ಒಡಿಶಾ ಸಚಿವರನ್ನ ಹತ್ಯೆಗೈದ ASI ಮಾನಸಿಕ ಅಸ್ವಸ್ಥ – ರಿವಾಲ್ವರ್ ನೀಡಿದ್ದರ ಹಿಂದೆ ಹಲವು ಅನುಮಾನ! 

ಒಡಿಶಾ ಸಚಿವರನ್ನ ಹತ್ಯೆಗೈದ ASI ಮಾನಸಿಕ ಅಸ್ವಸ್ಥ – ರಿವಾಲ್ವರ್ ನೀಡಿದ್ದರ ಹಿಂದೆ ಹಲವು ಅನುಮಾನ! 

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಸಚಿವರನ್ನ ಹತ್ಯೆ ಮಾಡಿದ ಎಎಸ್​ಐ ಗೋಪಾಲಕೃಷ್ಣ ಮೊದಲೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.

ಇದನ್ನೂ ಓದಿ : ‘ಸಿಡಿ ಸೂತ್ರದಾರನೇ ಡಿಕೆಶಿ.. ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ’ – ರಮೇಶ್ ಜಾರಕಿಹೊಳಿ ನೇರಾನೇರ ಬಾಂಬ್..!

ಒಡಿಶಾದ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್​ನ ಗಾಂಧಿ ಚೌಕ ಎಂಬಲ್ಲಿ ಭಾನುವಾರ ಮಧ್ಯಾಹ್ನ 12:30ಕ್ಕೆ ಸಚಿವ ನಬಾ ಕಿಶೋರ್ ದಾಸ್​​ ಮೇಲೆ  ಎಎಸ್​ಐ ಗೋಪಾಲ ದಾಸ್  ಗುಂಡು ಹಾರಿಸಿದ್ದರು. ಎದೆ ಭಾಗಕ್ಕೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಸಚಿವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಚಿವರು ಕೊನೆಯುಸಿರೆಳೆದಿದ್ದರು.

ಬಿಜು ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದಲ್ಲಿ ನಬಾ ಕಿಶೋರ್ ದಾಸ್ ಪ್ರಬಲ ಸಚಿವರಾಗಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಕಾರಿನಿಂದ ಕೆಳಗಿಳಿಯುವಾಗ ಗುಂಡು ಹಾರಿಸಲಾಗಿತ್ತು. ನಬಾ ದಾಸ್ ಎದೆಗೆ ಎರಡು ಗುಂಡುಗಳು ಹೊಕ್ಕಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿ ಎಎಸ್​ಐ ಮಾನಸಿಕ ಅಸ್ವಸ್ಥತೆ ಕಳೆದುಕೊಂಡಿದ್ದಾರೆ ಎನ್ನುವುದು ಗೊತ್ತಾಗಿದೆ. ಎಂಕೆಸಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಬೆರ್ಹಾಂಪುರ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ತ್ರಿಪಾಠಿ ಅವರು ದಾಸ್ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವರ ಹತ್ಯೆ ಹಿನ್ನೆಲೆಯಲ್ಲಿ ಒಡಿಶಾದಲ್ಲಿ 3 ದಿನ ಶೋಕಾಚರಣೆ ಘೋಷಿಸಲಾಗಿದೆ. ಹಾಗೇ ಸರ್ಕಾರದ ಕಾರ್ಯಕ್ರಮಗಳನ್ನ ರದ್ದುಗೊಳಿಸಲಾಗಿದೆ. ಆದರೆ ಆರೋಗ್ಯ ಸಚಿವರಿಗೆ ಗುಂಡಿಕ್ಕಿ ಕೊಲೆ ಮಾಡಿದ ಗೋಪಾಲಕೃಷ್ಣ  ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರೂ ಅವರಿಗೆ ಹೇಗೆ ರಿವಾಲ್ವರ್ ನೀಡಲಾಗಿತ್ತು. ಹಾಗೇ ಬ್ರಜರಾಜನಗರದ ಪೊಲೀಸ್ ಪೋಸ್ಟ್​ನ ಉಸ್ತುವಾರಿಯಾಗಿ ನೇಮಿಸಲಾಯಿತು ಎಂಬುದು ಕೂಡ ಅನುಮಾನ ಮೂಡಿಸಿದೆ.

suddiyaana