ಕಲಿಕೆಗೆ ವಯಸ್ಯಾಕೆ.. ಮನಸ್ಸಿದ್ದರೆ ಸಾಕು..! -81ನೇ ವಯಸ್ಸಿನಲ್ಲಿ ಎಂಎ ಇಂಗ್ಲಿಷ್ ಪರೀಕ್ಷೆ ಬರೆದ ವೃದ್ಧ..!

ಕಲಿಕೆಗೆ ವಯಸ್ಯಾಕೆ.. ಮನಸ್ಸಿದ್ದರೆ ಸಾಕು..! -81ನೇ ವಯಸ್ಸಿನಲ್ಲಿ ಎಂಎ ಇಂಗ್ಲಿಷ್ ಪರೀಕ್ಷೆ ಬರೆದ ವೃದ್ಧ..!

ಕಲಿಯಲು ವಯಸ್ಸು ಮುಖ್ಯ ಅಲ್ಲ.. ಮನಸು ಮುಖ್ಯ ಎಂದು ಹೇಳುತ್ತಾರೆ. ಅದು ನಿಜವಾದ ಮಾತು ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ 81 ವರ್ಷದ ಹಿರಿಯ ವ್ಯಕ್ತಿ. ವಿಜಯಪುರದ 81 ವರ್ಷದ ಹಿರಿಯ ನಾಗರಿಕರೊಬ್ಬರು ಎಂಎ ಇಂಗ್ಲಿಷ್ ಪರೀಕ್ಷೆ ಬರೆಯುವ ಮೂಲಕ ವಯಸ್ಸಾದರೂ ಕಲಿಕೆಗೆ ಅಡ್ಡಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಬಿಎಲ್‌ಡಿಇ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ ಪರೀಕ್ಷೆಯಲ್ಲಿ ಎಂಎ ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ 81 ವರ್ಷದ ನಿಂಗಯ್ಯ ಒಡೆಯರ ಯುವಪೀಳಿಗೆಗೂ ಆದರ್ಶವಾಗಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಗಗನಸಖಿಯರಿಗೆ ಮಾತ್ರವಲ್ಲ ವಿಮಾನಗಳಲ್ಲಿ ಪುರುಷ ಸಿಬ್ಬಂದಿಗೂ ಮೇಕಪ್‌ಗೆ ಅವಕಾಶ!

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್ಸಿ ಹಳ್ಳಿಯವರಾಗಿರುವ ನಿಂಗಯ್ಯ ಒಡೆಯರ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಹೆಣ್ಣು ಮಗಳಿದ್ದಾಳೆ. ಅಲ್ಲದೇ ಐದು ಜನ ಮೊಮ್ಮಕ್ಕಳಿದ್ದಾರೆ. ಆದರೆ ಇವರ ವಿದ್ಯಾರ್ಜನೆಗೆ ಯಾವುದೂ ಅಡ್ಡಿಯಾಗಿಲ್ಲ. ಇವರ ಮಗಳು ಕೂಡ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇನ್ನು ಗಂಡು ಮಕ್ಕಳು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ಇವರು ಸೇವಾ ನಿವೃತ್ತಿಯ ನಂತರ ಮತ್ತಷ್ಟು ಕಲಿಯಬೇಕು ಎಂಬ ಹಂಬಲದಿಂದ ಈಗಾಗಲೇ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಇಗ್ನೋದಿಂದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಇವರು ಪಡೆದಿದ್ದಾರೆ. ಆದರೂ ಇವರಿಗೆ ಓದುವ ಮತ್ತು ಪರೀಕ್ಷೆ ಬರೆಯುವ ಹವ್ಯಾಸ ಮಾತ್ರ ಕಡಿಮೆಯಾಗಿಲ್ಲ.

suddiyaana