ಸಾಕಿದ ಮಾಲೀಕನ ಪ್ರಾಣಕ್ಕೆ ಕುತ್ತು ತಂದ ಹುಲಿರಾಯ! – ಯಜಮಾನನ  ಕತ್ತು ಸೀಳಿತಾ ವ್ಯಾಘ್ರ

ಸಾಕಿದ ಮಾಲೀಕನ ಪ್ರಾಣಕ್ಕೆ ಕುತ್ತು ತಂದ ಹುಲಿರಾಯ! – ಯಜಮಾನನ  ಕತ್ತು ಸೀಳಿತಾ ವ್ಯಾಘ್ರ

ಸಾಮಾನ್ಯವಾಗಿ ಮನೆಯಲ್ಲಿ ನಾಯಿ, ಬೆಕ್ಕು, ಹಸು ಸಾಕುವುದನ್ನ ನಾವು ನೋಡಿದ್ದೇವೆ. ಆದ್ರೆ ಅಮೆರಿಕದಲ್ಲೊಬ್ಬ ಹುಲಿ, ಸಿಂಹಗಳನ್ನ ಸಾಕಿ ಇದೀಗ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ತಾನು ಸಾಕಿದ್ದ ಹುಲಿಯೇ ಈತನ ಜೀವಕ್ಕೆ ಕುತ್ತು ತಂದಿದೆ.

ಇದನ್ನೂ ಓದಿ:ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಮೋಹನ್ ಲಾಲ್- ಮೊದಲ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಶಾರುಖ್ ಖಾನ್

ಈ ಆಘಾತಕಾರಿ ಘಟನೆ ಅಮೆರಿಕದ ಒಕ್ಲಹೋಮ  ರಾಜ್ಯದಲ್ಲಿ ನಡೆದದೆ. ಗ್ರೋಲರ್ ಪೈನ್ಸ್ ಟೈಗರ್ ಪ್ರಿಸರ್ವ್‌ ಆಪರೇಟರ್​ ಹಾಗೂ ಟೈಗರ್ ಕಿಂಗ್ ಖ್ಯಾತಿಯ ರಯಾನ್ ಈಸ್ಲಿಗೆ ಹುಲಿ, ಸಿಂಹಗಳು ಅಂದರೆ ಪಂಚಪ್ರಾಣ. ಹೀಗಾಗಿ ಹಲವು ವರ್ಷಗಳಿಂದ ಹುಲಿ, ಸಿಂಹಗಳನ್ನ ಸಾಕುತ್ತಿದ್ರು. ಅಲ್ಲದೇ ಶೋಮಿ ಟೈಗರ್ಸ್ ಎಂಬ ಬ್ಯುಸಿನೆಸ್ ನಡೆಸ್ತಿರುವ ರಯಾನ್, ಹುಲಿಯಂತ ಪ್ರಾಣಿಗಳನ್ನು ಹೇಗೆ ಕೇರ್ ಮಾಡಬೇಕು. ಹಾಗೂ ಅವುಗಳನ್ನು ಹೇಗೆ ಸಾಕಬೇಕು ಅಂತಾ ಕಳೆದ 10 ವರ್ಷಗಳಿಂದ ಹೇಳಿಕೊಡುತ್ತ ಬಂದಿದ್ದಾರೆ. ಹುಲಿಗಳೊಂದಿಗೆ ಜೀವನ ನಡೆಸುವ ಇವರು, ಅನೇಕ ಡಾಕ್ಯುಮೆಂಟರಿಗಳನ್ನೂ ಮಾಡಿದ್ದರು. ಆದ್ರೀಗ ತಾನು ಸಾಕಿರುವ ಹುಲಿಯೇ ಇವರ ಜೀವಕ್ಕೆ ಕುತ್ತುತಂದಿದೆ. ಹುಲಿ ಇವರ ಮೇಲೆ ದಾಳಿ ಮಾಡಿದೆ. ರಯಾನ್ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದು ಕಡೆ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇನ್ನು ಗ್ರೋಲರ್ ಪೈನ್ಸ್ ಟೈಗರ್ ಪ್ರಿಸರ್ವ್ನ ಸದಸ್ಯರು, ರಯಾನ್‌ ಬಗ್ಗೆ ಮಾತನಾಡಿದ್ದಾರೆ. ಈಸ್ಲಿ ಯಾವಾಗಲೂ ಪ್ರಾಣಿಗಳನ್ನು ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಅವರ ಕೆಲಸ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿಗಳೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅವುಗಳನ್ನು ನೋಡಿಕೊಳ್ಳುವುದರ ಬಗ್ಗೆ ಆಗಿದೆ. ಈಸ್ಲಿ ಪ್ರತಿಯೊಂದು ಹುಲಿಯನ್ನು ತನ್ನ ಕುಟುಂಬದ ಸದಸ್ಯನಂತೆ ನೋಡಿಕೊಂಡಿದ್ದಾರೆ. ಆದ್ರೆ ರಯಾನ್‌ ಸ್ಥಿತಿ ಹೇಗಿದೆ ಎಂದು ಮಾಹಿತಿ ಬಹಿರಂಗಪಡಿಸಿಲ್ಲ.

Shwetha M