ಲೋಕಸಭಾ ಚುನಾವಣೆಗೆ ನಿಲ್ಲಲು ಶಿವಣ್ಣಗೆ ಆಫರ್ – ಡಿಕೆಶಿ ಆಹ್ವಾನವನ್ನು ತಿರಸ್ಕರಿಸಿದ ಶಿವರಾಜ್ ಕುಮಾರ್

ಲೋಕಸಭಾ ಚುನಾವಣೆಗೆ ನಿಲ್ಲಲು ಶಿವಣ್ಣಗೆ ಆಫರ್ – ಡಿಕೆಶಿ ಆಹ್ವಾನವನ್ನು ತಿರಸ್ಕರಿಸಿದ ಶಿವರಾಜ್ ಕುಮಾರ್

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಮುಖ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ಬ್ಯುಸಿಯಾಗಿವೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೀದಾ ಸ್ಯಾಂಡಲ್‌ವುಡ್  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಲೋಕಸಭಾ ಚುನಾವನೆಗೆ ನಿಲ್ಲುವಂತೆ ಆಫರ್ ನೀಡಿದ್ದಾರೆ. ಆದ್ರೆ, ಶಿವಣ್ಣ, ಡಿಕೆಶಿ ಆಫರ್ ನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ.

 ಇದನ್ನೂ ಓದಿ: ಮೌಲ್ವಿ ಮುಂದಿಟ್ಟು ಸಿದ್ದರಾಮಯ್ಯಗೆ ಗುರಿ ಇಟ್ಟ ಯತ್ನಾಳ್ – ರಾಜ್ಯ ರಾಜಕೀಯದಲ್ಲಿ ನಿಲ್ಲದ ಜಟಾಪಟಿ

ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್   ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಆದ್ರೆ, ಶಿವರಾಜ್ ಕುಮಾರ್ ಅವರು ಡಿಕೆಶಿ ಕೊಟ್ಟ ಆಫರ್ ಅನ್ನು ನಯಾವಾಗಿಯೇ ತಿರಸ್ಕರಿಸಿದ್ದಾರೆ. ನಾನು ನಟ ಮಾತ್ರ. ರಾಜಕೀಯದ ಬಗ್ಗೆ ನನಗೆ ಗೊತ್ತಿಲ್ಲ ಎಂದು ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಶಿವಣ್ಣ ಹೇಳಿದ್ದರು. ಇದೀಗ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಬಹಿರಂಗಪಡಿಸಿದ ಶಿವಣ್ಣ, ಲೋಕಸಸಭೆಗೆ ರೆಡಿಯಾಗಿ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಆದ್ರೆ, ನಮ್ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚುವುದನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ನಮ್ಮದೇನಿದ್ದರೂ ಮೇಕಪ್ ಹಾಕುವುದು, ಸಿನಿಮಾ ಮಾಡುವುದು ಎಂದು ಹೇಳಿದರು. ಈ ಮೂಲಕ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದರು. ಗೀತಾಗೆ (ಆಸಕ್ತಿ ಇದ್ದರೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿ. ಹೆಂಡತಿ ಇಷ್ಟ ಪಟ್ಟರೆ ಅವರಿಗೆ ಸಪೋರ್ಟ್ ಮಾಡುವುದು ಗಂಡನ ಕರ್ತವ್ಯ. ಗೀತಾ ಇಷ್ಟ ಪಟ್ಟರೆ ಅದಕ್ಕೆ ಸಪೋರ್ಟ್ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಶಿವರಾಜ್ ಕುಮಾರ್ ಅವರಿಗೆ ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಹೇಳಿದ್ದೆ. ರೆಡಿಯಾಗಿ ಪಾರ್ಲಿಮೆಂಟ್‌ಗೆ ಹೋಗುವಂತೆ ಎಂದು ಹೇಳಿದ್ದೆ. ಆದ್ರೆ, ಅವರು ಐದಾರು ಸಿನಿಮಾ ಒಪ್ಪಿದ್ದೇನೆ ಎಂದು ಹೇಳಿದ್ದರು ಎಂದು ಡಿಕೆ ಶಿವಕುಮಾರ್ ತಮ್ಮಿಬ್ಬರ ಮಾತುಕತೆಯನ್ನು ಈಡಿಗ ಸಮಾವೇಶದಲ್ಲಿ ಬಹಿರಂಗಪಡಿಸಿದ್ದಾರೆ.

Sulekha