ಶಿವನ ಅವತಾರದಲ್ಲಿ ಬಾಲಿವುಡ್‌ನ ಸ್ಟೈಲ್‌ಕಿಂಗ್ –  ಅಕ್ಷಯ್ ಕುಮಾರ್‌ಗೆ ಸಕ್ಸಸ್ ತಂದುಕೊಡುತ್ತಾ ‘ಓಎಂಜಿ 2’ ಸಿನಿಮಾ?

ಶಿವನ ಅವತಾರದಲ್ಲಿ ಬಾಲಿವುಡ್‌ನ ಸ್ಟೈಲ್‌ಕಿಂಗ್ –  ಅಕ್ಷಯ್ ಕುಮಾರ್‌ಗೆ ಸಕ್ಸಸ್ ತಂದುಕೊಡುತ್ತಾ ‘ಓಎಂಜಿ 2’ ಸಿನಿಮಾ?

ಬಾಲಿವುಡ್‌ನಲ್ಲಿ ‘ಓಹ್ ಮೈ ಗಾಡ್’ ಸಿನಿಮಾ ಸಕ್ಸಸ್ ಆಗಿತ್ತು. ಅಕ್ಷಯ್ ಕುಮಾರ್ ನಟನೆಯ ‘ಓಹ್ ಮೈ ಗಾಡ್’ ಸಿನಿಮಾ 2012ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಸಕ್ಸಸ್ ಆದ ಮೇಲೆ ತೆಲುಗು, ಕನ್ನಡದಲ್ಲೂ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈಗ ಈ ಚಿತ್ರದ ಸೀಕ್ವೆಲ್ ರೆಡಿಯಾಗಿದೆ. ಆಗಸ್ಟ್ 11ರಂದು  ‘ಓಹ್ ಮೈ ಗಾಡ್’ ಪಾರ್ಟ್ ಟು ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಆದರೆ, ಈ ಚಿತ್ರದಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದು, ಅಕ್ಷಯ್ ಕುಮಾರ್ ಅವರ ಶಿವನ ಅವತಾರ.

ಇದನ್ನೂ ಓದಿ: ರಾಮ್‌ ಚರಣ್‌ ಪುತ್ರಿಗೆ ಮುಕೇಶ್​ ಅಂಬಾನಿಯಿಂದ ದುಬಾರಿ ಉಡುಗೊರೆ – 1ಕೋಟಿ ಮೌಲ್ಯದ ಚಿನ್ನದ ತೊಟ್ಟಿಲು ಗಿಫ್ಟ್‌

ಅಕ್ಷಯ್ ಕುಮಾರ್ ಅವರ ಶಿವನ ಅವತಾರದ ಪೋಸ್ಟರ್‌ಗಳು ಗಮನ ಸೆಳೆಯುತ್ತಿದೆ. ‘ಓಹ್ ಮೈ ಗಾಡ್’ ಪಾರ್ಟ್ ಟು ಸಿನಿಮಾದ ಟೀಸರ್ ಶೀಘ್ರವೇ ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿದೆ. ಈ ಮೊದಲು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಆಗಸ್ಟ್ 11ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಆ ಸಿನಿಮಾ ರೇಸ್‌ನಿಂದ ಹಿಂದೆ ಸರಿದಿದೆ. ಈ ಕಾರಣದಿಂದಲೇ ‘ಓಎಂಜಿ 2’ ಸಿನಿಮಾ ಈ ಸಂದರ್ಭದಲ್ಲಿ ರಿಲೀಸ್ ಆಗುತ್ತಿದೆ. ಆಗಸ್ಟ್ 15ರಂದು ಹಾಲಿಡೇ ಇರುವುದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಲಿದೆ. ಅಮಿತ್ ರಾಯ್ ಅವರು ‘ಓಎಂಜಿ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಪೋಸ್ಟರ್ ಮೂಡಿ ಬಂದಿದೆ. ಪಂಕಜ್ ತ್ರಿಪಾಠಿ, ಅರುಣ್ ಗೋವಿಲ್ ಮೊದಲಾದವರು ನಟಿಸಿದ್ದಾರೆ. 1987ರ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್ ಅವರು ರಾಮನ ಪಾತ್ರ ಮಾಡಿದ್ದರು. ‘ಓಎಂಜಿ 2’ ಚಿತ್ರದಲ್ಲೂ ಅವರಿಗೆ ರಾಮನ ಪಾತ್ರವನ್ನೇ ನೀಡಲಾಗಿದೆ ಅನ್ನೋದು ವಿಶೇಷ.

ಅಕ್ಷಯ್ ಕುಮಾರ್ ಅವರು ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದಾರೆ. 2021ರಲ್ಲಿ ರಿಲೀಸ್ ಆದ ‘ಸೂರ್ಯವಂಶಿ’ ಚಿತ್ರವೇ ಅಕ್ಕಿಯ ಕೊನೆ ಸಿನಿಮಾ. ಇದಾದ ಬಳಿಕ ಅವರ ಸಿನಿಮಾಗಳು ಫ್ಲಾಪ್ ಆದವು. ‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ರಾಮ್ ಸೇತು’ ಸೇರಿ ಇನ್ನೂ ಅನೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಲು ವಿಫಲ ಆದವು. ಈ ವರ್ಷ ತೆರೆಗೆ ಬಂದ ‘ಸೆಲ್ಫೀ’ ಚಿತ್ರದ ಕಥೆ ಕೂಡ ಅಷ್ಟೇ. ಈಗ ಅವರು ‘ಓಎಂಜಿ 2’ ಮೂಲಕ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

suddiyaana