ಶನಿ ದೋಷಗಳಿಂದ ಮುಕ್ತಿ ಪಡೆಯಬೇಕಾ? – ಶನಿವಾರ ಹನುಮಂತನ ಆರಾಧನೆಯನ್ನ ಹೀಗೆ ಮಾಡಿ

ಶನಿ ದೋಷಗಳಿಂದ ಮುಕ್ತಿ ಪಡೆಯಬೇಕಾ? – ಶನಿವಾರ ಹನುಮಂತನ ಆರಾಧನೆಯನ್ನ ಹೀಗೆ ಮಾಡಿ

ಜ್ಯೋತಿಷ್ಯ  ಶಾಸ್ತ್ರದಲ್ಲಿ ಮಂಗಳವಾರ   ಮತ್ತು ಶನಿವಾರವನ್ನು   ಆಂಜನೇಯ ಸ್ವಾಮಿಯ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನಗಳೆಂದು ಪರಿಗಣಿಸಲಾಗಿದೆ. ಈ ದಿನಗಳಲ್ಲಿ ಭಕ್ತಿಯಿಂದ ಹನುಮಂತನನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಬೇಕಾದ ಧೈರ್ಯ, ಶಕ್ತಿ ಮತ್ತು ಆತ್ಮಬಲ ಲಭಿಸುತ್ತದೆ. ವಿಶೇಷವಾಗಿ ನವಗ್ರಹಗಳಲ್ಲಿನ ಮಂಗಳ ಮತ್ತು ಶನಿ ದೋಷಗಳಿಂದ ಮುಕ್ತಿ ಪಡೆಯಲು ಹನುಮಂತನ ಆರಾಧನೆಯು ರಾಮಬಾಣದಂತೆ ಕೆಲಸ ಮಾಡುತ್ತದೆ.

ಜೀವನದಲ್ಲಿ ಅನಿರೀಕ್ಷಿತ ಅಡೆತಡೆಗಳು ಅಥವಾ ಶತ್ರುಗಳ ಕಾಟವಿದ್ದರೆ, ‘ಓಂ ನಮೋ ಹನುಮತೇ ರುದ್ರಾವತಾರಾಯ…’ ಎಂಬ ಮಂತ್ರವನ್ನು ಪಠಿಸುವುದು ಶುಭದಾಯಕ. ಇದು ವ್ಯಕ್ತಿಯ ಸುತ್ತ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ ಮತ್ತು ದುಷ್ಟ ಶಕ್ತಿಗಳಿಂದ ದೂರವಿರಿಸುತ್ತದೆ.
ಆರೋಗ್ಯ ಮತ್ತು ಮಾನಸಿಕ ಶಾಂತಿಗಾಗಿ

ದೈಹಿಕವಾಗಿ ಅಸ್ವಸ್ಥರಾದವರು ‘ಓಂ ಹನುಮತೇ ನಮಃ’ ಎಂಬ ಸರಳ ಮಂತ್ರವನ್ನು ದಿನವೂ ಜಪಿಸುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಹಾಗೆಯೇ ‘ಮಂಗಳ ಭವನ ಅಮಂಗಳಹಾರೀ…’ ಚೌಪಾಯಿಯನ್ನು ಪಠಿಸುವುದರಿಂದ ಮನಸ್ಸಿನ ಅಶಾಂತಿ ದೂರವಾಗಿ ಶಾಂತಿ ನೆಲೆಸುತ್ತದೆ.
ಆರ್ಥಿಕ ಪ್ರಗತಿ ಮತ್ತು ಧನ ಲಾಭಕ್ಕಾಗಿ

ಸಂಪತ್ತಿನ ಸಮಸ್ಯೆಗಳನ್ನು ಎದುರಿಸುತ್ತಿರುವವರು ‘ಅಜಂನಗರ್ಭ ಸಂಭೂತ ಕಪೀಂದ್ರ ಸಚಿವೋತ್ತಮ…’ ಎಂಬ ಮಂತ್ರವನ್ನು ಭಕ್ತಿಯಿಂದ ಜಪಿಸಬೇಕು. ಇದರಿಂದ ಆಂಜನೇಯನ ಕೃಪೆಯೊಂದಿಗೆ ಆರ್ಥಿಕ ಸ್ಥಿತಿ ಸುಧಾರಿಸಿ, ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಕಾರ್ಯ ಸಿದ್ಧಿ ಮತ್ತು ಜ್ಞಾನಕ್ಕಾಗಿ

ಯಾವುದೇ ಕೆಲಸದಲ್ಲಿ ಪದೇ ಪದೇ ಅಡೆತಡೆಗಳು ಉಂಟಾಗುತ್ತಿದ್ದರೆ, ‘ಅತುಲಿತಬಲಧಾಮಂ ಹೇಮಶೈಲಭದೇಹಂ…’ ಎಂಬ ಶ್ಲೋಕವನ್ನು ಪಠಿಸುವುದು ಉತ್ತಮ. ಇದು ಏಕಾಗ್ರತೆಯನ್ನು ಹೆಚ್ಚಿಸಿ, ಜ್ಞಾನ ಮತ್ತು ಬಲವನ್ನು ನೀಡುತ್ತದೆ.
ಅಂಗಾರಕ ದೋಷ ನಿವಾರಣೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹನುಮಂತನು ಎಂಟು ಸಿದ್ಧಿಗಳು ಮತ್ತು ಒಂಬತ್ತು ನಿಧಿಗಳ ಅಧಿಪತಿಯಾಗಿದ್ದಾನೆ. ಮಂಗಳವಾರದಂದು ಹನುಮಂತನ ಆರಾಧನೆ ಮಾಡುವುದರಿಂದ ಜಾತಕದಲ್ಲಿನ ಅಶುಭ ಮಂಗಳನ ಪ್ರಭಾವ ಕಡಿಮೆಯಾಗಿ ‘ಅಂಗಾರಕ ದೋಷ’ ನಿವಾರಣೆಯಾಗುತ್ತದೆ. ಶನಿವಾರದ ಪೂಜೆಯು ಶನಿಯ ಸಾಡೇಸಾತಿ ಮತ್ತು ಧೈಯಾ ಪ್ರಭಾವದಿಂದ ರಕ್ಷಣೆ ನೀಡುತ್ತದೆ. ಹನುಮಾನ್ ಚಾಲೀಸಾವನ್ನು ಭಕ್ತಿಯಿಂದ ಪಠಿಸುವುದು ಮನೋಬಲವನ್ನು ಹೆಚ್ಚಿಸಿ, ಅಜ್ಞಾತ ಭಯದಿಂದ ಮುಕ್ತಿ ನೀಡುತ್ತದೆ. ಈ ಮಂತ್ರಗಳ ನಿರಂತರ ಜಪವು ವ್ಯಕ್ತಿಯ ಸುತ್ತ ಸಕಾರಾತ್ಮಕ ಪ್ರಭಾವಲಯವನ್ನು ನಿರ್ಮಿಸಿ, ಜೀವನದ ಸಕಲ ಅಡೆತಡೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.

Kishor KV