ಭೂಮಿಗೆ ಮರಳಲಿದೆ 38 ವರ್ಷ ಹಳೆಯ ನಾಸಾ ಉಪಗ್ರಹ

ಭೂಮಿಗೆ ಮರಳಲಿದೆ 38 ವರ್ಷ ಹಳೆಯ ನಾಸಾ ಉಪಗ್ರಹ

ಸುಮಾರು 38 ವರ್ಷ ಹಳೆಯ ನಾಸಾ ಉಪಗ್ರಹವೊಂದು ಭೂಮಿಗೆ ಮರುಪ್ರವೇಶ ಮಾಡಲಿದೆ ಎಂದು ನಾಸಾ ತಿಳಿಸಿದೆ.

ಸುಮಾರು 2,450 ಕೆಜಿ ತೂಕದ ಸ್ಯಾಟಲೈಟ್ ಆಕಾಶದಿಂದ ಕೆಳಗೆ ಬೀಳಲಿದೆ. ಈ ಉಪಗ್ರಹ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಲೇ ಬಹುಪಾಲು ಸುಟ್ಟು ಹೋಗಲಿದೆ. ಆದರೂ ಕೆಲವು ಭಾಗಗಳು ಉಳಿಯಬಹುದು. ಇದರಿಂದ ಅಪಾಯದ ಸಾಧ್ಯತೆ ಕಡಿಮೆ. ಇದರಿಂದಾಗಿ 9,400 ಜನರಲ್ಲಿ ಯಾರಿಗಾದರೂ ಒಬ್ಬರಿಗೆ ತೊಂದರೆಯಾಗಬಹುದು ಎಂದು ನಾಸಾ ಹೇಳಿದೆ.

ಇದನ್ನೂ ಓದಿ: ಅಮೆರಿಕ ಕನಸಿಗೆ ಕತ್ತರಿ ಹಾಕುತ್ತಾ ಬೈಡನ್ ಸರ್ಕಾರ? – ಹೆಚ್ – 1 ಬಿ ವೀಸಾ ಶುಲ್ಕ ದಿಢೀರ್ ಏರಿಕೆ

ರಕ್ಷಣಾ ಇಲಾಖೆಯ ಪ್ರಕಾರ ಈ ಉಪಗ್ರಹವು ಭಾನುವಾರ ರಾತ್ರಿ ಭೂಮಿಗೆ ಮರಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಆದರೆ, ಕ್ಯಾಲಿಫೋರ್ನಿಯಾ ಮೂಲದ ಏರೋಸ್ಪೇಸ್ ಕಾರ್ಪೊರೇಷನ್ ಪ್ರಕಾರ, ಆಫ್ರಿಕಾ, ಏಷ್ಯಾದ ಮಧ್ಯಪ್ರಾಚ್ಯ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗಗಳಲ್ಲಿ ಸೋಮವಾರ ಬೆಳಗ್ಗೆ ಹಾದು ಹೋಗಬಹುದು ಎನ್ನಲಾಗಿದೆ.

ಈ ಭೂ ವಿಕಿರಣ ಬಜೆಟ್ ಉಪಗ್ರಹವನ್ನು 1984ರಲ್ಲಿ ಉಡಾವಣೆ ಮಾಡಲಾಗಿತ್ತು. ಇದರ ಕೆಲಸ ಮಾಡುವ ಅವಧಿ ಎರಡು ವರ್ಷ ಎಂದು ಅಂದಾಜಿಸಲಾಗಿದ್ದರೂ, ಇದು 2005ರವರೆಗೆ ಓಝೋನ್ ಮತ್ತು ಇತರ ವಾತಾವರಣದ ಮಾಪನಗಳನ್ನು ಮಾಡುತ್ತಲೇ ಇತ್ತು. ಭೂಮಿಯು ಹೇಗೆ ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಹೊರಸೂಸುತ್ತದೆ ಎಂಬುದನ್ನು ಉಪಗ್ರಹವು ಅಧ್ಯಯನ ಮಾಡಿದೆ.

1,984 ರಲ್ಲಿ ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸ್ಯಾಲಿ ರೈಡ್ ಅವರು ಚಾಲೆಂಜರ್ ನೌಕೆಯ ”ರೋಬೋಟ್ ಆರ್ಮ್” ಎಂಬ ಸಾಧನ ಬಳಸಿ ಇಆರ್ ಬಿಎಸ್ ಅನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು. ಅದೇ ಕಾರ್ಯಾಚರಣೆಯಲ್ಲಿ ಅಮೆರಿಕ ಮಹಿಳಾ ಗಗನಯಾನಿ ಕ್ಯಾಥರಿನ್ ಸುಲ್ಲಿವನ್ ಅವರು ಬಾಹ್ಯಾಕಾಶ ನಡೆಗೆಯನ್ನು ಕೈಗೊಂಡಿದ್ದರು.

suddiyaana