ರಿಯಲ್ ಸ್ಟಾರ್ ಉಪೇಂದ್ರಗೆ ಸಿಕ್ತು ಅಧಿಕೃತ ಚಿಹ್ನೆ – ‘ಆಟೋ’ ಮೂಲಕ ಚುನಾವಣಾ ಕಹಳೆ

ರಿಯಲ್ ಸ್ಟಾರ್ ಉಪೇಂದ್ರಗೆ ಸಿಕ್ತು ಅಧಿಕೃತ ಚಿಹ್ನೆ – ‘ಆಟೋ’ ಮೂಲಕ ಚುನಾವಣಾ ಕಹಳೆ

ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ರಾಜಕಾರಣಕ್ಕೆ ಕಾಲಿಟ್ಟು ಕೆಲ ವರ್ಷಗಳೇ ಕಳೆದಿದೆ. ಉತ್ತಮ ಪ್ರಜಾಕೀಯ ಪಾರ್ಟಿ (Uttama Prajaakeeya Party) ಹೆಸರಿನಲ್ಲಿ ಅವರು ಪಕ್ಷವೊಂದನ್ನು ಶುರು ಮಾಡುವ ಮೂಲಕ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡಿದ್ದಾರೆ. ಈ ಪಕ್ಷದಿಂದ ಈಗಾಗಲೇ ಪಂಚಾಯತಿ ಚುನಾವಣೆಯನ್ನು ಕೂಡಾ ಎದುರಿಸಿದ್ದಾರೆ. ಅಧಿಕೃತವಾಗಿ ಈ ಪಕ್ಷಕ್ಕೆ ಚಿಹ್ನೆ ಇರಲಿಲ್ಲ. ಇದೀಗ ಕೇಂದ್ರ ಚುನಾವಣೆ ಆಯೋಗ ಪಕ್ಷಕ್ಕೆ ಚಿಹ್ನೆ ನೀಡಿದೆ. ಉಪೇಂದ್ರ ಅಧ್ಯಕ್ಷರಾಗಿರುವ ಉತ್ತಮ ಪ್ರಜಾಕೀಯ ಪಕ್ಷಕ್ಕೆ ‘ಆಟೋ’ವನ್ನು (Auto) ಚಿಹ್ನೆಯನ್ನಾಗಿ ಕೇಂದ್ರ ಚುನಾವಣೆ ಆಯೋಗ ನೀಡಿದೆ. ಈ ಮೂಲಕ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕೃತ ಚಿಹ್ನೆ ದೊರೆತಿದೆ. ಹೀಗಾಗಿ ನಟ ಉಪ್ಪಿ ಈ ಬಾರಿ ಆಟೋ ಸವಾರಿ ಮೂಲಕ ಚುನವಣಾ ರಣಕಹಳೆ ಮೊಳಗಿಸಲಿದ್ದಾರೆ.

ಇದನ್ನೂ ಓದಿ:  ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ವಿಮಾನದಿಂದ ಕೆಳಗಿಳಿಸಿ ಕಾಂಗ್ರೆಸ್ ನಾಯಕನ ಬಂಧನ!

ಹಲವು ವರ್ಷಗಳಿಂದ ತಮ್ಮದೇ ಆದ ಸಿದ್ಧಾಂತ ಮೂಲಕ ಉಪೇಂದ್ರ ತಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆ. ತಾವು ನೇರವಾಗಿ ಚುನಾವಣೆ ಎದುರಿಸದೇ ಇದ್ದರೂ, ತಮ್ಮ ಅಭ್ಯರ್ಥಿಗಳ ಮೂಲಕ ರಾಜಕೀಯ ಪಡಸಾಲೆಯಲ್ಲಿ ತಮ್ಮ ಕನಸುಗಳನ್ನು ಬಿತ್ತುತ್ತಿದ್ದಾರೆ. ಇದೀಗ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

suddiyaana