ಓಲಾ-ಉಬರ್‌ಗೆ ಸೆಡ್ಡು ಹೊಡೆಯುತ್ತಾ ‘ನಮ್ಮ ಯಾತ್ರಿ’?
ಓಲಾ-ಉಬರ್‌ಗೆ ಸೆಡ್ಡು
ಬೆಂಗಳೂರು: ಓಲಾ, ಉಬರ್, ಱಪಿಡೋಗಳ ಸೇವೆ ದುಬಾರಿಯಾಗಿರೋ ಬಗ್ಗೆ ಸಾಕಷ್ಟು ವಿವಾದ ಇರುವಾಗಲೇ ನಮ್ಮ ಯಾತ್ರಿ ಌಪ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವಾರ 100 ಮಂದಿಯಷ್ಟೇ ಌಪ್ ಡೌನ್‌ಲೋಡ್ ಮಾಡಿಕೊಂಡಿದ್ರು. ಈಗ 10 ಸಾವಿರಕ್ಕೂ ಹೆಚ್ಚು ಜನ ನಮ್ಮ ಯಾತ್ರಿ ಌಪ್‌ನ್ನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಆಟೋ ಒಕ್ಕೂಟ ನಮ್ಮ ಯಾತ್ರಿ ಌಪ್ ಆಧಾರಿತ ಸೇವೆಯನ್ನ ನವೆಂಬರ್ ನಿಂದ ಆರಂಭಿಸಲು ನಿರ್ಧರಿಸಲಾಗಿದೆ.
ಆಟೋ ಚಾಲಕರ ಒಕ್ಕೂಟವು ಖಾಸಗಿ ಸಂಸ್ಥೆಯಿಂದ ತಾಂತ್ರಿಕ ನೆರವು ಪಡೆದು ಈ ಌಪ್ ಅಭಿವೃದ್ಧಿಪಡಿಸಿದೆ. ಮೊದಲೇ ನಿಗದಿ ಪಡಿಸಿದ ದರ ಅಂದರೆ, ಮೊದಲ ಎರಡು ಕಿಲೋಮೀಟರ್‌ಗೆ 30 ರೂಪಾಯಿ ಮತ್ತು ನಂತರದ ಪ್ರತಿಕಿಲೋಮೀಟರ್‌ಗೆ 15 ರೂಪಾಯಿ ನಿಗದಿ ಮಾಡಲು ಒಕ್ಕೂಟ ನಿರ್ಧರಿಸಿದೆ. ಮನೆಯವರೆಗೂ ಆಟೋ ಬಂದು ಕರೆದೊಯ್ಯುವ ಪ್ರಮೇಯ ಬಂದರೆ ಪಿಕಪ್ ಶುಲ್ಕವಾಗಿ 10 ರೂಪಾಯಿ ಪಡೆಯಲು ನಿರ್ಧರಿಸಲಾಗಿದೆ. ಈ ಌಪ್‌ನಲ್ಲಿ ಆಟೋರಿಕ್ಷಾ ಹೊರತಾಗಿ ಬೇರೆ ವಾಹನಗಳ ಸೇವೆ ಇರುವುದಿಲ್ಲ.
ಪ್ರಯಾಣಿಕರು ತಮ್ಮ ಪ್ರಯಾಣ ಕ್ಯಾನ್ಸಲ್ ಮಾಡಿದರೆ, ಅಗ್ರಿಗೇಟರ್ ಕಂಪನಿಗಳು 50 ರೂಪಾಯಿ ದಂಡ ವಿಧಿಸುತ್ತಿದ್ದವು. ಆದ್ರೆ, ನಮ್ಮ ಯಾತ್ರಿ ಌಪ್‌ನಲ್ಲಿ ಇದೆಲ್ಲಾ ಇರುವುದಿಲ್ಲ. ಪ್ರಯಾಣ ಆರಂಭಿಸುವ ಸ್ಥಳಕ್ಕೆ ಹತ್ತಿರವೇ ಮೂರರಿಂದ ನಾಲ್ಕು ಚಾಲಕರ ವಿವರ, ದರಗಳ ವಿವರಣೆ ಲಭ್ಯವಾಗುತ್ತದೆ. ಪ್ರಯಾಣಿಕರಿಗೆ ಇಲ್ಲಿ ಆಯ್ಕೆಯ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ ಒಂದರಿಂದ ನಮ್ಮ ಯಾತ್ರಿ ಸೇವೆ ಅಧೀಕೃತವಾಗಿ ಆರಂಭವಾಗಲಿದೆ. ಇನ್ನು ದರ ಕಡಿಮೆ ಮಾಡಿದ್ದೇವೆ ಅಂತಾ ಹೇಳಿಕೊಳ್ತಿರೋ ಓಲಾ, ಉಬರ್, ಱಪಿಡೋ ಆಟೋಗಳು ಮಳೆ ಬಂದಾಗ ಒಂದು ದರ, ಮಳೆ ಬರದಿದ್ದರೆ ಒಂದು ರೇಟ್, ಪೀಕ್‌ಹವರ್‌ಲ್ಲಿ ಒಂದು ದರ ನಿಗದಿ ಮಾಡುತ್ತಾ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿವೆ. ದರ ನಿಗದಿ ಬಗ್ಗೆ ಸಾರಿಗೆ ಇಲಾಖೆ ಕೂಡಾ ಒಮ್ಮತದ ತೀರ್ಮಾನಕ್ಕೆ ಇನ್ನೂ ಬಂದಿಲ್ಲ. ಇದರ ಮಧ್ಯೆ ನಮ್ಮ ಯಾತ್ರಿ ಌಪ್ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಿ ಜನಸ್ನೇಹಿ ಌಪ್ ಆಗುತ್ತಾ ಅನ್ನೋದನ್ನೂ ಕೂಡಾ ಮುಂದಿನ ದಿನಗಳಲ್ಲಿ ನೋಡಬೇಕಿದೆ.