ಓಲಾ ಸ್ಕೂಟರ್ ನಲ್ಲಿ ಕ್ರಿಕೆಟ್ ಕಾಮೆಂಟ್ರಿ – ಭೇಷ್ ಎಂದ ನೆಟ್ಟಿಗರು
ಒಡಿಶಾ: ಕ್ರಿಕೆಟ್ ಮ್ಯಾಚ್ ವೇಳೆ ಕಾಮೆಂಟ್ರಿ ಮಾಡುವುದನ್ನು ನಾವು ಟಿವಿಗಳಲ್ಲಿ ಕೇಳಿರುತ್ತೇವೆ. ಇಂತಹ ಕಾಮೆಂಟ್ರಿಗಳನ್ನು ಮಾಡಲು ಸಾಮಾನ್ಯ ಜನರಿಗೆ ಅವಕಾಶ ಸಿಗುವುದಿಲ್ಲ. ಆದರೆ ಇಂದಿನ ಯುವಕರು ಕ್ರಿಯೇಟಿವ್ ಆಗಿ ಯೋಚನೆ ಮಾಡಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ನಾವೇ ಬೇರೆ ನಮ್ಮ ರೇಂಜೇ ಬೇರೆ ಅಂತ ಎಲ್ಲರನ್ನು ತಮ್ಮತ್ತ ಗಮನ ಸೆಳೆಯುವಂತೆ ಮಾಡುತ್ತಾರೆ. ಈಗ ಇಂಥದ್ದೇ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈಗೀಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಹತ್ತಾರು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಈ ಸ್ಕೂಟರನ್ನು ಯುವಕನೊಬ್ಬ ವಿಭಿನ್ನವಾಗಿ ಬಳಸಿದ್ದಾನೆ.
ಇದನ್ನೂ ಓದಿ: ನೋಡಲು ಕೋಲಿನಂತಿದ್ರೂ ಇದು ಕೋಲಲ್ಲ – ವೈರಲ್ ಆದ ವಿಡಿಯೋದಲ್ಲೇನಿದೆ?
ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪಾರ್ಕ್ ಮಾಡಿರುವ ಓಲಾ ಸ್ಕೂಟರ್ ನ ಬ್ಲೂಟೂಥ್ ಆನ್ ಮಾಡಿ ಅದನ್ನು ಮೊಬೈಲ್ ಗೆ ಕನೆಕ್ಟ್ ಮಾಡಿದ್ದಾನೆ. ಹೀಗೆ ಮಾಡಿ ಮೊಬೈಲ್ ನಿಂದ ಮಾತನಾಡಿ, ಕ್ರಿಕೆಟ್ ಆಡುತ್ತಿರುವ ಸ್ನೇಹಿತರ ಆಟವನ್ನು ನೋಡಿ ಕಾಮೆಂಟ್ರಿ ಮಾಡಿದ್ದಾನೆ. ಸ್ಕೂಟರ್ ನ ಬ್ಲೂಟೂಥ್ ನ ಪಕ್ಕದಲ್ಲಿರುವ ಲೌಡ್ ಸ್ಪೀಕರ್ ಆಯ್ಕೆಯನ್ನು ಒತ್ತಿದ್ದಾನೆ. ಲೌಡ್ ಸ್ಪೀಕರ್ ನಲ್ಲಿ ಹತ್ತಾರು ಜನರಿಗೆ ಕ್ರಿಕೆಟ್ ಕಾಮೆಂಟ್ರಿ ಕೇಳಿದೆ.
ಟ್ವೀಟರ್ ನಲ್ಲಿ ಈ ವಿಡಿಯೋವನ್ನು ಬಿಕಾಶ್ ಬೆಹೆರಾ ಎಂಬ ವ್ಯಕ್ತಿ ಹಂಚಿಕೊಂಡಿದ್ದು, ಈ ವಿಡಿಯೋ ಒಡಿಶಾದ ಕಟಕ್ ನದ್ದು ಎನ್ನಲಾಗಿದೆ. ಸದ್ಯ ಈ ವಿಡಿಯೋವನ್ನು ಸುಮಾರು 90 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
#Cricket match announcing on @OlaElectric scooter speaker 🔊 @bhash #Odisha #Cuttack #OlaEV pic.twitter.com/8y0p0GhIaL
— Bikash Behera (@BkasBehera) December 22, 2022
ವೈರಲ್ ಆದ ಟ್ವೀಟ್ ಅನ್ನು, ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್, ರಿ ಟ್ವೀಟ್ ಮಾಡಿ, ನಮ್ಮ ವಾಹನದ ಅತ್ಯಂತ ಉತ್ತಮ ಬಳಕೆ ಇದು ಎಂದಿದ್ದಾರೆ.
This has to be the most creative use of our vehicle I have seen so far 😄👌🏼 https://t.co/QjCuv4wGQG
— Bhavish Aggarwal (@bhash) December 22, 2022