ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್..!

ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್..!

ಬಾಲಿವುಡ್‌ನ ಬಹುನಿರೀಕ್ಷೆಯ ಚಿತ್ರ ‘ಒಎಂಜಿ 2’ ಆಗಸ್ಟ್ 11ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಬಗ್ಗೆ ಈಗಾಗಲೇ ಚರ್ಚೆಯೂ ಶುರುವಾಗಿದೆ. ‘ಒಎಂಜಿ 2’ ಚಿತ್ರದಲ್ಲಿ ದೇವರು ಹಾಗೂ ಲೈಂಗಿಕ ವಿಚಾರ ಇದೆ. ಎರಡನ್ನೂ ಒಟ್ಟಿಗೆ ಬೆರೆಸಿರುವುದರಿಂದ ಈ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿತ್ತು. ಈ ಸಮಿತಿ ಚಿತ್ರಕ್ಕೆ ಸೆನ್ಸಾರ್ ಮಾಡಿದೆ. ಇದರಿಂದಾಗಿ ಸಿನಿಮಾದ ಕೆಲ ಭಾಗಗಳಿಗೆ ಕತ್ತರಿಬಿದ್ದಿದೆ.

ಇದನ್ನೂ ಓದಿ: ‘ಓಎಂಜಿ 2’ ಚಿತ್ರದ ಟೀಸರ್ ರಿಲೀಸ್ – ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್ ದರ್ಶನ..!

ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬೇಸರದ ಸಂಗತಿ ಎಂದರೆ ಸಿನಿಮಾದ 20 ಕಡೆಗಳಲ್ಲಿ ಕತ್ತರಿ ಹಾಕಲಾಗಿದೆ. ಜೊತೆಗೆ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಅಕ್ಷಯ್ ಕುಮಾರ್ ನಟನೆಯ ‘ಒಹ್ ಮೈ ಗಾಡ್’ ಸಿನಿಮಾ ಹಿಟ್ ಆಗಿತ್ತು. ದಶಕಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದೆ. ಅಕ್ಷಯ್ ಕುಮಾರ್ ಅವರೇ ಮುಖ್ಯಭೂಮಿಕೆಯಲ್ಲಿರುವ ‘ಒಎಂಜಿ 2’ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗುತ್ತಿದೆ.

ಆದಿಪುರುಷ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ರಾಮಾಯಣವನ್ನು ತಿರುಚಲಾಗಿದೆ ಎಂಬ ಆರೋಪ ಈ ಸಿನಿಮಾ ಬಗ್ಗೆ ವ್ಯಕ್ತವಾಯಿತು. ಅನೇಕರು ಸೆನ್ಸಾರ್ ಮಂಡಳಿಯ ವಿರುದ್ಧ ಕಿಡಿಕಾರಿದರು. ಇದೇ ಕಾರಣದಿಂದ ಸೆನ್ಸಾರ್ ಮಂಡಳಿಯವರು ಎಚ್ಚೆತ್ತುಕೊಂಡಿದ್ದಾರೆ. ‘ಒಎಂಜಿ 2’ ಚಿತ್ರದಲ್ಲಿ ದೇವರು ಹಾಗೂ ಲೈಂಗಿಕ ವಿಚಾರ ಇದೆ. ಎರಡನ್ನೂ ಒಟ್ಟಿಗೆ ಬೆರೆಸಿರುವುದರಿಂದ ಈ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿತ್ತು. ಈ ಸಮಿತಿ ಚಿತ್ರಕ್ಕೆ ಸೆನ್ಸಾರ್ ಮಾಡಿದೆ. ‘ಬಾಲಿವುಡ್ ಹಂಗಾಮ’ ವರದಿ ಮಾಡಿರುವ ಪ್ರಕಾರ, ದೃಶ್ಯ ಹಾಗೂ ಸಂಭಾಷಣೆ ಮ್ಯೂಟ್ ಸೇರಿ 20 ಕಡೆಗಳಲ್ಲಿ ಬದಲಾವಣೆ ಮಾಡಲು ಸೂಚನೆ ನೀಡಲಾಗಿದೆ. ಆದರೆ, ಇದಕ್ಕೆ ಸಿನಿಮಾ ತಂಡ ಸಿದ್ಧವಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ ಸಿನಿಮಾಗೆ ಎ ಪ್ರಮಾಣಪತ್ರ ಸಿಕ್ಕಿದ್ದು, 18 ವರ್ಷದ ಕೆಳಗಿನವರು ಚಿತ್ರವನ್ನು ನೋಡುವಂತಿಲ್ಲ. ಈ ಕಾರಣಕ್ಕೆ ಸಿನಿಮಾದ ಗಳಿಕೆ ತಗ್ಗಲಿದೆ. ಜುಲೈ 31ರಂದು ‘ಒಎಂಜಿ 2’ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎನ್ನುವುದರ ಝಲಕ್ ಈ ಟ್ರೇಲರ್‌ನಲ್ಲಿ ಸಿಗಲಿದೆ. ಅಕ್ಷಯ್ ಕುಮಾರ್ ಅವರು ‘ಒಎಂಜಿ 2’ ಚಿತ್ರದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ದೇವರ ನಂಬುವ ವ್ಯಕ್ತಿಯಾಗಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಯಾಮಿ ಗೌತಮ್ ಕೂಡ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾದಲ್ಲಿ ಇದೆ. ಇದನ್ನು ಯುವ ಜನತೆ ನೋಡಬೇಕು ಎಂಬುದು ಚಿತ್ರತಂಡದ ಆಶಯ ಆಗಿತ್ತು. ಆದರೆ, ಈಗ ಸಿನಿಮಾಗೆ ‘ಎ’ ಸರ್ಟಿಫಿಕೇಟ್ ಸಿಕ್ಕಿರುವುದರಿಂದ ಅವರ ಆಶಯಕ್ಕೆ ಅಡಚಣೆ ಉಂಟಾಗಿದೆ.

suddiyaana