ಪಾಕಿಸ್ತಾನಕ್ಕೆ ಭಾರತೀಯ ಸಿಮ್‌ಕಾರ್ಡ್, ಒಟಿಪಿ ಶೇರ್‌ ಮಾಡಿದ್ದು ಯಾರು? ಏನಿದು ಪ್ರಕರಣ?

ಪಾಕಿಸ್ತಾನಕ್ಕೆ ಭಾರತೀಯ ಸಿಮ್‌ಕಾರ್ಡ್, ಒಟಿಪಿ ಶೇರ್‌ ಮಾಡಿದ್ದು ಯಾರು? ಏನಿದು ಪ್ರಕರಣ?

ಭುವನೇಶ್ವರ: ಪಾಕಿಸ್ತಾನದ ಬೇಹುಗಾರಿಕಾ ಏಜೆಂಟರೊಂದಿಗೆ ಸಿಮ್‌ ಕಾರ್ಡ್‌ಗಳು ಹಾಗೂ ಒಟಿಪಿಗಳನ್ನು ಶೇರ್‌ ಮಾಡುತ್ತಿರುವ ಕೃತ್ಯವೊಂದು ಬಯಲಾಗಿದೆ. ಈ ಸಂಬಂಧ ಒಡಿಶಾ ಪೊಲೀಸರ ವಿಶೇಷ ಕಾರ್ಯಪಡೆ ಕಾರ್ಯಾಚರಣೆ ಮಾಡಿ ಮೂವರನ್ನು ಬಂಧಿಸಿದೆ.

ಬಂಧಿತ ಆರೋಪಿಗಳು ಒಡಿಶಾದ ನಯಾಗರ್ ಮತ್ತು ಜಾಜ್‌ಪುರ ಜಿಲ್ಲೆಗೆ ಸೇರಿದವರಾಗಿದ್ದಾರೆ.  ಪಠಾಣಿಸಮಂತ್ ಲೆಂಕಾ (35), ಸರೋಜ್ ಕುಮಾರ್ ನಾಯಕ್ (26) ಮತ್ತು ಸೌಮ್ಯಾ ಪಟ್ಟನಾಯಕ್ (19) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಟ್ರಾಫಿಕ್‌ ಮಧ್ಯೆ ಸಿಲುಕಿದ ಅಮಿತಾಭ್‌ ಬಚ್ಚನ್‌ –‌  ಶೂಟಿಂಗ್‌ ಸ್ಪಾಟ್‌ ಗೆ ತೆರಳಲು ಮಾಡಿದ್ದೇನು ಗೊತ್ತಾ?

ಬಂಧಿತ ಆರೋಪಿಗಳು ವಂಚನೆಯ ಮೂಲಕ ಇತರರ ಹೆಸರಿನಲ್ಲಿ ಅಪಾರ ಸಂಖ್ಯೆಯ ಸಿಮ್‌ಗಳನ್ನು ಪಡೆದುಕೊಂಡಿದ್ದರು. ಅಲ್ಲದೇ ಅದರ ಒಟಿಪಿಗಳನ್ನು ಪಾಕಿಸ್ತಾನದ ಪಿಐಒ ಮತ್ತು ಐಎಸ್‌ಐ ಏಜೆಂಟ್‌ಗಳು ಸೇರಿದಂತೆ ಅನೇಕ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಿ ಏಂಜೆಟ್‌ಗಳು ಅವರಿಗೆ ಹಣವನ್ನು ನೀಡುತ್ತಿದ್ದರು ಎಂದು ವರದಿಯಾಗಿದೆ.

ಬಂಧಿತ ಆರೋಪಿಗಳಿಂದ 19 ಮೊಬೈಲ್ ಫೋನ್‌ಗಳು, 47 ಪ್ರೀ-ಆಕ್ಟಿವೇಟೆಡ್ ಸಿಮ್‌ಕಾರ್ಡ್‌ಗಳು, 61 ಎಟಿಎಮ್ ಕಾರ್ಡ್‌ಗಳು, 21 ಸಿಮ್ ಕವರ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಳೆದ ವರ್ಷ ರಾಜಸ್ಥಾನದಲ್ಲಿ ಅಧಿಕೃತ ರಹಸ್ಯ ಕಾಯಿದೆ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಂಧಿಸಿದ ಮಹಿಳಾ ಪಿಐಒ ಏಜೆಂಟ್ ಜೊತೆಗೆ ಸಂಪರ್ಕದಲ್ಲಿದ್ದರು. ಸಂಗ್ರಹಿಸಿದ ಈ ಸಿಮ್ ಕಾರ್ಡ್‌ಗಳು ಮತ್ತು ಒಟಿಪಿಗಳನ್ನು ಬಳಸಿಕೊಂಡು ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ರಚಿಸಿ ತಮಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿ ಜನರಿಗೆ ವಂಚಿಸುತ್ತಿದ್ದರು. ಇದು ಭಾರತದ ಸಿಮ್ ಆಗಿರುವುದರಿಂದ ಜನರು ಅದನ್ನು ಬಹುಬೇಗ ನಂಬಿಬಿಡುತ್ತಿದ್ದರು. ಆದರೆ ನಿಜಾಂಶವೇನೆಂದರೆ ಅದು ಭಾರತೀಯರ ಹೆಸರಿನಲ್ಲಿದ್ದು, ಪಾಕಿಸ್ತಾನದ ಏಜೆಂಟ್‌ಗಳು ಅದನ್ನು ಕಂಟ್ರೋಲ್ ಮಾಡುತ್ತಾರೆ ಎಂದು ತನಿಖೆ ವೇಳೆ ಬಯಲಾಗಿದೆ.

suddiyaana