ಅಕ್ಕ ಸಾಯೋ ಸ್ಥಿತಿಯಲ್ಲಿದ್ದರೂ ಕಿಡ್ನಿ ಕೊಡಲು ಒಲ್ಲೆ ಎಂದಳು.. – ದ್ವೇಷಕ್ಕೆ ಇದೇ ಕಾರಣ ಎಂದು ಸತ್ಯ ಬಿಚ್ಚಿಟ್ಟ ತಂಗಿ!
ಸಾಮಾನ್ಯವಾಗಿ ಒಡ ಹುಟ್ಟಿದವರೊಂದಿಗೆ ಜಗಳ ಆಗೋದು ಸಾಮಾನ್ಯ. ಸಣ್ಣ ಪುಟ್ಟ ವಿಚಾರಗಳಿಗೂ ಜಗಳವಾಡಿ, ಮರುಕ್ಷಣ ಒಂದಾಗುತ್ತಾರೆ. ಇನ್ನೂ ಕೆಲವು ಸಹೋದರ- ಸಹೋದರಿ ಸಣ್ಣ ವಿಚಾರಕ್ಕೆ ಜಗಳವಾಡಿ ದೂರವಾಗುತ್ತಾರೆ. ಇದು ದ್ವೇಶಕ್ಕೆ ದಾರಿಕೊಡುತ್ತೆ. ಒಡಹುಟ್ಟಿದವರು ಸಾಯುತ್ತಿದ್ದಾರೆ ಅಂತಾ ಗೋತ್ತಾದರೂ ಅವರ ಸಹಾಯಕ್ಕೆ ನಿಲ್ಲುವುದಿಲ್ಲ. ಸತ್ತರೆ ಸಾಯಲಿ ಬಿಡಿ ನನಗೇನು ಅಂತಾ ಹೇಳುತ್ತಾರೆ. ಇಲ್ಲೂ ಕೂಡ ಅಕ್ಕ – ತಂಗಿ ಮಧ್ಯೆ ಜಗಳ ನಡೆದಿದೆ. ಈಗ ಅಕ್ಕ ಸಾಯುವ ಸ್ಥಿತಿಯಲ್ಲಿದ್ದಾಳೆ. ಏನೇ ಆದರೂ ತಾನು ಆಕೆಗೆ ಸಹಾಯ ಮಾಡುವುದಿಲ್ಲ ಅಂತಾ ತಂಗಿ ಹಠ ಹಿಡಿದು ಕುಳಿತಿದ್ದಾಳೆ.
ಅಷ್ಟಕ್ಕೂ ಆಗಿದ್ದೇನು?
ಈ ಘಟನೆ ನಡೆದಿರೋದು ಬ್ರಿಟನ್ ನಲ್ಲಿ. ಅಕ್ಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಈಗ ಆಕೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಆದ್ರೆ ತಂಗಿ ಈ ಸಮಯದಲ್ಲೂ ಅಕ್ಕನನ್ನು ದ್ವೇಷಿಸುತ್ತಿದ್ದಾಳೆ. ವೈದ್ಯರು ಅಕ್ಕನ ಜೀವ ಉಳಿಯಬೇಕಾದರೆ ತಂಗಿ ಕಿಡ್ನಿ ಕೊಡಬೇಕು ಅಂತಾ ಹೇಳಿದ್ದಾರೆ. ಆದ್ರೆ ಆಕೆ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ತನ್ನ ಅಕ್ಕನಿಗೆ ಸಾವುಬದುಕಿನ ಮಧ್ಯೆ ಹೋರಾಡ್ತಿದ್ದರೂ ಆಕೆಗೆ ಕಿಡ್ನಿ ಕೊಡಲು ಒಲ್ಲೆ ಎಂದಿದ್ದಾಳೆ. ಅಷ್ಟಕ್ಕೂ ಆಕೆ ಜೀವನದಲ್ಲಿ ನಡೆದಿದ್ದೇನು? ಯಾಕೆ ಕಿಡ್ನಿ ನೀಡಲು ನಿರಾಕರಿಸ್ತಿದ್ದಾಳೆ ಎಂಬ ಕಾರಣವನ್ನೂ ಆಕೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ. ತಾನು ಮಾಡಿದ್ದು ಎಷ್ಟು ಸರಿ ಎಂಬುದನ್ನು ಆಕೆ ಪ್ರಶ್ನಿಸಿದ್ದಾಳೆ.
