ಹೊಸ ಉದ್ಯೋಗಿಯನ್ನು ನೇಮಕ ಮಾಡಿಕೊಂಡ ಓಲಾ – ನಾಯಿಯನ್ನೇ ಕಂಪನಿ ಆಯ್ಕೆ ಮಾಡಿದ್ದೇಕೆ?

ಹೊಸ ಉದ್ಯೋಗಿಯನ್ನು ನೇಮಕ ಮಾಡಿಕೊಂಡ ಓಲಾ – ನಾಯಿಯನ್ನೇ ಕಂಪನಿ ಆಯ್ಕೆ ಮಾಡಿದ್ದೇಕೆ?

ನವದೆಹಲಿ: ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್‌ ಹೊಸ ಉದ್ಯೋಗಿಯೊಬ್ಬರನ್ನು ನೇಮಿಸಿಕೊಂಡಿದೆ. ಅಷ್ಟೇ ಅಲ್ಲದೇ ಈ ಕಂಪನಿ ಹೊಸ ಉದ್ಯೋಗಿ ಯಾರು ಎಂಬುವುದನ್ನೂ ಪರಿಚಯಿಸಿಕೊಂಡಿದೆ. ಕಂಪನಿಯ ಹೊಸ ಉದ್ಯೋಗಿ ಐಡಿ ಹಾಗೂ ಮಾಹಿತಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಓಲಾ ಎಲೆಕ್ಟ್ರಿಕ್‌ ಮೊದಲ ಬಾರಿಗೆ ತನ್ನ ಹೊಸ ಉದ್ಯೋಗಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಆ ಹೊಸ ಉದ್ಯೋಗಿ ಬೇರೆ ಯಾರು ಅಲ್ಲ. ಅದು ನಾಯಿಯಾಗಿದೆ. ಅಚ್ಚರಿಯಾದರೂ ಸತ್ಯ. ಈ ಬಗ್ಗೆ ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಕಂಪನಿಯ ಹೊಸ ಉದ್ಯೋಗಿ ಬಿಜ್ಲಿಯನ್ನು ಪರಿಚಯಿಸಿದ್ದಾರೆ.

ಇದನ್ನೂ ಓದಿ: 10 ನಿಮಿಷ ಟಾಯ್ಲೆಟ್‌ ಬ್ರೇಕ್‌ ತೆಗೆದುಕೊಂಡ ಮಹಿಳೆ! – ಬಾಸ್‌ ಪ್ರಶ್ನಿಸಿದ್ದಕ್ಕೆ ಉದ್ಯೋಗಿ ಹೀಗಾ ಮಾಡೋದು?

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಈ ನೇಮಕಾತಿಯ ವಿಶೇಷತೆ ಬಗ್ಗೆ ಹೇಳಿಕೊಂಡಿದ್ದಾರೆ. ಬಿಜ್ಲೀ ಎಂದರೆ.. ಹಿಂದಿಯಲ್ಲಿ ವಿದ್ಯುತ್. ಅದು ಕಂಪನಿಯ EV (ವಿದ್ಯುತ್ ವಾಹನ) ವ್ಯವಹಾರವನ್ನು ಸೂಚಿಸುತ್ತದೆ. ಶ್ವಾನ ಮನುಷ್ಯರಂತೆ ಕೆಲಸ ಮಾಡಲ್ಲ.. ಓಲಾವನ್ನು ಸ್ನೇಹಪರ ಕಂಪನಿಯನ್ನಾಗಿಸುವ ಆಲೋಚನೆಯ ಭಾಗವಾಗಿ ಅಗರ್ವಾಲ್ ಈ ಪೋಸ್ಟ್ ಅನ್ನು ಹಾಕಿದ್ದಾರೆ.

ಈ ಪೋಸ್ಟ್ ಪ್ರಕಾರ, ಬಿಜ್ಲಿ ಓಲಾ ಉದ್ಯೋಗಿ ಎಂದು ಗುರುತಿಸಲ್ಪಟ್ಟಿರುವುದು ಮಾತ್ರವಲ್ಲದೆ ಉದ್ಯೋಗಿ ಐಡಿಯೊಂದಿಗೆ ತನ್ನದೇ ಆದ ಓಲಾ  ಐಡಿ ಕಾರ್ಡ್ ಅನ್ನು ಸಹ ಪಡೆದುಕೊಂಡಿದೆ. ಬಿಜ್ಲಿ ಐಡಿ ಕಾರ್ಡ್ ಫೋಟೋ ಸರಳವಾದ ಗುರುತಿನ ಚೀಟಿಯಲ್ಲ..ಉದ್ಯೋಗಿ ಕೋಡ್ ‘440 V’ ಆಗಿದೆ. ಅಂದರೆ.. ಇದು EV ವ್ಯವಸ್ಥೆಯಲ್ಲಿನ ಪ್ರಮಾಣಿತ ವೋಲ್ಟೇಜ್ ಅನ್ನು ಪ್ರತಿನಿಧಿಸುತ್ತದೆ ಬಿಜಿಲಿಯ ರಕ್ತದ ಗುಂಪನ್ನು ‘paw+ve’ ಎಂದು ಬರೆಯಲಾಗಿದೆ.

ಬಿಜ್ಲೀ ಯಾವುದೇ ಅಗತ್ಯವಿದ್ದಲ್ಲಿ ತ್ವರಿತ ಸಂದೇಶ ಕಳುಹಿಸಲು ‘ಸ್ಲಾಕ್’ ಮೂಲಕ ಸಂಪರ್ಕಿಸಬಹುದು. ಇದು ತುರ್ತು ಸಂಪರ್ಕ ಮಾಹಿತಿಗಾಗಿ ಬಿಎ ಕಚೇರಿ ವಿವರಗಳನ್ನು ಸಹ ಒಳಗೊಂಡಿದೆ. ಬಹುಶಃ.. ಭವಿಶ್ ಅಗರ್ವಾಲ್ ಅವರ ಹೆಸರಿನ ಮೊದಲಕ್ಷರಗಳು (BA) ಅದನ್ನು ಪ್ರತಿನಿಧಿಸುತ್ತವೆ. ಐಡಿ ಕಾರ್ಡ್‌ನಲ್ಲಿರುವ ವಿಳಾಸವು ಕೋರಮಂಗಲದ ಹೊಸೂರು ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ತಂಡದ ಹೆಮ್ಮೆಯ ಸದಸ್ಯ ಎಂದು ಸೂಚಿಸುತ್ತದೆ ಎಂದು ಹೇಳಿದ್ದಾರೆ.

suddiyaana