ಕ್ರಿಕೆಟ್ ನಿಂದ ದೂರವಾಗ್ತಾರಾ ಕಿಂಗ್? – ನಿವೃತ್ತಿ ಬಳಿಕ ನನ್ನ ನೋಡಲ್ಲ ಎಂದಿದ್ದೇಕೆ?
ಫ್ಯಾನ್ಸ್ ಶಾಕ್.. ಕೊಹ್ಲಿ ಪ್ಲ್ಯಾನ್ ಏನು?

ಕ್ರಿಕೆಟ್ ನಿಂದ ದೂರವಾಗ್ತಾರಾ ಕಿಂಗ್? – ನಿವೃತ್ತಿ ಬಳಿಕ ನನ್ನ ನೋಡಲ್ಲ ಎಂದಿದ್ದೇಕೆ?ಫ್ಯಾನ್ಸ್ ಶಾಕ್.. ಕೊಹ್ಲಿ ಪ್ಲ್ಯಾನ್ ಏನು?

ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್, ಆರ್​ಸಿಬಿಯ ಕಿಂಗ್ ವಿರಾಟ್ ಕೊಹ್ಲಿ ನಿವೃತ್ತಿಯ ಮಾತನಾಡಿದ್ದಾರೆ.     ಆರ್‌ಸಿಬಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಕೊಹ್ಲಿ ತಮ್ಮ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್‌ ಪಂದ್ಯಕ್ಕೆ ಕೌಂಟ್‌ಡೌನ್‌ – ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾಗಿದ್ಯಾಕೆ ಸರ್ಕಾರ?

ಆರ್‌ಸಿಬಿ ಹಂಚಿಕೊಂಡ ವಿಡಿಯೋದಲ್ಲಿ, ‘ಇದು ತುಂಬಾ ಸರಳವಾಗಿದೆ. ಒಬ್ಬ ಆಟಗಾರನಾಗಿ, ನಮ್ಮ ವೃತ್ತಿಜೀವನವು ಅಂತಿಮ ದಿನಾಂಕವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾನು ಹೆಚ್ಚು ಶ್ರಮವಹಿಸಿ ಮಿತಿಮೀರಿ ಈ ಕೆಲಸ ಮಾಡುತ್ತಿದ್ದೇನೆ. ಆದರೆ ಮುಂದೊಂದು ದಿನ ನಾನು ಸಹ ನಿವೃತ್ತಿ ಹೊಂದಲೇಬೇಕು. ನಿವೃತ್ತಿಯ ನಂತರ ನಾನು ಅಂದು ಏಕೆ ಅದೊಂದು ಕೆಲಸ ಮಾಡಲಿಲ್ಲ ಎಂದು ಅನಿಸಬಾರದು. ಅಂತಹ ಪರಿಸ್ಥಿತಿ ನನಗೆ ಬರಬಾರದು. ಹೀಗಾಗಿ ನಾನು ನಿವೃತ್ತಿ ಹೇಳುವಾಗ ನನಗೆ ಯಾವುದೇ ವಿಷಾಧ ಇರಬಾರದು. ಈ ರೀತಿ ನಾನು ಖಂಡಿತ ಮಾಡಿಕೊಳ್ಳುವುದಿಲ್ಲ ಎನ್ನುವುದು ನನಗೆ ಖಾತ್ರಿಯಿದೆ ಎಂದು ಕಿಂಗ್‌ ಹೇಳಿಕೊಂಡಿದ್ದಾರೆ. ಹಾಗೇ ಕೊನೆಯಲ್ಲಿ ಕೊಹ್ಲಿ ಹೇಳಿರುವ ಮಾತು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಾನು ಇದನ್ನೆಲ್ಲಾ ಮುಗಿಸಿ ಒಮ್ಮೆ ಹೊರನಡೆದರೆ ಖಂಡಿತ ಮತ್ತೊಮ್ಮೆ ನೀವು ನನ್ನನ್ನು ನೋಡಲಾಗುವುದಿಲ್ಲ. ಹೀಗಾಗಿ ನಾನು ಇರುವಷ್ಟು ದಿನ ಉತ್ತಮವಾಗಿ ಆಡಲು ಬಯಸುತ್ತೇನೆ ಎಂದಿದ್ದಾರೆ.