ಇದನ್ನೂ ಓದಿ: ಜನರು ಬಟ್ಟೆ ಧರಿಸಲಿ ಎಂದು ಬಯಸಿದ್ದೆ, ಅದನ್ನು ತೆಗೆಯಲು ಅಲ್ಲ – ನಟಿ ಶಿಲ್ಪಾ ಶೆಟ್ಟಿ ಗಂಡನ ಸೆಕ್ಸ್ ಜೋಕ್..!
ಅಕ್ಕನನ್ನು ದ್ವೇಷಿಸಲು ಇದೇ ಕಾರಣ!
ತಂಗಿ 17 ವರ್ಷದಲ್ಲಿದ್ದಾಗ ಗರ್ಭಿಣಿಯಾಗಿದ್ದಳು. ಹೆತ್ತವರು ಇದನ್ನು ಒಪ್ಪುವುದಿಲ್ಲ ಎಂಬುದು ಆಕೆಗೆ ಗೊತ್ತಿತ್ತು. ಆದ್ರೆ 27 ವರ್ಷದ ಅಕ್ಕ, ತಂಗಿ ಬೆಂಬಲಕ್ಕೆ ನಿಂತಿದ್ದಳು. ಆಪರೇಷನ್ ಬೇಡ, ನೀನು ಮಗುವನ್ನು ಹೆರು ಎಂದು ಅಕ್ಕ ಸಲಹೆ ನೀಡಿದ್ದಳು. ಅಕ್ಕನಿಗೆ ಮಗುವಿಲ್ಲದ ಕಾರಣ, ನಿನ್ನ ಮಗುವನ್ನು ನಾನು ದತ್ತು ಪಡೆಯುತ್ತೇನೆ. ನನ್ನ ಮಗುವಿನಂತೆ ನೋಡಿ ಕೊಳ್ತೇನೆ ಎಂಬ ಭರವಸೆ ನೀಡಿದ್ದಳು. ಅಲ್ಲದೆ ನೀನು, ನಿನ್ನ ಮಗುವಿಗೆ ಚಿಕ್ಕಮ್ಮನಾಗಿ, ಸದಾ ಅದರ ಜೊತೆ ಇರು ಎಂದಿದ್ದಳು. ಹಾಗೇ ಈ ವಿಷ್ಯವನ್ನು ಯಾರಿಗೂ ಹೇಳಬೇಡ ಎಂದಿದ್ದಳು. ಮಗು ಹೆತ್ತ ಬಳಿಕ ತನ್ನ ಮಗುವನ್ನು ಅಕ್ಕನ ಕೈಗೆ ನೀಡಿದ್ದಾಳೆ. ಮಗು ಕೈಗೆ ಬರುತ್ತಿದ್ದಂತೆ ಅಕ್ಕ ತನ್ನ ವರಸೆ ಬದಲಿಸಿದ್ದಾಳೆ!
ಮಗು ಕೊಟ್ಟ ತಂಗಿ ಬದುಕಲ್ಲೇ ಅಕ್ಕ ಆಡ ಆಡಿದ್ಲಾ?
