ಭಾರತಕ್ಕೆ ಬಂಗಾರದ ಲಾಟರಿ – ಓಡಿಶಾದಲ್ಲಿ 20 ಟನ್ ಚಿನ್ನ ಪತ್ತೆ
ಗೋಲ್ಡ್ ರೇಟ್ ಕಮ್ಮಿಯಾಗುತ್ತಾ?

ಚಿನ್ನವಿದ್ರೆ ಜೀವನ ಚೆನ್ನಾಗಿರುತ್ತೆ.. ಚಿನ್ನದಿಂದ ದೇಶದ ಆರ್ಥಿಕತೆ ಕೂಡ ಭದ್ರವಾಗಿರುತ್ತೆ.. ಭಾರತದಲ್ಲಿ ಪ್ರತಿಯೊಂದು ಶುಭಕಾರ್ಯದಲ್ಲಿ ಚಿನ್ನವನ್ನ ಬಳಸುತ್ತಾರೆ. ಆದ್ರೆ ಈಗ ಚಿನ್ನವನ್ನ ಖರೀದಿ ಮಾಡೋದೆ ದೊಡ್ಡ ಸವಾಲು. ಅಷ್ಟರ ಮಟ್ಟಿಗೆ ಚಿನ್ನದ ಬೆಲೆ ಗಗನಕ್ಕೇರಿದೆ. ಈಗ ಭಾರತೀಯರು ಖುಷಿ ಪಡೋ ವಿಷ್ಯವೊಂದು ಬಂದಿದೆ. ಒಡಿಶಾದಲ್ಲಿ 20 ಟನ್ ಬಂಗಾರದ ಗಣಿ ಪತ್ತೆಯಾಗಿದ್ದು, ಇದರಿಂದ ಭಾರತದ ಆರ್ಥಿಕತೆಯಲ್ಲಿ ಭಾರಿ ಲಾಭವಾಗುವ ಲಕ್ಷಣ ಎದ್ದು ಕಾಣ್ತಿದೆ. ಹೌದು ಅಮೆರಿಕ, ಚೀನಾ, ರಷ್ಯಾ ದೇಶಗಳಿಗೆ ಪೈಪೋಟಿ ನೀಡುವಂತೆ ಬೆಳೆಯುತ್ತಿರುವ ಭಾರತಕ್ಕೆ ಮತ್ತೊಂದು ಲಾಟ್ರಿ ಹೊಡೆದಿದೆ. ಒಡಿಶಾದಲ್ಲಿ 10 ರಿಂದ 20 ಮೆಟ್ರಿಕ್ ಟನ್ ಬಂಗಾರ ಇರಬಹುದು ಅಂತ ಭಾರತೀಯ ಭೂವಿಜ್ಞಾನ ಸಮೀಕ್ಷೆ ಹೇಳಿದೆ.
ಒಡಿಶಾದ ಥಿಯೋಗರ್ , ಸುಂದರ್‌ಗಢ, ನಬರಂಗಪುರ, ಕಿಯೋಂಜಾರ್, ಅಂಗುಲ್ ಮತ್ತು ಕೋರಾಪುಟ್‌ನಲ್ಲಿ ಬಂಗಾರದ ನಿಕ್ಷೇಪಗಳು ಇರುವುದು ಖಚಿತವಾಗಿದೆ. ಮಲ್ಕಾನ್‌ಗಿರಿ, ಸಂಬಲ್‌ಪುರ ಮತ್ತು ಬೌದ್‌ನಲ್ಲೂ ಬಂಗಾರ ಇದೆಯಾ ಅಂತ ಸಮೀಕ್ಷೆ ನಡೆಯುತ್ತಿದೆ. ಒಡಿಶಾ ಸರ್ಕಾರ, ಒಡಿಶಾ ಮೈನಿಂಗ್ ಕಾರ್ಪೊರೇಷನ್ ಮತ್ತು GSI ಒಟ್ಟಾಗಿ ಈ ಶೋಧನೆಯನ್ನು ವಾಣಿಜ್ಯಿಕವಾಗಿ ಸದುಪಯೋಗಪಡಿಸಿಕೊಳ್ಳಲು ತ್ವರಿತವಾಗಿ ಕೆಲಸ ಮಾಡುತ್ತಿವೆ. ದೇವಗಢ ಜಿಲ್ಲೆಯಲ್ಲಿ ಮೊದಲ ಚಿನ್ನದ ಗಣಿಗಾರಿಕೆ ಬ್ಲಾಕ್ ಅನ್ನು ಹರಾಜಿಗೆ ಸಿದ್ಧಪಡಿಸಲಾಗುತ್ತಿದೆ. G3 ರಿಂದ G2 ಮಟ್ಟದವರೆಗೆ ಡ್ರಿಲಿಂಗ್ ಮತ್ತು ಮಾದರಿ ಪರೀಕ್ಷೆ ನಡೆಯುತ್ತಿದೆ, ಇದರಿಂದ ಭಂಡಾರದ ಗುಣಮಟ್ಟ ಮತ್ತು ಗಣಿಗಾರಿಕೆಯ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
10 ರಿಂದ 20 ಮೆಟ್ರಿಕ್ ಟನ್ ಬಂಗಾರ
