ಒಡಿಶಾದಲ್ಲಿ ಭೀಕರ ರೈಲು ದುರಂತ – ಕರ್ನಾಟಕದ ಎಲ್ಲಾ ಪ್ರಯಾಣಿಕರು ಸೇಫ್

ಒಡಿಶಾದಲ್ಲಿ ಭೀಕರ ರೈಲು ದುರಂತ – ಕರ್ನಾಟಕದ ಎಲ್ಲಾ ಪ್ರಯಾಣಿಕರು ಸೇಫ್

ಬೆಂಗಳೂರು: ಒಡಿಶಾದ ಬಾಲಸೋರ್‌ ಬಳಿ ಶುಕ್ರವಾರ ಭೀರಕ ರೈಲು ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಸಾವಿನ 238 ಕ್ಕೆ ಏರಿಕೆಯಾಗಿದೆ. ಅಪಘಾತಕ್ಕೀಡಾದ ರೈಲಿನಲ್ಲಿದ್ದ ರಾಜ್ಯದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ ರೈಲ್ವೆ ಡಿಐಜಿ ಶಶಿಕುಮಾರ್ ಶನಿವಾರ ತಿಳಿಸಿದ್ದಾರೆ.

ಇದನ್ನೂ ಓದಿ:‌ ಒಡಿಶಾದಲ್ಲಿ ಭೀಕರ ರೈಲು ದುರಂತ – 238 ಜನರು ಸಾವು, 900 ಮಂದಿ ಗಾಯ

ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕುಮಾರ್, ಕರ್ನಾಟಕದಿಂದ ಹೊರಟಿದ್ದ ರೈಲಿಗೆ ಹಾನಿಯಾಗಿದೆ. ರೈಲಿನ 23 ಕೋಚ್‌ಗಳ ಪೈಕಿ ಮೂರು ಬೋಗಿಗಳಿಗೆ ತೊಂದರೆಯಾಗಿದೆ. ಸದ್ಯಕ್ಕೆ ಈ ಬೋಗಿಗಳಲ್ಲಿ ರಾಜ್ಯದ ಯಾವುದೇ ಪ್ರಯಾಣಿಕರು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಪಘಾತದ ನಂತರ ರೈಲ್ವೆ ಅಧಿಕಾರಿಗಳು ಒಡಿಶಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ನಾಲ್ಕು ಸ್ಥಳಗಳಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಮತ್ತು ರಾಜ್ಯದ ಯಾವುದೇ ಪ್ರಯಾಣಿಕರು ಗಾಯಗೊಂಡಿರುವ ಅಥವಾ ಸಾವನ್ನಪ್ಪಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ. ಘಟನೆಯಲ್ಲಿ ಕರ್ನಾಟಕದ ಜನರು ಪ್ರಯಾಣಿಸಿದ ಬೋಗಿಗಳಿಗೆ ಹಾನಿಯಾಗಿಲ್ಲ. ಡಿವೈಎಸ್ಪಿ ಮತ್ತು ಇತರರ ಶ್ರೇಣಿಯ ಅಧಿಕಾರಿಗಳ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ನಾವು ನಾಲ್ಕು ಸಹಾಯ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ ಯಾವುದೇ ಕರೆಗಳನ್ನು ಸ್ವೀಕರಿಸಿಲ್ಲ. ಸುಳ್ಳು ಮಾಹಿತಿ ನೀಡಬಾರದು ಮತ್ತು ಇದುವರೆಗೂ ಕರ್ನಾಟಕದ ಪ್ರಯಾಣಿಕರ ಸಾವಿನ ಸುದ್ದಿ ಬಂದಿಲ್ಲ ಎಂದು ಡಿಐಜಿ ಹೇಳಿದರು.

suddiyaana