ಆಫ್ ಸ್ಪಿನ್ನರ್ ಅಕ್ಷರ್ ಪಟೇಲ್ ಹೊಸ ಇನ್ನಿಂಗ್ಸ್ – ಗೆಳತಿ ಮೇಹಾ ಪಟೇಲ್ ಜೊತೆ ಮದುವೆ

ಆಫ್ ಸ್ಪಿನ್ನರ್ ಅಕ್ಷರ್ ಪಟೇಲ್ ಹೊಸ ಇನ್ನಿಂಗ್ಸ್ – ಗೆಳತಿ ಮೇಹಾ ಪಟೇಲ್ ಜೊತೆ ಮದುವೆ

ಕ್ರಿಕೆಟ್ ಆಟಗಾರರ ಮದುವೆ ಗಮ್ಮತ್ತು ಜೋರಾಗಿಯೇ ಸಾಗುತ್ತಿದೆ. ಮೊನ್ನೆಯಷ್ಟೇ ಕೆ.ಎಲ್ ರಾಹುಲ್ ತಮ್ಮ ಗೆಳತಿ ಆಥಿಯಾ ಶೆಟ್ಟಿಯನ್ನು ವರಿಸಿದ್ದರು. ಇದೀಗ ಇನ್ನೊಬ್ಬ ಕ್ರಿಕೆಟರ್ ಅಕ್ಷರ್ ಪಟೇಲ್ ತಮ್ಮ ಬಹುಕಾಲದ ಗೆಳತಿ ಮೇಹಾ ಪಟೇಲ್ ಅವರನ್ನು ವಿವಾಹವಾಗಿದ್ದಾರೆ. ಜನವರಿ 26ರಂದು ಅಕ್ಷರ್ ಪಟೇಲ್ ಮತ್ತು ಮೇಹಾ ಪಟೇಲ್ ಹಸೆಮಣೆಯೇರಿದ್ದಾರೆ. ವಡೋದರಾದಲ್ಲಿ ಆಪ್ತರು ಹಾಗೂ ಬಂಧುಗಳ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ.

ಇದನ್ನೂ ಓದಿ:  ಅಬ್ಬಬ್ಬಾ.. ರಾಹುಲ್-ಆಥಿಯಾಗೆ ಎಂತೆಂಥಾ ಉಡುಗೊರೆಗಳು? – ಮದುವೆಗಿಂಥ ಸದ್ದು ಮಾಡ್ತಿವೆ ದುಬಾರಿ ಗಿಫ್ಟ್..!

ಭಾರತ ತಂಡದ ಆಫ್ ಸ್ಪಿನ್ನರ್ ಅಕ್ಷರ್ ಪಟೇಲ್ ಹಾಗೂ ಗೆಳತಿ ಮೇಹಾ ಪಟೇಲ್ ಬಹುಕಾಲದ ಸ್ನೇಹಿತರು. ಒಂದು ವರ್ಷದ ಹಿಂದೆಯೇ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ಡಯೆಟಿಷಿಯನ್ ಆಗಿರುವ ಮೇಹಾ ಅವರು ಪ್ರಾಣಿ ಪ್ರಿಯೆಯೂ ಹೌದು. ಈ ಮದುವೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಮತ್ತು ಗುಜರಾತ್‌ನ ಕೆಲವು ಆಟಗಾರರು ಭಾಗಿಯಾಗಿದ್ದರು. ಅಕ್ಷರ್ ಪಟೇಲ್ ಮತ್ತು ಮೇಹಾ ಪಟೇಲ್ ಇಬ್ಬರೂ ಬಹಳ ಹಿಂದಿನಿಂದಲೂ ಪರಿಚಿತರು. ಗುಜರಾತಿ ಪದ್ಧತಿಯಂತೆ ಮದುವೆ ಕಾರ್ಯಕ್ರಮ ನೆರವೇರಿದೆ. ಮದುವೆಯ ಸಂಭ್ರಮದಲ್ಲಿ ಅಕ್ಷರ್ ಮತ್ತು ಮೇಹಾ ಪಟೇಲ್ ಸಖತ್ ಸ್ಟೆಪ್ ಹಾಕಿದ್ದು ಅವರ ನೃತ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

suddiyaana