‘ಒಎಂಜಿ2’ ಸಿನಿಮಾಕ್ಕೆ ‘ಎ’ ಸರ್ಟಿಪಿಕೇಟ್ ಸಿಕ್ಕಿದ್ಯಾಕೆ? – ಟ್ರೇಲರ್‌ನಲ್ಲಿ ರಿವೀಲ್ ಆಗಿರುವ ಸತ್ಯವೇನು?
‘ಒ ಮೈ ಗಾಡ್-2’ ಸಿನಿಮಾ ಬಗ್ಗೆ ಸಹಜವಾಗಿಯೇ ನಿರೀಕ್ಷೆಯಿತ್ತು. ಆದರೆ, ಈ ದೇವರ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿತ್ತು. ಹೀಗಾಗಿಯೇ ಒಹ್ ಮೈ ಗಾಡ್ ಪಾರ್ಟ್ ಟು ಚಿತ್ರದ ಟ್ರೇಲರ್ ನೋಡಲು ಅಭಿಮಾನಿಗಳು ಇಷ್ಟು ದಿನ ಕಾಯುತ್ತಿದ್ದರು. ಆಗಸ್ಟ್ 3 ರಂದು ಒಹ್ ಮೈ ಗಾಡ್ ಪಾರ್ಟ್ 2 ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ರಿಲೀಸ್ ಆಗಿ ಕೇವಲ ಒಂದೇ ಒಂದು ಗಂಟೆಯಲ್ಲಿ ಒಂದೂವರೆ ಮಿಲಿಯನ್ ವೀವ್ಸ್ ಕಂಡಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್..!
ಓಹ್ ಮೈ ಗಾಡ್ 2 ಆಗಸ್ಟ್ 11 ಕ್ಕೆ ಸಿನಿಮಾ ಕೂಡಾ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸೋಲನ್ನು ಕಂಡಿರುವ ಅಕ್ಷಯ್‌ಕುಮಾರ್ ಈ ಸಿನಿಮಾ ಮೂಲಕ ಸಕ್ಸಸ್‌ನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪ್ರತಿಭಾವಂತ ನಟ ಪಂಕಜ್ ತ್ರಿಪಾಠಿ ಕೂಡಾ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನಾಗಿ ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಕಾಂಬಿನೇಷನ್ ಅಂತೂ ಟ್ರೇಲರ್ ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ.
ಇನ್ನು ಈ ಚಿತ್ರದ ಕಾಂಟ್ರೊವರ್ಸಿ ಮೂಲವೇ ಲೈಂಗಿಕತೆ. ಲೈಂಗಿಕ ಶಿಕ್ಷಣದ ಸುತ್ತಲೂ ಈ ಚಿತ್ರದ ಕಥೆಯಿದೆ ಅನ್ನೋದು ಟ್ರೇಲರ್‌ನಲ್ಲಿ ಕನ್‌ಫರ್ಮ್ ಆಗಿದೆ. ಟ್ರೇಲರ್ ಉದ್ದಕ್ಕೂ ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಲೈಂಗಿಕ ವಿಚಾರಗಳನ್ನು ಸಿನಿಮಾದಲ್ಲಿ ಹೇಳುವಾಗ ಹೆಚ್ಚು ಎಚ್ಚರಿಕೆ ಬೇಕು. ಜೊತೆಗೆ ನೋಡುಗರಿಗೆ ಮುಜುಗರ ಉಂಟು ಮಾಡಬಾರದು. ಆದರೆ, ಈ ಸಿನಿಮಾದಲ್ಲಿ ದೇವರು ಮತ್ತು ಲೈಂಗಿಕತೆ ಎರಡೂ ಇದೆ. ಆದರೆ, ಸಿನಿಮಾ ಹೇಳ ಹೊರಟಿರುವುದು ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಎಷ್ಟು ಮುಖ್ಯ ಅನ್ನೋದನ್ನು. ಆದರೆ, ಈಗ ಈ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಹೀಗಾಗಿ ವಯಸ್ಕರು ಮಾತ್ರ ಈ ಚಿತ್ರ ವೀಕ್ಷಿಸಬಹುದು.