ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ ತನಿಖೆ – 40 ಮೃತದೇಹಗಳ ಮೇಲೆ ಸಣ್ಣ ಗಾಯವೂ ಆಗಿಲ್ಲ!

ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ ತನಿಖೆ – 40 ಮೃತದೇಹಗಳ ಮೇಲೆ ಸಣ್ಣ ಗಾಯವೂ ಆಗಿಲ್ಲ!

278 ಪ್ರಯಾಣಿಕರ ದಾರುಣ ಸಾವು. ಸಾವಿರಕ್ಕೂ ಹೆಚ್ಚು ಜನರ ನರಳಾಟ. ಮಾರಣಹೋಮಕ್ಕೆ ಸಾಕ್ಷಿಯಾದ ಒಡಿಶಾ ರೈಲು ದುರಂತ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಪಘಾತದ ಸುತ್ತ ಷಡ್ಯಂತ್ರದ ವಾಸನೆ ಹರಿದಾಡ್ತಿದೆ. ಜೂನ್ 2 ರಂದು ಸಂಭವಿಸಿದ ಬಾಲಸೋರ್ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.

ಇದನ್ನೂ ಓದಿ : ಊರಿಗೆ ತೆರಳಲು ಬಸ್‌ ಇಲ್ಲವೆಂದು ತಾನೇ ಸರ್ಕಾರಿ ಬಸ್ ಚಲಾಯಿಸಿಕೊಂಡು ಹೋದ ಭೂಪ!

10 ಸದಸ್ಯರ ಸಿಬಿಐ ತಂಡ ಬಾಲಸೋರ್ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಯಾವುದಾರರೂ ಪಿತೂರಿಯಿಂದ ಈ ಘಟನೆ ನಡೆದಿದೆಯೇ ಎಂದು ಮಾಹಿತಿ ಕಲೆ ಹಾಕುತ್ತಿದೆ. ಹಾಗೇ ಕೋರಮಂಡಲ್ ಲೋಕೋ ಪೈಲಟ್ ಹಾಗೂ ಆತನ ಸಹಾಯಕನ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.

ಮತ್ತೊಂದೆಡೆ ಮೃತರ ಪೈಕಿ 40 ಮೃತದೇಹಗಳ ಮೇಲೆ ಸಣ್ಣ ಗಾಯವೂ ಆಗಿಲ್ಲ. ಹೀಗಾಗಿ ಇವುಗಳಲ್ಲಿ ಹೆಚ್ಚಿನ ಸಾವುಗಳು ಬಹುಶಃ ಕರೆಂಟ್ ಶಾಕ್​ನಿಂದ ಸಂಭವಿಸಿರಬಹುದು ಎಂದು ಅನುಮಾನಿಸಲಾಗಿದೆ. 101 ಶವಗಳ ಗುರುತು ಪತ್ತೆಯಾಗದ ಕಾರಣ ಸಂಬಂಧಿಕರ ಹಾಗೂ ಮೃತದೇಹಗಳ ಡಿಎನ್​ಎ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.

suddiyaana