ಒಡಿಶಾದಲ್ಲಿ ಎಷ್ಟು ಬಂಗಾರ ಇದೆ ಅಂತ ಇನ್ನೂ ಗೊತ್ತಾಗಿಲ್ಲ. ಆದರೆ 10 ರಿಂದ 20 ಮೆಟ್ರಿಕ್ ಟನ್ ಬಂಗಾರ ಇರಬಹುದು ಅಂತ ಅಂದಾಜಿಸಲಾಗಿದೆ. ಇದರಿಂದ ಭಾರತದ ಬಂಗಾರ ಉತ್ಪಾದನೆ ಹೆಚ್ಚಾಗುತ್ತದೆ. ಭಾರತ ಬಂಗಾರವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ 700 ರಿಂದ 800 ಮೆಟ್ರಿಕ್ ಟನ್ ಬಂಗಾರವನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಕೇವಲ 1.4 ಮೆಟ್ರಿಕ್ ಟನ್ ಬಂಗಾರ ಉತ್ಪಾದನೆಯಾಗುತ್ತದೆ. ಭಾರತದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪದಲ್ಲಿ ಗಣಿಗಾರಿಕೆ ಆರಂಭಗೊಂಡರೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಸ ಆಗಲ್ಲ. ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ನಿರ್ಧಾರವಾಗುತ್ತದೆ. ಭಾರತವೇ ಚಿನ್ನವನ್ನು ಹಲವು ದೇಶಗಳಿಗೆ ರಫ್ತು ಮಾಡುವ ಹಾಗೂ ಅಂತಾರಾಷ್ಟ್ರೀಯ ಚಿನ್ನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದರೆ ಚಿನ್ನದ ಬೆಲೆಯಲ್ಲಿ ಕೆಲ ಬದಲಾವಣೆಯಾಗಬಹುದು.
ಒಡಿಶಾದ ಬಂಗಾರದ ನಿಕ್ಷೇಪದಿಂದ ಭಾರತದ ಬಂಗಾರ ಆಮದು ಕಡಿಮೆಯಾಗದಿದ್ದರೂ, ದೇಶದ ಬಂಗಾರ ಉತ್ಪಾದನೆ ಹೆಚ್ಚಾಗುತ್ತದೆ. ಹೊಸ ಉದ್ಯೋಗಗಳು ಸೃಷ್ಟಿಯಾಗಿ, ಜನರ ಜೀವನ ಮಟ್ಟ ಸುಧಾರಿಸುತ್ತದೆ. ಒಡಿಶಾದ ಆರ್ಥಿಕತೆಗೂ ಬಲ ಬರುತ್ತದೆ. ಭಾರತದ ಬಂಗಾರದ ಸಂಗ್ರಹವೂ ಹೆಚ್ಚಾಗುತ್ತದೆ. ಓಡಿಶಾವು ಕೇವಲ ಕಬ್ಬಿಣದ ಅದಿರು ಮತ್ತು ಬಾಕ್ಸೈಟ್‌ಗೆ ಮಾತ್ರವಲ್ಲ, ಚಿನ್ನದ ಕೇಂದ್ರವಾಗಿಯೂ ಗುರುತಿಸಿಕೊಳ್ಳಬಹುದು. ಈಗಾಗಲೇ ಒಡಿಶಾದಲ್ಲಿ ಭಾರತದ 96% ಕ್ರೋಮೈಟ್, 52% ಬಾಕ್ಸೈಟ್ ಮತ್ತು 33% ಕಬ್ಬಿಣದ ಅದಿರಿನ ಭಂಡಾರವಿದೆ. ಈಗ ಚಿನ್ನದ ಬಂಡಾರ ಸೇರಿದ್ರೆ ಓಡಿಶಾ ಆರ್ಥಿಕತೆಗೆ ಮತ್ತಷ್ಟು ಬಲ ಬರಲಿದೆ. ನ

ನೋಡಿರಿ

