತೆ. ನಂತರ 2015ರಲ್ಲಿ ಮೈಕಲ್ ಕ್ಲಾರ್ಕ್​​ ಕ್ಯಾಪ್ಟನ್ಸಿಯಲ್ಲಿ 5ನೇ ಬಾರಿಗೆ ಆಸ್ಟ್ರೇಲಿಯಾ ವಂಡೇ ವರ್ಲ್ಡ್​ಕಪ್ ವಿನ್ ಆಗುತ್ತೆ. ಟೋಟಲ್ 5 ಟೈಮ್ಸ್​ ವರ್ಲ್ಡ್​​ಕಪ್​ ಚಾಂಪಿಯನ್ಸ್.. ಒಟ್ಟು 8 ಬಾರಿ ಆಸ್ಟ್ರೇಲಿಯಾ ವರ್ಲ್ಡ್​​ಕಪ್ ಫೈನಲ್​ ಬಂದಿದೆ.

ವಿಶ್ವಕಪ್​ ಅಂದಕೂಡಲೇ ಆಸ್ಟ್ರೇಲಿಯನ್ಸ್​ಗೆ ಅದೇನಾಗುತ್ತೋ ಗೊತ್ತಿಲ್ಲ. ಪ್ರತಿ ವಿಶ್ವಕಪ್​ ಟೂರ್ನಿಯಲ್ಲೂ ಅಷ್ಟೇ, ಆಸ್ಟ್ರೇಲಿಯಾ ಯಾವತ್ತಿಗೂ ನೆಕ್ಸ್ಟ್ ಲೆವೆಲ್ ಪರ್ಫಾಮೆನ್ಸ್ ನೀಡುತ್ತೆ. ಈ ಬಾರಿ ವರ್ಲ್ಡ್​​ಕಪ್​​ಗೂ ಮುನ್ನ ಇದೇ ಆಸ್ಟ್ರೇಲಿಯಾ ತಂಡ ಎರಡು ವಂಡೇ ಸೀರಿಸ್​ಗಳನ್ನ ಮೇಲಿಂದ ಮೇಲೆ ಸೋತಿತ್ತು. ಸೇಮ್ ಟೀಂ.. ಒಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಮ್ಯಾಚ್​ಗಳ ಸೀರಿಸ್​ನ್ನ ಸೋತ್ರು. ಬಳಿಕ ಭಾರತದ ವಿರುದ್ಧ 3 ಮ್ಯಾಚ್​ಗಳ ವಂಡೇ ಸೀರಿಸ್​ನ್ನ ಕೂಡ ಸೋತ್ರು. ಬ್ಯಾಕ್​ ಟು ಬ್ಯಾಕ್ ಸರಣಿಗಳನ್ನ ಸೋತು ವರ್ಲ್ಡ್​​ಕಪ್​​ ಆಡೋಕೆ ಇಳಿದ್ರು. ಇಲ್ಲೂ ಅಷ್ಟೇ, ಲೀಗ್​ ಸ್ಟೇಜ್​​ ಫಸ್ಟ್ ಎರಡು ಮ್ಯಾಚ್​ಗಳನ್ನ ಸೋತ್ರು. ಭಾರತ ಮತ್ತು ಸೌತ್​ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಮಂಡಿಯೂರಿತ್ತು. ಪಾಯಿಂಟ್ಸ್​ ಟೇಬಲ್​ನಲ್ಲಿ 10th ಪೊಸೀಷನ್​ನಲ್ಲಿದ್ರು. ಈ ಬಾರಿ ಆಸ್ಟ್ರೇಲಿಯನ್ಸ್​ ಕಥೆ ಮುಗೀತು.. ಸೆಮಿಫೈನಲ್​ಗೂ ಬರೋದಿಲ್ಲ ಅಂದುಕೊಳ್ಳುವಷ್ಟರಲ್ಲೇ ಆ ಟೀಮ್​ಗೆ ಅದೇನಾಯ್ತೋ ಗೊತ್ತಿಲ್ಲ. ಬಳಿಕ ಆಡಿದ ಎಲ್ಲಾ ಮ್ಯಾಚ್​ಗಳನ್ನ ಕೂಡ ಗೆಲ್ತಾನೆ ಬಂದ್ರು. ಲೀಗ್​​ ಸ್ಟೇಜ್​​ನಲ್ಲಿ 7 ಮ್ಯಾಚ್​ಗಳನ್ನ ಕಂಟಿನ್ಯೂ ಆಗಿ ಗೆದ್ದು ಸೆಮಿಫೈನಲ್​​ಗೆ ಆರಾಮ್​ಸೆ ಎಂಟ್ರಿ ಕೊಟ್ರು. ಸೌತ್​ ಆಫ್ರಿಕಾವನ್ನ ಮತ್ತೊಮ್ಮೆ ಚೋಕರ್ಸ್​ಗಳನ್ನಾಗಿದ್ರು. ಈಗ ಟೀಂ ಇಂಡಿಯಾ​ ವಿರುದ್ಧ ಅಂತಿಮ ಯುದ್ಧ ಆಸ್ಟ್ರೇಲಿಯಾ ರೆಡಿಯಾಗಿದೆ.

​ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಯಾವತ್ತೂ ಸುಲಭಕ್ಕೆ ಸೋಲೊಪ್ಪಿಕೊಳ್ಲೋದೆ ಇಲ್ಲ. ಲಾಸ್ಟ್ ಮೂಮೆಂಟ್​ವರೆಗೂ ಫೈಟ್ ಮಾಡ್ತಾರೆ. ಸೋತ್ರೂ, ಒಂದಷ್ಟು ಹೊಡೆತ ತಿಂದ್ರೂ ಅವರಿಗೆ ಕಮ್​ಬ್ಯಾಕ್​ ಮಾಡೋದು ಹೇಗೆ ಅನ್ನೋದು ಚೆನ್ನಾಗಿಯೇ ಗೊತ್ತು. ಪ್ರತಿ ಮ್ಯಾಚ್​ಗೂ ಕಂಪ್ಲೀಟ್​ ಪ್ಲ್ಯಾನ್ ಮಾಡಿ ಪ್ರಿಪೇರ್ ಆಗ್ತಾರೆ. ಎದುರಾಳಿ ತಂಡದ ಪ್ರತಿ ಪ್ಲೇಯರ್​​ನನ್ನೂ ನೋಟ್​ ಮಾಡಿ, ಬಲೆಗೆ ಕೆಡವೋಕೆ ಸ್ಟ್ರಾಟಜಿ ಮಾಡ್ತಾರೆ. ಆಸ್ಟ್ರೇಲಿಯನ್ ಕ್ರಿಕೆಟ್ ಟೀಂ ಡ್ರೆಸ್ಸಿಂಗ್ ರೂಮ್​ನ ಅಟ್ಮಾಸ್ಪಿಯರ್ ಫುಲ್ ಡಿಫರೆಂಟ್ ಆಗಿರುತ್ತೆ. ಈ ಬಗ್ಗೆ ಹಾಟ್​ಸ್ಟಾರ್​​ನಲ್ಲಿ ಗೇಮ್​​ ಪ್ಲ್ಯಾನ್ ಅನ್ನೋ ಒಂದು ಸೀರಿಸ್ ಇದೆ. ಅದ್ರಲ್ಲಿ ಆ್ಯಶಸ್ ಸೀರಿಸ್​ ವೇಳೆ ಮತ್ತು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್​-ಗವಾಸ್ಕರ್ ಸೀರಿಸ್​ ವೇಳೆ ಆಸ್ಟ್ರೇಲಿಯಾ ಟೀಂನ ಪ್ರಿಪರೇಷನ್ ಹೇಗಿರುತ್ತೆ. ಟೀಂ ಮೀಟಿಂಗ್​ನಲ್ಲಿ ಏನೆಲ್ಲಾ ಚರ್ಚೆಯಾಗುತ್ತೆ. ಇಂಡಿವಿಜ್ಯುವಲ್ ಪ್ಲೇಯರ್ಸ್​ಗಳಿಗೆ ಯಾವ ರೀತಿ ಕೌಂಟರ್ ಪ್ಲ್ಯಾನ್ ಮಾಡ್ತಾರೆ. ಬಳಿಕ ಮ್ಯಾಚ್ ಆಗೋವಾಗ ಡ್ರೆಸ್ಸಿಂಗ್ ರೂಮ್​ನಲ್ಲಿ, ಪೆವಿಲಿಯನ್​ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರ ವರ್ತನೆ ಹೇಗಿರುತ್ತೆ. ಗೇಮ್​ ಮೇಲಿನ ಅವರ ಅಪ್ರೋಚ್ ಹೇಗಿರುತ್ತೆ. ಔಟಾದಾಗ ಪೆವಿಲಿಯನ್​ಗೆ ಬಂದು ಯಾವ ರೀತಿ ರಿಯಾಕ್ಟ್ ಮಾಡ್ತಾರೆ. ಹೈಪ್ರೆಷರ್ ಗೇಮ್​​ನಲ್ಲಿ ಅವರ ಮೈಂಡ್​ಸೆಟ್ ಹೇಗಿರುತ್ತೆ ಇವೆಲ್ಲವನ್ನೂ ಆಸ್ಟ್ರೇಲಿಯಾ ಟೀಂ ಬಗ್ಗೆಯೇ ಒಂದಷ್ಟು ಸೀರಿಸ್​ಗಳನ್ನೇ ಮಾಡಿದ್ದಾರೆ. ಹಾಟ್​ಸ್ಟಾರ್​ನಲ್ಲಿ ಇದನ್ನ ನೀವು ನೋಡಬಹುದು. ಯಾಕೆ ಆಸ್ಟ್ರೇಲಿಯನ್ ಕ್ರಿಕೆಟ್ ಇಷ್ಟೊಂದು ಸ್ಟ್ರಾಂಗ್ ಅನ್ನೋ ಬಗ್ಗೆ ಇನ್ನಷ್ಟು ಇನ್​ಫಾರ್ಮೇಷನ್ ಸಿಗುತ್ತೆ.

ಇದೀಗ ವರ್ಲ್ಡ್​​ಕಪ್​ ಫೈನಲ್​ನಲ್ಲಿ 2ನೇ ಬಾರಿಗೆ ಆಸ್ಟ್ರೇಲಿಯಾ ಟೀಂ ಇಂಡಿಯಾಗೆ ಎದುರಾಗಿದೆ. ಆದ್ರೆ ಈ ಬಾರಿ ಭಾರತವೇ ಗೆಲ್ಲೋ ಫೇವರೇಟ್ ಟೀಂ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಹೀಗಾಗಿ ಇಂಡಿಯಾ VS ಆಸ್ಟ್ರೇಲಿಯಾ ಮಧ್ಯೆ ಬ್ಲಾಕ್​ಬಾಸ್ಟರ್, ರೋಚಕ ಮ್ಯಾಚ್ ನಡೆಯೋದ​ಂತೂ ಗ್ಯಾರಂಟಿ.

 

Sulekha