ಅಕ್ಕ ಹೇಳಿದಂತೆ ತಂಗಿ ಚಾಚುತಪ್ಪದೇ ಮಾಡಿದ್ದಾಳೆ. ಮಗು ಹೆತ್ತು ಅಕ್ಕನ ಮಡಿಲಿಗೆ ಹಾಕಿದ್ದಾಳೆ. ಆದ್ರೆ ತಂಗಿ ಅಂದುಕೊಂಡಂತೆ ಯಾವುದೂ ಆಗ್ಲಿಲ್ಲ. ಕುಟುಂಬದಲ್ಲಿ ಕೆಲ ಸಮಸ್ಯೆ ಕಾಣಿಸಿಕೊಂಡಿತು. ಇದ್ರಿಂದ ಅಕ್ಕ ಬೇರೆಯಾದಳು. ತನ್ನ ಪತಿ ಹಾಗೂ ಮಗುವಿನ ಜೊತೆ ದೂರ ವಾಸ ಶುರು ಮಾಡಿದಳು. ತಂಗಿಗೆ ಮಗುವನ್ನು ನೋಡಲೂ ಅವಕಾಶ ನೀಡಲಿಲ್ಲ. ತಾಯಿ ಸತ್ತು ಹೋಗಿದ್ದಾಳೆಂದು ಮಗುವನ್ನು ನಂಬಿಸಿದ್ದಳು. ಅಕ್ಕ ಆಲಿಸ್, ತನ್ನ ತಂಗಿ ಮಗಳಾದ ಎಮಿಲಿಯನ್ನು, ತಂಗಿಗೆ ನೋಡಲು ಬಿಡಲಿಲ್ಲ. ಎಮಿಲಿ ಎರಡು ವರ್ಷದವಳಿದ್ದಾಗ ಈ ಎಲ್ಲ ಘಟನೆ ನಡೆದಿದೆ. ಅಕ್ಕ ಆಲಿಸ್ ಜೊತೆ ತಂಗಿ ಜಗಳವಾಡಿದ್ದಾಳೆ. ಇಬ್ಬರ ಮಧ್ಯೆ ಇದೇ ಕಾರಣಕ್ಕೆ ದ್ವೇಷ ಬೆಳೆದಿದೆ.
ತಂಗಿದ್ದೇ ಕಿಡ್ನಿ ಯಾಕೆ?
ಆಕೆ ಅಕ್ಕನಿಗೆ ತನ್ನದೇ ಕಿಡ್ನಿ ಯಾಕೆ ಬೇಕು ಅಂತಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾಳೆ. ಅಕ್ಕನ ಪರಿಸ್ಥಿತಿ ಸರಿಯಿಲ್ಲ ಎಂಬುದು ನನಗೆ ಗೊತ್ತಿದೆ. ಆಕೆಗೆ ಕುಟುಂಬದಲ್ಲಿ ಕಿಡ್ನಿ ನೀಡಲು ಯೋಗ್ಯವಾದ ವ್ಯಕ್ತಿ ನಾನೊಬ್ಬಳೇ ಇರೋದು. ಆದ್ರೆ ಆಕೆಗೆ ಕಿಡ್ನಿ ನೀಡುವ ಮನಸ್ಸು ನನಗಿಲ್ಲ. ನನ್ನ ಮಗುವಿನ ಜೊತೆ ಆಕೆ ಮೋಸ ಮಾಡಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ.
ಮಹಿಳೆಯ ಬೆಂಬಲಕ್ಕೆ ನಿಂತ ನೆಟ್ಟಿಗರು!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಆಕೆಯ ಪೋಸ್ಟ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಜನರು ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸ್ಬೇಕು ಎಂಬುದು ತಂಗಿ ಉದ್ದೇಶ. ರೆಡ್ಡಿಟ್ ನಲ್ಲಿ ಆಕೆಯ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ತಂಗಿ ಮಾಡಿದ್ದು ಸರಿಯಾಗಿದೆ ಎಂದು ಕೆಲವರು ಬೆಂಬಲ ಸೂಚಿಸಿದ್ದಾರೆ. ಅಕ್ಕ ಮಾಡಿದ ತಪ್ಪಿಗೆ ಶಿಕ್ಷೆ ಆಗ್ಬೇಕು. ನೀವು ಒಂದು ಕಿಡ್ನಿ ಕೊಟ್ಮೇಲೆ ನಿಮಗೆ ಸಮಸ್ಯೆಯಾದ್ರೆ ಯಾರು ಬರ್ತಾರೆ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.