ಇನ್ನೂರು ಹುಡುಗಿಯರಿಗೆ ಹತ್ತು ಸಾವಿರ ಯುವಕರಿಂದ ಮದುವೆ ಅರ್ಜಿ!
ವಧು-ವರರ ಸಮಾವೇಶದಲ್ಲಿ ಯುವಕರ ಪಾಡು ಹೇಗಿತ್ತು ಗೊತ್ತಾ?

ಇನ್ನೂರು ಹುಡುಗಿಯರಿಗೆ ಹತ್ತು ಸಾವಿರ ಯುವಕರಿಂದ ಮದುವೆ ಅರ್ಜಿ! ವಧು-ವರರ ಸಮಾವೇಶದಲ್ಲಿ ಯುವಕರ ಪಾಡು ಹೇಗಿತ್ತು ಗೊತ್ತಾ?

ಮಂಡ್ಯ : ಮದುವೆ ವಯಸ್ಸಿಗೆ ಬಂದ ಮಗನಿಗೆ ಸೊಸೆ ಹುಡುಕುವ ಕರ್ತವ್ಯ ಹೆತ್ತವರಿಗೆ ಇದ್ದೇ ಇರುತ್ತೆ. ಅದರಲ್ಲೂ ಒಕ್ಕಲಿಗ ಸಮುದಾಯದ ಯುವಕರಿಗೆ ಹೆಣ್ಣು ಹುಡುಕುವುದು ದೊಡ್ಡ ಸವಾಲಾಗಿ ಕಾಡ್ತಿದೆ. ಇದಕ್ಕಾಗಿಯೇ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚುಂಚನಗಿರಿಯಲ್ಲಿ ಸೋಮವಾರ ರಾಜ್ಯಮಟ್ಟದ ವಧು – ವರರ ಸಮಾವೇಶವನ್ನು ಆಯೋಜಿಸಲಾಗಿತ್ತು. ಬೆಳಗ್ಗೆಯಿಂದಲೇ ಯುವಕರು ಟಿಪ್ ಟಾಪಾಗಿ ರೆಡಿಯಾಗಿ ಬಂದಿದ್ದರು. ಬಂದಿದ್ದು ನೂರು, ಐನೂರು, ಸಾವಿರ ಯುವಕರಲ್ಲ. ಹತ್ತು ಸಾವಿರ ಯುವಕರು ವಧು-ವರರ ಸಮಾವೇಶಕ್ಕೆ ಆಗಮಸಿದ್ದರು. ಬಂದವರು ಕಣ್ಣುಗಳು ಭಾವಿ ವಧುವಿಗಾಗಿ ಹುಡುಕಾಡುತ್ತಿದ್ದವು. ಆದರೆ ಬಂದ ಯುವತಿಯರ ಸಂಖ್ಯೆ ನೋಡಿ ಯುವಕರು ನಿರಾಶರಾಗಿದ್ದರು. ಹತ್ತು ಸಾವಿರ ಯುವಕರಿದ್ದ ಸಮಾವೇಶದಲ್ಲಿ ಇನ್ನೂರು ಯುವತಿಯರು ಮಾತ್ರ ಸೇರಿದ್ದರು.

ಇನ್ನೂರು ಯುವತಿಯರಿಗೆ ಹತ್ತು ಸಾವಿರ ಯುವಕರು ಅರ್ಜಿ ಸಲ್ಲಿಸಿದ್ದು ನೋಡಿ ಆಯೋಜಕರೇ ಸ್ವತಃ ದಂಗಾಗಿ ಹೋಗಿದ್ದರು. ಇನ್ನು ಹುಡುಗರ ಪೋಷಕರು ಭಾವೀ ಸೊಸೆಯನ್ನ ನೋಡಲು ಬಂದಿದ್ದರು. ಆದರೆ ಯಾರನ್ನ ಆರಿಸುವುದು, ಯಾರಿಗೆ ಯಾರು ಸಿಗ್ತಾರೋ ಅಂತಾ ನಿರಾಶೆಯಲ್ಲೇ ನಿಂತು ನೋಡುತ್ತಿದ್ದರು. ಇನ್ನು ಇನ್ನೂರು ಯುವತಿಯರು ಅವರು ಪೋಷಕರು, ಹತ್ತು ಸಾವಿರ ಯುವಕರು ಅವರ ಪೋಷಕರು, ಅವರ ಸ್ನೇಹಿತರು ಅಂತಾ ಸಮಾವೇಶದ ತುಂಬೆಲ್ಲಾ ಜನವೇ ಜನ.  ಈ ಜನಸ್ತೋಮದಿಂದ ಒಂದೆಡೆ ಟ್ರಾಫಿಕ್ ಕಿರಿಕಿರಿಯಾದರೆ, ಇನ್ನೊಂದೆಡೆ ಈ ಹೆಣ್ಣು – ಗಂಡುಗಳ ಅಂತರ ನೋಡಿ ಆಯೋಜಕರ ಕಷ್ಟ ಹೇಳತೀರದಾಗಿತ್ತು. ಈ ವಧು ವರರ ಸಮಾವೇಶವನ್ನ ಚುಂಚನಗಿರಿಯ ಮಹಾಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ, ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಇನ್ನೂರು ಯುವತಿಯರು ಈ ಹತ್ತು ಸಾವಿರ ಯುವಕರಲ್ಲಿ ಯಾರನ್ನ ಆಯ್ಕೆ ಮಾಡಿಕೊಳ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂಇದ್ದಿದ್ದಂತೂ ಸುಳ್ಳಲ್ಲ.

suddiyaana