ಹಾಗಾದ್ರೆ ಕೊಹ್ಲಿ ನಿವೃತ್ತಿ ನಂತ್ರ ಏನು ಮಾಡಲಿದ್ದಾರೆ ಎಂಬುದೇ ಚರ್ಚೆಗೆ ಗ್ರಾಸವಾಗಿದೆ. ಸದ್ಯ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟಿ 20 ವಿಶ್ವಕಪ್​ಗೂ ಸೆಲೆಕ್ಟ್ ಆಗಿದ್ದಾರೆ. ಇದೀಗ ಐಪಿಎಲ್​ನಲ್ಲಿ ಆರ್​ಸಿಬಿ ಪರ ಅಬ್ಬರಿಸುತ್ತಿರೋ ಕಿಂಗ್, ಈ ಸೀಸನ್​ನಲ್ಲಿ 13 ಪಂದ್ಯಗಳಲ್ಲಿ 66.10 ಸರಾಸರಿಯಲ್ಲಿ 661 ರನ್ ಗಳಿಸಿದ್ದಾರೆ. ಅಲ್ದೇ ತಮ್ಮ ಬ್ಯಾಟ್‌ನಿಂದ 1 ಶತಕ ಮತ್ತು 5 ಅರ್ಧಶತಕಗಳನ್ನು ಸಹ ಗಳಿಸಿದ್ದಾರೆ. ಮುಂಬರುವ ಟಿ 20 ವಿಶ್ವಕಪ್ 2024ನಲ್ಲಿಯೂ ಕೊಹ್ಲಿ ಇದೇ ಫಾರ್ಮ್‌ನಲ್ಲಿ ಮುಂದುವರೆದರೆ ಭಾರತ ತಂಡಕ್ಕೆ ಲಾಭವಾಗಲಿದೆ. ವಿರಾಟ್ ಕೊಹ್ಲಿ ಭಾರತ ಪರ ಇದುವರೆಗೆ 113 ಟೆಸ್ಟ್, 292 ಏಕದಿನ ಮತ್ತು 117 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 113 ಟೆಸ್ಟ್ ಪಂದ್ಯಗಳಲ್ಲಿ 49.16 ಸರಾಸರಿಯಲ್ಲಿ 29 ಶತಕ ಮತ್ತು 30 ಅರ್ಧಶತಕ ಸೇರಿದಂತೆ 8,848 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 254 ರನ್ ಆಗಿದೆ. ವಿರಾಟ್ ಕೊಹ್ಲಿ ಇದುವರೆಗೆ ಭಾರತದ ಪರ 292 ಏಕದಿನ ಪಂದ್ಯಗಳಲ್ಲಿ 58.68 ಸರಾಸರಿಯಲ್ಲಿ 50 ಶತಕ ಮತ್ತು 72 ಅರ್ಧಶತಕ ಸೇರಿದಂತೆ 13,848 ರನ್ ಗಳಿಸಿದ್ದಾರೆ.

ಏಕದಿನದಲ್ಲಿ ಅತ್ಯುತ್ತಮ ಸ್ಕೋರ್ 183 ರನ್ ಆಗಿದೆ. ಇದುವರೆಗೆ 117 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 51.76 ಸರಾಸರಿಯಲ್ಲಿ 1 ಶತಕ ಮತ್ತು 37 ಅರ್ಧಶತಕ ಸೇರಿದಂತೆ 4,037 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಅತ್ಯುತ್ತಮ ಸ್ಕೋರ್ 122 ರನ್ ಆಗಿದೆ. ಟೀಂ ಇಂಡಿಯಾ ಮತ್ತು ಐಪಿಎಲ್​ನಲ್ಲಿ ಉತ್ತುಂಗದಲ್ಲಿರುವಾಗಲೇ ಕೊಹ್ಲಿ ನಿವೃತ್ತಿಯ ಮಾತನಾಡಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ನೀವು ಒಮ್ಮೆ ಕ್ರಿಕೆಟ್​ನಿಂದ ಹೊರ ಬಂದ್ರೆ ನನ್ನನ್ನ ನೋಡೋಕೆ ಆಗಲ್ಲ ಅಂತಾ ಹೇಳಿರೋದೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಹಾಗಾದ್ರೆ ಕಿಂಗ್ ಎಲ್ಲಿ ಹೋಗ್ತಾರೆ, ಏನ್ ಮಾಡ್ತಾರೆ ಅನ್ನೋ ಕುತೂಹದಲ್ಲಿದ್ದಾರೆ.

Shwetha M